Wednesday, July 1, 2026
Google search engine
Homeಜಿಲ್ಲಾ ಸುದ್ದಿSHOCKING 4 ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆಗೆ ಯತ್ನ! 4 ಮಕ್ಕಳ ದುರ್ಮರಣ

SHOCKING 4 ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆಗೆ ಯತ್ನ! 4 ಮಕ್ಕಳ ದುರ್ಮರಣ

ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೆನಾಳ ಗ್ರಾಮದ ಆಲಮಟ್ಟಿ ಎಡದಂತೆ ಕಾಲುವೆ ಮೇಲೆ ಈ ಘಟನೆ ನಡೆದಿದೆ.

13 ತಿಂಗಳ ಮಗು, 5 ವರ್ಷದ ತನು, 3 ವರ್ಷದ ರಕ್ಷಾ, 2 ವರ್ಷದ ಹುಸೇನ್ ಮೃತಪಟ್ಟಿದ್ದು, ಕಾಲುವೆಗೆ ಹಾರಿದ ತಾಯಿ ಭಾಗ್ಯಳನ್ನು ಮೀನುಗಾರರು ರಕ್ಷಿಸಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭಾಗ್ಯ ಈ ಮಕ್ಕಳ ಜೊತೆ ಆತ್ಮಹತ್ಯಗೆ ಯತ್ನಿಸಿದ್ದಾರೆ. ಮೀನುಗಾರರು ಇಬ್ಬರು ಹೆಣ್ಣು ಮಕ್ಕಳ ಶವ ಹೊರತೆಗೆದಿದ್ದು, ಇನ್ನಿಬ್ಬರು ಗಂಡು ಮಕ್ಕಳ ಶವಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಬಹುದಿನಗಳಿಂದ ಭಾಗ್ಯಳ ಪತಿ ಲಿಂಗಾರಜ ಅಣ್ಣತಮ್ಮಂದಿರ ಮಧ್ಯೆ ಆಸ್ತಿಗಾಗಾಗಿ ಕಲಹ ನಡೆದಿತ್ತು. ಆಸ್ತಿಯಲ್ಲಿ ಬಿಡಿಗಾಸು ಕೊಡಲ್ಲ ಎಂದು ಲಿಂಗರಾಜ್‌ಗೆ ಅಣ್ಣ ತಮ್ಮಂದಿರು ಹೇಳಿ್ದರು.

ಈ ವಿಷಯದಲ್ಲಿ ಗಲಾಟೆ ನಡೆದಾಗಲೆಲ್ಲಾ ಭಾಗ್ಯ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ ಪ್ರತಿ ಬಾರಿ ಆಕೆಯನ್ನು ಕಾಪಾಡಲಾಗುತ್ತಿತ್ತು. ಅದೆ ರೀತಿ ಇಂದು ಕೂಡ ಪರಸ್ಪರ ಗಲಾಟೆ ನಡೆದಿತ್ತು. ಗಲಾಟೆಯ ನಂತರ ಮನೆಯಿಂದ ತೆಲಗಿಗೆ ಹೊರಟಾಗ ಕಾಲುವೆ ಹತ್ತಿರ ಲಿಂಗರಾಜನ ದ್ವಿಚಕ್ರ ವಾಹನದ ಪೆಟ್ರೋಲ್ ಖಾಲಿ ಆಗಿದೆ.

ಪೆಟ್ರೋಲ್ ತರಲೆಂದು ಲಿಂಗರಾಜ ಸ್ವಲ್ಪ ದೂರ ಹೋಗುತ್ತಿದ್ದಂತೆ ಭಾಗ್ಯ ಮಕ್ಕಳೊಂದಿಗೆ ಕಾಲುವೆಗೆ ಹಾರಿದ್ದಾಳೆ ಎಂದು ಪತಿ ಲಿಂಗರಾಜ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments