ಮೊಬೈಲ್ ಆಪ್ ಮೂಲಕ ಆರ್ಡರ್ ಮಾಡಿದ್ದ ಚಾಕೋಲೇಟ್ ಐಸ್ ಕ್ರೀಂ ನೀಡದ ಕಾರಣ ಸ್ವಿಗ್ಗಿಗೆ ಬೆಂಗಳೂರಿನ ಗ್ರಾಹಕರ ವೇದಿಕೆ 5000 ರೂ. ದಂಡ ವಿಧಿಸಿದೆ.
ಫುಡ್ ಆರ್ಡರ್ ಡೆಲಿವರಿ ಕಂಪನಿಯಾದ ಸ್ವಿಗ್ಗಿಗೆ 3000 ರೂ. ಪರಿಹಾರ ಹಾಗೂ 2000 ರೂ. ನ್ಯಾಯಾಲದ ವೆಚ್ಚ ಸೇರಿದಂತೆ 5000 ರೂ. ದಂಡ ವಿಧಿಸಲಾಗಿದೆ.
ಬೆಂಗಳೂರಿನಲ್ಲಿ 2023 ಜನವರಿಯಲ್ಲಿ ಮಹಿಳೆಯೊಬ್ಬರ ಡೆತ್ ಚಾಕೋಲೆಟ್ ಐಸ್ ಕ್ರೀಂ ಆರ್ಡರ್ ಮಾಡಿದ್ದರು. ಆರ್ಡರ್ ಪಡೆದಿದ್ದ ಡೆಲಿವರಿ ಬಾಯ್ ಹೋಟೆಲ್ ನಿಂದ ಪಡೆದಿದ್ದರೂ ಅದು ತಲುಪಿಲ್ಲ. ಆದರೆ ಆಪ್ ಪರಿಶೀಲಿಸಿದಾಗ ಡೆಲಿವರಿ ಆಗಿದೆ ಎಂದು ದಾಖಲಾಗಿತ್ತು.
ಆರ್ಡರ್ ಮಾಡಿದ ಚಾಕೋಲೇಟ್ ಐಸ್ ಕ್ರೀಂ ಬಾರದ ಕಾರಣ ನೀಡಿದ ಹಣ ವಾಪಸ್ ಮಾಡುವಂತೆ ಮಹಿಳೆ ಸ್ವಿಗ್ಗಿ ಕಂಪನಿಗೆ ಮನವಿ ಮಾಡಿದ್ದಾರೆ. ಆದರೆ ಸ್ವಿಗ್ಗಿ ಈ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಗ್ರಾಹಕರ ವೇದಿಕೆ ಮೆಟ್ಟಿಲೇರಿದ್ದಾರೆ.