Thursday, December 25, 2025
Google search engine
Homeಜ್ಯೋತಿಷ್ಯBaba Vanga prediction: 2025ರಲ್ಲಿ ದುರಂತಗಳ ಸರಮಾಲೆ ನಡೆಯಲಿದೆ: ಬಾಬಾ ವಂಗಾ ಸ್ಫೋಟಕ ಭವಿಷ್ಯ

Baba Vanga prediction: 2025ರಲ್ಲಿ ದುರಂತಗಳ ಸರಮಾಲೆ ನಡೆಯಲಿದೆ: ಬಾಬಾ ವಂಗಾ ಸ್ಫೋಟಕ ಭವಿಷ್ಯ

ಜಾಗತಿಕ ಮಟ್ಟದಲ್ಲಿ ನಿಖರ ಭವಿಷ್ಯ ಹೇಳಿರುವ ನಾಸ್ಟ್ರಾಡಾಮಸ್ ಗೆ ಹೋಲಿಕೆ ಮಾಡಲಾಗುವ ಬಲ್ಗೇರಿಯಾದ ಅಂಧ ಬಾಂಬಾ ವಂಗಾ 2025ನೇ ವರ್ಷದಲ್ಲಿ ನಡೆಯುವ ಘಟನಾವಳಿಗಳ ಬಗ್ಗೆ ನೀಡಿರುವ ಭವಿಷ್ಯ ಭಾರೀ ಸದ್ದು ಮಾಡುತ್ತಿದೆ.

ಬಾಲ್ಯದಲ್ಲೇ ಕಣ್ಣು ಕಳೆದುಕೊಂಡರೂ ಬಾಂಬಾ ವಂಗಾ ಅತೀಂದ್ರೀಯ ಶಕ್ತಿಗಳ ಮೂಲಕ ನೀಡಿದ ಪ್ರಮುಖ ಭವಿಷ್ಯಗಳು ನಿಜವಾಗಿದ್ದು, ಅಮೆರಿಕದ ಮೇಲೆ ಅಲ್ ಖೈದಾ ಉಗ್ರರು ನಡೆಸಿದ್ದ 9/11 ದಾಳಿ ಹಾಗೂ ಬ್ರಿಟನ್ ರಾಣಿ ಡಯಾನಾ ಅವರ ದುರಂತಗಳ ಕುರಿತು ನೀಡಿದ್ದ ಭವಿಷ್ಯಗಳು ನಿಜವಾಗಿವೆ.

ಇದೀಗ 2025 ವರ್ಷದಲ್ಲಿ ನಡೆಯುವ ಘಟನಾವಳಿಗಳ ಕುರಿತು ಬಾಬಾ ವಂಗಾ ನುಡಿದ ಭವಿಷ್ಯ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ವರ್ಷ ಅಂದರೆ 2025ರಲ್ಲಿ ದುರಂತಗಳ ಸರಮಾಲೆಗಳೇ ನಡೆಯಲಿದ್ದು, ಮಾನವೀಯತೆ ಸಂಪೂರ್ಣ ನಾಶವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

2025ರ ಕುರಿತ ಬಾಬಾ ವಂಗಾ ನುಡಿದ 5 ಪ್ರಮುಖ ಭವಿಷ್ಯಗಳು

 ಯುರೋಪ್ ನಲ್ಲಿ ಆಂತರಿಕ ಕಲಹ

ಯುರೋಪ್ ತೀವ್ರವಾದ ಆಂತರಿಕ ಕಲಹವನ್ನು ಅನುಭವಿಸಬಹುದು, ಇದು ಜನಸಂಖ್ಯೆ ಮತ್ತು ಪ್ರಾದೇಶಿಕ ವಿನಾಶಕ್ಕೆ ಕಾರಣವಾಗಬಹುದಾಗಿದೆ. ಆಂತರಿಕ ಸಂಘರ್ಷ ಮತ್ತು ಅದರ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಸಮಸ್ಯೆಗಳನ್ನು ಜಾಗತಿಕ ಮಟ್ಟದಲ್ಲಿ ಸೃಷ್ಟಿಸುವ ಸಾಧ್ಯತೆ ಇದೆ.

ವೈದ್ಯಕೀಯ ವಿಜ್ಞಾನದಲ್ಲಿ ಪ್ರಗತಿ

ವೈದ್ಯಕೀಯ ವಿಜ್ಞಾನದಲ್ಲಿ ಕ್ರಾಂತಿಕಾರಿ ಬೆಳವಣಿಗೆಗಳನ್ನು ನಿರೀಕ್ಷಿಸಬಹುದಾಗಿದೆ. ಉದಾಹರಣೆಗೆ ಲ್ಯಾಬ್‌ನಲ್ಲಿ ಉತ್ಪತ್ತಿಯಾಗುವ ಅಂಗಗಳು, ಕ್ಯಾನ್ಸರ್ ಮುಂತಾದ ಪ್ರಮುಖ ಕಾಯಿಲೆಗಳಿಗೆ ಔಷಧ ಹಾಗೂ ಮಾನವರ ಜೀವಿತಾವಧಿ ಹೆಚ್ಚಿಸುವ ಕುರಿತು ಪ್ರಮುಖ ಸಾಧನೆ ಕಂಡುಬರಲಿದೆ.

ಟೆಲಿಪತಿಯ ಅಭಿವೃದ್ಧಿ

ಮಾನವರು ಎಷ್ಟೇ ದೂರದಲ್ಲಿದ್ದರೂ ಯಾವುದೇ ಸಾಧನಗಳಲ್ಲಿದೇ ಸಂವಹನ ನಡೆಸುವ ಟೆಲಿಪಥಿಕ್ ಆಗಿ ಬದಲಾಗಲಿದ್ದಾರೆ. ಇದು ಜನರು ಪರಸ್ಪರ ಸಂವಹನ ನಡೆಸುವ ಪದ್ಧತಿ ಅಳಿಸಿಹಾಕುವ ಸಾಧ್ಯತೆ ಇದೆ.

ಅನ್ಯಗ್ರಹಗಳ ಸಂಕೇತಗಳ ಸಂಪರ್ಕ

ಅನ್ಯಗ್ರಹ ಜೀವನದ ಸಂಪರ್ಕಕ್ಕೆ ಬರುವ ಅಥವಾ ಅನ್ಯಗ್ರಹ ಜೀವಿಗಳಂತಹ ಭೂಮ್ಯತೀತ ಘಟನೆಗಳಿಗೆ ಸಂಪರ್ಕ ಹೊಂದಿದ ಅನುಭವಗಳ ಮೂಲಕ ಹೋಗುವ ನಿರೀಕ್ಷೆಯನ್ನು ಸೂಚಿಸಿದ್ದಾರೆ.

ದುರಂತಗಳ ಸರಮಾಲೆ

ದುರಂತಗಳ ಸರಮಾಲೆ ಪ್ರಾರಂಭವಾಗಬಹುದು. ಇದನ್ನು “ಅಪೋಕ್ಯಾಲಿಪ್ಸ್ ಆರಂಭ” ಎಂದು ಬಣ್ಣಿಸಿರುವ ಬಾಬಾ ವಂಗಾ, ಮಾನವೀಯತೆ ಸಂಪೂರ್ಣವಾಗಿ ನಿರ್ನಾಮವಾಗದಿದ್ದರೂ ಸಹ, ಈ ಸಮಯದ ಚೌಕಟ್ಟು ತೊಂದರೆಗಳನ್ನು ಸೂಚಿಸಬಹುದು ಅದು ಅಂತಿಮವಾಗಿ ವಿಶ್ವಾದ್ಯಂತ ಬದಲಾವಣೆಗಳನ್ನು ಉಂಟುಮಾಡುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments