ಪತ್ನಿ ತನ್ನ ವಿರುದ್ಧ ಪೊಲೀಸ್ ಕೇಸು ದಾಖಲಿಸಿದ್ದರಿಂದ ನೊಂದ ಪತಿ ಬೆಂಗಳೂರಿನಲ್ಲಿ ‘ಜಸ್ಟೀಸ್ ಟು ಡ್ಯೂ’ [ನ್ಯಾಯ ನೆನೆಗುದಿಗೆ] ಎಂದು ಬೋರ್ಡ್ ನೇತಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಮರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಪತ್ನಿ ತನ್ನ ವಿರುದ್ಧ ಕೇಸು ದಾಖಲಿಸಿದ್ದರಿಂದ ನೊಂದ ಅತುಲ್, 49 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೇ ಕುತ್ತಿಗೆ ಜಸ್ಟಿಸ್ ಟು ಡ್ಯೂ ಎಂದು ಬೋರ್ಡ್ ನೇತಾಕಿಕೊಂಡಿದ್ದಾರೆ.
ಎನ್ ಜಿಒಗೆ ವಾಟ್ಸಪ್ ಗ್ರೂಪ್ ನಲ್ಲಿ ಭಾನುವಾರ ತಡರಾತ್ರಿ ಮೆಸೇಜ್ ಹಾಕಿರುವ ಅತುಲ್ ಸುಭಾಷ್, ಸಾಧ್ಯವಾದರೆ ನನ್ನ ಕುಟುಂಬಕ್ಕೆ ನೆರವಾಗಿ ಎಂದು ಮನವಿ ಮಾಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ಕಬೋರ್ಟ್ ಬಳಿ ಡೆತ್ ನೋಟ್ ಹಾಗೂ ಕೀಗಳನ್ನು ಇಟ್ಟಿದ್ದು, ಮನೆಯ ಕೀ ಯಾವುದು ಕೀ ಬೋರ್ಡ್ ಯಾವುದು? ಎಲ್ಲೇಲ್ಲಿ ಏನೇನಿದೆ? ಏನು ಮಾಡಬೇಕಿತ್ತು? ಯಾವ ಕೆಲಸಗಳು ಬಾಕಿ ವೆ ಎಂದೆಲ್ಲಾ ಸಂಪೂರ್ಣ ವಿವರಗಳನ್ನು ಬರೆದಿಟ್ಟಿದ್ದಾರೆ.
ಮಾರತ್ತಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.