ಒಂದೇ ಬಾರಿಗೆ ನೌಕಾಪಡೆಗೆ ಮೂರು ಐಎನ್ ಎಸ್ ಯುದ್ಧ ನೌಕೆಗಳನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಲೋಕಾಪರ್ಣೆಮಾಡಲಿದ್ದಾರೆ.
ಮುಂಬೈನ ನೌಕಾ ಡಾಕ್‌ಯಾರ್ಡ್‌ನಲ್ಲಿ ಬುಧವಾರ ಐಎನ್‌ಎಸ್ ಸೂರತ್, ಐಎನ್‌ಎಸ್ ನೀಲಗಿರಿ ಮತ್ತು ಐಎನ್‌ಎಸ್ ವಾಘಶೀರ್ ಹೆಸರಿನ ಮೂರು ಪ್ರಮುಖ ಯುದ್ಧನೌಕೆಗಳನ್ನು ಲೋಕಾಪರ್ಣೆ ಮಾಡಲಿದ್ದಾರೆ.
ಮಹಾರಾಷ್ಟ್ರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಯುದ್ಧ ನೌಕೆಗಳನ್ನು ಲೋಕಾಪರ್ಣೆ ಮಾಡುವ ಮುನ್ನ ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿದೆ.
ರಕ್ಷಣಾ ಉತ್ಪಾದನೆ ಮತ್ತು ಕಡಲ ಭದ್ರತೆಯಲ್ಲಿ ಜಾಗತಿಕ ನಾಯಕನಾಗುವ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಮೂರು ಪ್ರಮುಖ ನೌಕಾ ಯುದ್ಧ ನೌಕೆಗಳ ಕಾರ್ಯಾರಂಭವು ಮಹತ್ವದ ಮುನ್ನಡೆಯನ್ನು ಸೂಚಿಸುತ್ತದೆ ಎಂದು ಅದು ಹೇಳಿದೆ.
ಪಿ15ಬಿ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ಯೋಜನೆಯ ನಾಲ್ಕನೇ ಮತ್ತು ಅಂತಿಮ ಹಡಗಾಗಿರುವ ಐಎನ್‌ಎಸ್ ಸೂರತ್, ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಅತ್ಯಾಧುನಿಕ ವಿಧ್ವಂಸಕ ನೌಕೆಗಳಲ್ಲಿ ಒಂದಾಗಿದೆ. ಇದು ಶೇಕಡಾ 75 ರಷ್ಟು ಸ್ಥಳೀಯವಾಗಿ ತಯಾರಿಸಲ್ಪಟ್ಟಿದೆ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರ-ಸಂವೇದಕ ಪ್ಯಾಕೇಜ್‌ಗಳು ಮತ್ತು ಮುಂದುವರಿದ ನೆಟ್‌ವರ್ಕ್-ಕೇಂದ್ರಿತ ಸಾಮರ್ಥ್ಯಗಳನ್ನು ಹೊಂದಿದೆ ಎಂದು ಹೇಳಿಕೆ ತಿಳಿಸಿದೆ.