ಭಾರತದ ಅಧಿಕಾರಿಗೆ ಲಂಚ ನೀಡುವ ಪ್ರಕರಣದಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧ ಬಂಧನ ಆದೇಶ ಕುರಿತು ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಬಹಿರಂಗ ಹೇಳಿಕೆ ನೀಡಿದೆ.

ಗೌತಮ್ ಅದಾನಿ ಬಂಧನ ಕುರಿತು ಅಮೆರಿಕದಿಂದ ಇದುವರೆಗೆ ಯಾವುದೇ ಮನವಿ ಅಥವಾ ಪ್ರಸ್ತಾಪ ಬಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಕೇಂದ್ರ ವಿದೇಶಾಂಗ ಸಚಿವಾಲಯ ಶುಕ್ರವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಕೈಗಾರಿಕೋದ್ಯಮಿಗಳ ವಿರುದ್ಧ ವಿದೇಶಗಳಲ್ಲಿ ನಡೆಯುವ ಕಾನೂನು ಹೋರಾಟಗಳಿಗೆ ಕೇಂದ್ರ ಸರ್ಕಾರ ಯಾವುದೇ ಪಾತ್ರ ವಹಿಸುವುದಿಲ್ಲ ಎಂದು ಹೇಳಿದೆ.

ಗೌತಮ್ ಅದಾನಿ ವಿರುದ್ಧದ ಪ್ರಕರಣದಲ್ಲಿ ಕೈಗಾರಿಕೆ, ವೈಯಕ್ತಿಕ ಮತ್ತು ಸಂಬಂಧಪಟ್ಟ ಸರ್ಕಾರದ್ದಾಗಿದ್ದೆ. ಇದರಲ್ಲಿ ಭಾರತದ ಪಾತ್ರ ಯಾವುದೂ ಇಲ್ಲ. ಅಮೆರಿಕದಿಂದ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದ ಕುರಿತು ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಭಾರತದೊಳಗೆ ಗಡಿಪಾರು ಸೇರಿದಂತೆ ಯಾವುದೇ  ಕಾನೂನು ಹೋರಾಟ ಇದ್ದರೆ ಅದಕ್ಕೆ ಸರ್ಕಾರ ತಕ್ಷಣವೇ ಸ್ಪಂದಿಸಲಿದೆ. ಆದರೆ ಇದು ಭಾರತದ ಹೊರಗೆ ಆಗಿರುವ ಘಟನೆ. ಸಂಬಂಧಪಟ್ಟ ದೇಶದ ಅಧಿಕಾರಿಗಳಿಂದ ಮಾಹಿತಿ ಅಥವಾ ಮನವಿ ಬಾರದೇ ನಾವು ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.