Monday, 16 November 2026 — Kannadavahini
BREAKING NEWS
ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ರಾಜ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ: ಪ್ರಹ್ಲಾದ್ ಜೋಷಿ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ರಾಜ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ: ಪ್ರಹ್ಲಾದ್ ಜೋಷಿ
ಕಾನೂನು

ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 16 ವೀಕ್ಷಣೆಗಳು
bilkins banu

ನವದೆಹಲಿ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 11 ಅಪರಾಧಿಗಳ ಪೈಕಿ ಇಬ್ಬರ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿ ಜಾಮೀನು ಮಂಜೂರು ಮಾಡಿದೆ.

ನ್ಯಾಯಮೂರ್ತಿಎಂ.ಎಂ. ಸುಂದರೇಶ್ ಮತ್ತು ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಸೋಮವಾರ ಈ ಮಹತ್ವದ ಆದೇಶ ಹೊರಡಿಸಿದ್ದು, 17 ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿದ್ದ ಅಪರಾಧಿಗಳಾದ ಬಿಪಿನ್ ಚಂದ್ರ ಜೋಶಿ ಮತ್ತು ಪ್ರದೀಪ್ ಮೊರ್ಡಿಯಾ ಅವರಿಗೆ ಜಾಮೀನು ಮಂಜೂರು ಮಾಡಿದೆ.

ಅಕ್ಟೋಬರ್ 28ರಂದು ಹೊರಡಿಸಿದ ಆದೇಶದಲ್ಲಿ, ಮೇಲ್ಮನವಿಗಳ ವಿಚಾರಣೆ ಬಾಕಿ ಇದ್ದು, ಪ್ರಕರಣದಲ್ಲಿ ವಾಸ್ತವಾಂಶ ಮತ್ತು ಕಾನೂನಿಗೆ ಸಂಬಂಧಿಸಿದ ಹಲವು ಅಂಶಗಳನ್ನು ಪರಿಶೀಲಿಸಬೇಕಿದೆ ಎಂದು ಪೀಠ ತಿಳಿಸಿದೆ. ಅಲ್ಲದೆ, ಇಬ್ಬರು ಆರೋಪಿಗಳ ಪೈಕಿ ಒಬ್ಬರು ತೀವ್ರ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ ಎಂಬ ಅಂಶವನ್ನೂ ಉಲ್ಲೇಖಿಸಿದೆ.

ಅಪರಾಧಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ದಾರ್ಥ್ ಲೂತ್ರಾ, ಇಬ್ಬರೂ 17 ವರ್ಷಗಳಿಗೂ ಹೆಚ್ಚು ಜೈಲು ಶಿಕ್ಷೆ ಅನುಭವಿಸಿದ್ದಾರೆ ಎಂದು ತಿಳಿಸಿದರು. ಅವರಲ್ಲಿ ಒಬ್ಬರ ಹೆಸರನ್ನು ಆರಂಭದಲ್ಲಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರಲಿಲ್ಲ. ಗಲಭೆ ನಡೆದು ಸುಮಾರು ಮೂರು ವರ್ಷಗಳ ಬಳಿಕ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ವಾದಿಸಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜಾ ಠಾಕ್ರೆ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ಸಂಬಂಧಿತ ಸಾಕ್ಷಾಧಾರಗಳನ್ನು ಪರಿಶೀಲಿಸಿವೆ ಎಂದು ಹೇಳಿದರು.

2002ರಲ್ಲಿ ಗೋಧ್ರಾ ರೈಲು ದುರಂತದ ಬಳಿಕ ಗುಜರಾತ್‌ನಲ್ಲಿ ಭೀಕರ ಕೋಮು ಗಲಭೆಗಳು ಭುಗಿಲೆದ್ದಿದ್ದವು. ಈ ಸಂದರ್ಭದಲ್ಲಿ ಹಿಂಸಾಚಾರದಿಂದ ಪಾರಾಗಲು ಯತ್ನಿಸುತ್ತಿದ್ದ ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಆಗ ಅವರು ಐದು ತಿಂಗಳ ಗರ್ಭಿಣಿಯಾಗಿದ್ದರು. ಅಲ್ಲದೆ, ಅವರ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಲಾಗಿತ್ತು.

2024ರಲ್ಲಿ ಗುಜರಾತ್ ಸರ್ಕಾರವು ಸನ್ನಡತೆಯ ಆಧಾರದ ಮೇಲೆ ಎಲ್ಲ 11 ಅಪರಾಧಿಗಳನ್ನು ಬಿಡುಗಡೆ ಮಾಡಿತ್ತು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ, ಅಪರಾಧಿಗಳ ಬಿಡುಗಡೆಗೆ ಸಂಬಂಧಿಸಿದ ಗುಜರಾತ್ ಸರ್ಕಾರದ ಆದೇಶವನ್ನು ರದ್ದುಗೊಳಿಸಿತ್ತು.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8417 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment