Home ಜಿಲ್ಲಾ ಸುದ್ದಿ ಚಾಮರಾಜನಗರ: ರಸ್ತೆ ಮಧ್ಯೆ ನೇತಾಡುತ್ತಿದ್ದ ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ಇಬ್ಬರು ರೈತರ ದುರ್ಮರಣ

ಚಾಮರಾಜನಗರ: ರಸ್ತೆ ಮಧ್ಯೆ ನೇತಾಡುತ್ತಿದ್ದ ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ಇಬ್ಬರು ರೈತರ ದುರ್ಮರಣ

by Editor
0 comments
farmers

ರಸ್ತೆ ಮಧ್ಯೆ ನೇತಾಡುತ್ತಿದ್ದ ವಿದ್ಯುತ್ ತಂತಿ ತಗುಲಿ ಇಬ್ಬರು ರೈತರು ಮೃತಪಟ್ಟಿರುವ ಆಘಾತಕಾರಿ ಘಟನೆ ಚಾಮರಾಜನಗರದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚಾಮರಾಜನಗರ ತಾಲೂಕಿನ ಅಯ್ಯನಪುರ ಗ್ರಾಮದ ನಾಗೇಂದ್ರ ಹಾಗೂ ಮಲ್ಲೇಶ್ ಮೃತಪಟ್ಟಿದ್ದಾರೆ.

ರಾತ್ರಿ ಊಟ ಮಾಡಿ ಬೈಕ್‌ ನಲ್ಲಿ ಜಮೀನಿಗೆ ತೆರಳಿದ್ದ ನಾಗೇಂದ್ರ ಮತ್ತು ಮಲ್ಲೇಶ್ ಮನೆಗೆ ಮರಳುತ್ತಿದ್ದಾಗ ರಸ್ತೆ ಮಧ್ಯೆ ಜೋತು ಬಿದ್ದಿದ್ದ ತುಂಡಾಗಿ ರಸ್ತೆ ಮಧ್ಯೆ ನೇತಾಡುತ್ತಿದ್ದ ವಿದ್ಯುತ್ ತಂತಿ ಕುತ್ತಿಗೆ ಸಿಲುಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಾತ್ರಿ ಈ ಘಟನೆ ಸಂಭವಿಸಿದ್ದರೂ ಯಾರ ಗಮನಕ್ಕೂ ಬಂದಿರಲಿಲ್ಲ. ಶುಕ್ರವಾರ ಬೆಳಿಗ್ಗೆ ಹೊಲಗದ್ದೆಗಳಿಗೆ ತೆರಳಲು ಬಂದ ಗ್ರಾಮದ ರೈತರಿಗೆ ರಸ್ತೆ ಮಧ್ಯೆ ವಿದ್ಯುತ್ ತಂತಿಗೆ ಸಿಲುಕಿ ಇವರಿಬ್ಬರು ಸಿಲುಕಿ ಮೃತಪಟ್ಟಿರುವುದು ನೋಡಿದ್ದಾರೆ.

banner

ವಿದ್ಯುತ್ ತಂತಿಗಳು ಸಡಿಲಗೊಂಡಿದ್ದು, ರಾತ್ರಿ ಗಾಳಿ ಮಳೆಯ ಪರಿಣಾಮ ವಿದ್ಯುತ್ ತಂತಿ ತುಂಡಾಗಿ ರಸ್ತೆ ಮಧ್ಯದಲ್ಲಿಯೇ ಜೋತು ಬಿದ್ದಿತ್ತು. ಜಮೀನಿನಿಂದ ಬೈಕ್‌ನಲ್ಲಿ ವಾಪಸ್ ಬರುತ್ತಿದ್ದಾಗ ಜೋತು ಬಿದ್ದ ವಿದ್ಯುತ್ ತಂತಿಗೆ ರೈತರ ಕುತ್ತಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಷಯ ತಿಳಿದ ಅಕ್ಕಪಕ್ಕದ ಗ್ರಾಮಗಳ ರೈತರು, ರೈತ ಸಂಘದ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಚೆಸ್ಕಾಂ ವಿರುದ್ಧ ಪ್ರತಿಭಟನೆ ನಡೆಸಿದರು. ಸರಿಯಾಗಿ ವಿದ್ಯುತ್ ತಂತಿಗಳ ನಿರ್ವಹಣೆ ಮಾಡದೇ ಇರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಹರಿಹಾಯ್ದಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಬೀಡಾಡಿ ಹಸುಗಳ ಕುತ್ತಿಗೆಗೆ ಬೆಳಕಿನ ಪಟ್ಟಿ: ಯುಪಿಯಲ್ಲಿ ವಿನೂತನ ಪ್ರಯೋಗ! Bigg Boss 11 ಟಿಆರ್ ಪಿಯಲ್ಲಿ ಬಿಗ್ ಬಾಸ್ ಹೊಸ ದಾಖಲೆ: ಸುದೀಪ್ ಕೊಟ್ಟ ವಿವರ ಏನು? ಚಿಕ್ಕಮಗಳೂರು: ಇಬ್ಬರು ಮಕ್ಕಳ ಎದುರೇ ಪ್ರಿಯಕರನಿಂದ ಕೊಲೆಯಾದ ಗೃಹಿಣಿ! ಬಂಡುಕೋರರ ವಶಕ್ಕೆ ಡಾಮಸ್ಕೊ: ಸಿರಿಯಾ ಅಧ್ಯಕ್ಷ ಅಸ್ಸಾದ್ ಪರಾರಿ! 2ನೇ ಟೆಸ್ಟ್: ಆಸ್ಟ್ರೇಲಿಯಾ 10 ವಿಕೆಟ್ ಜಯಭೇರಿ, ಸರಣಿ 1-1ರಿಂದ ಸಮ ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಸುಭಾಷ್ ಘಾಯ್ ಆಸ್ಪತ್ರೆಗೆ ದಾಖಲು! ಶೋಕಾಸ್ ನೋಟಿಸ್‍ಗೆ ಯತ್ನಾಳ್ ಉತ್ತರ ಗಮನಿಸಿ ಮುಂದಿನ ನಿರ್ಧಾರ: ರಾಧಾಮೋಹನ್ ದಾಸ್ ಅಗ್ರವಾಲ್ ಕಿದ್ವಾಯಿಯಲ್ಲಿ ಒಂದೇ 24 ಲಕ್ಷ ಆರ್ ಟಿಪಿಸಿಆರ್ ಪರೀಕ್ಷೆ, 146 ಕೋಟಿ ಬಿಲ್: ಡಿಸಿಎಂ ಡಿಕೆ ಶಿವಕುಮಾರ್ ಶ್ರೀರಂಗ ಕುಡಿಯವ ನೀರು ಪೂರೈಸುವ ಯೋಜನೆ 2026ಕ್ಕೆ ಪೂರ್ಣ: ರಾಜ್ಯ ಸರ್ಕಾರ 2ನೇ ಟೆಸ್ಟ್: ಸೋಲಿನ ಸುಳಿಯಲ್ಲಿ ಭಾರತ