Home ಅಪರಾಧ ಎಕೆ 56 ಸೇರಿ ಅಪಾರ ಪ್ರಮಾಣದ ನಕ್ಸಲರ ಶಸ್ತ್ರಾಸ್ತ್ರ ಅರಣ್ಯದಲ್ಲಿ ಪತ್ತೆ

ಎಕೆ 56 ಸೇರಿ ಅಪಾರ ಪ್ರಮಾಣದ ನಕ್ಸಲರ ಶಸ್ತ್ರಾಸ್ತ್ರ ಅರಣ್ಯದಲ್ಲಿ ಪತ್ತೆ

ಜಯಪುರ ಪೊಲೀಸ್ ಠಾಣೆಯಲ್ಲಿ 25(1ಬಿ), 7 ಮತ್ತು 25(1ಎ) ಶಸಾ್ತ್ರಸ್ತ್ರ ಕಾಯ್ದೆ 1959ರಡಿ ಪ್ರಕರಣ ದಾಖಲಾಗಿದ್ದು, ನಕ್ಸಲರು ಶರಣಾದರೂ ಸರ್ಕಾರಕ್ಕೆ ಒಪ್ಪಿಸದ ಶಸ್ತ್ರಾಸ್ತ್ರಗಳನ್ನು ಕಾಡಿನಲ್ಲಿ ಪರಿಶೀಲನೆ ನಡೆಸಲಾಗಿತ್ತು.

by Editor
0 comments
naxal

ಕೆಲವು ದಿನಗಳ ಹಿಂದೆ ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಿದ್ದ 6 ನಕ್ಸಲರು ಬಳಸುತ್ತಿದ್ದ ಶಸ್ತ್ರಾಸ್ತ್ರಗಳು ಚಿಕ್ಕಮಗಳೂರಿನ ದಟ್ಟ ಅರಣ್ಯದಲ್ಲಿ ಪತ್ತೆಯಾಗಿವೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮೇಗೂರು ಅರಣ್ಯದಲ್ಲಿ ಗುಂಡಿಯಲ್ಲಿ ಮುಚ್ಚಿಡಲಾಗಿದ್ದ 1 ಎಕೆ 56, ಮೂರು 303 ರೈಫಲ್, 12 ಕಂಟ್ರಿ ಮೇಡ್, (ದೇಶಿನಿರ್ಮಿತ) 1 ಪಿಸ್ತೂಲ್ ಸೇರಿದಂತೆ ಹಲವು ಬಂದೂಕುಗಳು ಅಲ್ಲದೇ ಹನ್ನೊಂದು 7.62 ಎಂಎಂ ಎಕೆ ಮದ್ದು ಗುಂಡುಗಳು, 303 ಬಂದೂಕಿನ 133 ಗುಂಡುಗಳು ಸೇರಿದಂತೆ 176 ಜೀವಂತ ಗುಂಡುಗಳು ಪತ್ತೆಯಾಗಿವೆ.

ಜಯಪುರ ಪೊಲೀಸ್ ಠಾಣೆಯಲ್ಲಿ 25(1ಬಿ), 7 ಮತ್ತು 25(1ಎ) ಶಸಾ್ತ್ರಸ್ತ್ರ ಕಾಯ್ದೆ 1959ರಡಿ ಪ್ರಕರಣ ದಾಖಲಾಗಿದ್ದು, ನಕ್ಸಲರು ಶರಣಾದರೂ ಸರ್ಕಾರಕ್ಕೆ ಒಪ್ಪಿಸದ ಶಸ್ತ್ರಾಸ್ತ್ರಗಳನ್ನು ಕಾಡಿನಲ್ಲಿ ಪರಿಶೀಲನೆ ನಡೆಸಲಾಗಿತ್ತು.

ಕೊಪ್ಪ ಠಾಣೆ ಇನ್ಸ್ ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಎರಡು ದಿನಗಳಿಂದ ಹುಡುಕಾಟ ನಡೆಸಿ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿದೆ.

banner

ಕೆಲವು ದಿನಗಳ ಮುನ್ನ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶರಣಾಗಿದ್ದ 6 ನಕ್ಸಲರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೂಡಿಸಿದ್ದ ಸಾಕಷ್ಟು ಅನುಮಾನಗಳಿಗೆ ತೆರೆ ಬಿದ್ದಂತಾಗಿದೆ.

ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ನಕಲ್ಸರ ಶಸ್ತ್ರಾಸ್ತ್ರಗಳ ಬಗ್ಗೆ ಅನುಮಾನ ಮೂಡಿತ್ತು. ಆದರೆ ಶಸ್ತ್ರಾಸ್ತ್ರಗಳು ವಶಕ್ಕೆ ನೀಡದೇ ಇದ್ದರೂ ಅದು ಎಲ್ಲಿದೆ ಎಂಬ ಮಾಹಿತಿ ಪೊಲೀಸರಿಗೆ ಇದೆ. ಶೀಘ್ರದಲ್ಲೇ ಪತ್ತೆ ಹಚ್ಚಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಹೆರಿಗೆ ವೇಳೆ ಎಣ್ಣೆ ಹೊಡೆಯಲು ಹೋದ ವೈದ್ಯರಿಗೆ 11.42 ಕೋಟಿ ರೂ. ದಂಡ! BBMP ಅತೀ ಹೆಚ್ಚು ಆಸ್ತಿ ಬಾಕಿ ಉಳಿಸಿಕೊಂಡ 830 ವಸತಿಯೇತರ ಕಟ್ಟಡಗಳಿಗೆ ಬೀಗ ಬಾಲಿವುಡ್ ಹಿರಿಯ ನಟ ಟಿಕುಗೆ ಹೃದಯಾಘಾತ; ಸ್ಥಿತಿ ಗಂಭೀರ ಲಾಸ್ ಏಂಜಲೀಸ್ ಕಾಡ್ಗಿಚ್ಚಿಗೆ 150 ಶತಕೋಟಿ ಡಾಲರ್ ನಷ್ಟ: ತುರ್ತು ಪರಿಸ್ಥಿತಿ ಘೋಷಣೆ ದೇಶಾದ್ಯಂತ ಜಲಮಾರ್ಗಗಳ ಅಭಿವೃದ್ದಿಗೆ 50 ಸಾವಿರ ಕೋಟಿ ಹೂಡಿಕೆಗೆ ಐಡಬ್ಲ್ಯೂಡಿಸಿ ನಿರ್ಧಾರ ಪ್ರೇಯಸಿಯ ಕೊಂದು 8 ತಿಂಗಳಿಂದ ಫ್ರಿಡ್ಜ್ ನಲ್ಲಿ ಶವ ಇರಿಸಿದ್ದ ವಿವಾಹಿತ! ಸಮಾಜ ನಮ್ಮ ಪ್ರೀತಿಒಪ್ಪಲ್ಲ: ಬೆಂಗಳೂರಿನಲ್ಲಿ ನಿನ್ನೆ ಪ್ರಿಯಕರ, ಇಂದು ಪ್ರೇಯಸಿ ಆತ್ಮಹತ್ಯೆ! ಹೆಂಡತಿ ಮುಖ ಎಷ್ಟೊತ್ತು ನೋಡಲು ಸಾಧ್ಯ? ಹೇಳಿಕೆಗೆ ನಟಿ ದೀಪಿಕಾ ಪಡುಕೋಣೆ ತರಾಟೆ ಬಂಗಾಳದಲ್ಲಿ ಕೈಕೊಟ್ಟ ಬಿಜೆಪಿ ಸದಸ್ಯತ್ವ ಅಭಿಯಾನ: ಬಿಜೆಪಿ ತೊರೆದ ಶೇ.40 ಮಂದಿ! ಎಕೆ 56 ಸೇರಿ ಅಪಾರ ಪ್ರಮಾಣದ ನಕ್ಸಲರ ಶಸ್ತ್ರಾಸ್ತ್ರ ಅರಣ್ಯದಲ್ಲಿ ಪತ್ತೆ