Thursday, 19 November 2026 — Kannadavahini
BREAKING NEWS
ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್ ಬೆಂಗಳೂರು ಸತ್ವ ಸಿಟಿಯಿಂದ ಬೆಂಗಳೂರು ಮಕ್ಕಳ ಕಲ್ಪನಾಶಕ್ತಿಗೆ ವೇದಿಕೆ ‘ವರ್ಲ್ಡ್ ಆಫ್ ವಂಡರ್ಸ್’ ಅನಾವರಣ ರಾಜ್ಯ 1000 ವಿದ್ಯಾರ್ಥಿಗಳ ಕೌಶಲ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಜ್ಞಾನಿ AI ಒಪ್ಪಂದಕ್ಕೆ ಸಹಿ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್ ಬೆಂಗಳೂರು ಸತ್ವ ಸಿಟಿಯಿಂದ ಬೆಂಗಳೂರು ಮಕ್ಕಳ ಕಲ್ಪನಾಶಕ್ತಿಗೆ ವೇದಿಕೆ ‘ವರ್ಲ್ಡ್ ಆಫ್ ವಂಡರ್ಸ್’ ಅನಾವರಣ ರಾಜ್ಯ 1000 ವಿದ್ಯಾರ್ಥಿಗಳ ಕೌಶಲ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಜ್ಞಾನಿ AI ಒಪ್ಪಂದಕ್ಕೆ ಸಹಿ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ!
ತಾಜಾ ಸುದ್ದಿ

3ನೇ ತಲೆಮಾರಿನ ನಾಗ್ ಕ್ಷಿಪಣಿ ಮೊದಲ ಪ್ರಯೋಗ ಯಶಸ್ವಿ!

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 27 ವೀಕ್ಷಣೆಗಳು
nag mk2
nag mk2

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ದೇಶೀಯವಾಗಿ ಅಭಿವೃದ್ಧಿಪಡಿಸಿದ ನಾಗ್ ಎಂಕೆ2 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನಡೆದಿದೆ.

ಮೂರನೇ ತಲೆಮಾರಿನ ‘ಆಂಟಿ ಟ್ಯಾಂಕ್ ಫೈರ್ ಅಂಡ್ ಫರ್ಗೆಟ್ ಗೈಡೆಡ್ ಕ್ಷಿಪಣಿಯಾದ ನಾಗ್ ಎಂಕೆ 2 ಪ್ರಯೋಗವನ್ನು ರಾಜಸ್ಥಾನದ ಪೋಖ್ರಾನ್ ನಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಪ್ರಯೋಗಗಳ ಸಮಯದಲ್ಲಿ, ಕ್ಷಿಪಣಿಯು ಗರಿಷ್ಠ ಮತ್ತು ಕನಿಷ್ಠ ರೇಂಜ್ ಗುರಿಗಳನ್ನು ನಾಶಪಡಿಸುವ ಮೂಲಕ ತನ್ನ ನಿಖರತೆ ಮತ್ತು ಫೈರಿಂಗ್ ಸಾಮರ್ಥ್ಯ ಪ್ರದರ್ಶಿಸಿದೆ.

ರಕ್ಷಣಾ ತಜ್ಞರು ಪ್ರತಿಕ್ರಿಯಿಸಿ, ‘ನಾಗ್ ಕ್ಷಿಪಣಿ ವಾಹಕ’ (ಆವೃತ್ತಿ 2) ವನ್ನು ಸಹ ಪರೀಕ್ಷೆಯ ಸಮಯದಲ್ಲಿ ಮೌಲ್ಯಮಾಪನ ಮಾಡಲಾಗಿದೆ.

ಯಶಸ್ವಿ ಪ್ರಯೋಗಗಳೊಂದಿಗೆ, ಈ ಸಂಪೂರ್ಣ ಶಸ್ತ್ರಾಸ್ತ್ರ ವ್ಯವಸ್ಥೆಯು ಈಗ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲು ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

ಮೂರು ಬಾರಿ ನಡೆಸಿದ ಪ್ರಯೋಗದಲ್ಲಿ ಕ್ಷಿಪಣಿ ಹತ್ತಿರದ ಮತ್ತು ದೂರದ ಎಲ್ಲ ಗುರಿಗಳನ್ನು ನಿಖರವಾಗಿ ಹೊಡೆದುರುಳಿಸಿತು. ಪೋಖ್ರಾನ್ ಫೀಲ್ಡ್ ರೇಂಜಲ್ಲಿ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಾಗ್ ಎಂಕೆ-2 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯಿಸಿ, ನಾಗ್ ಎಂಕೆ2 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿರುವುದಕ್ಕೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಭಾರತೀಯ ಸೇನೆ ಮತ್ತು ಕ್ಷಿಪಣಿ ಅಭಿವೃದ್ಧಿಯಲ್ಲಿ ಭಾಗಿಯಾದ ಕೈಗಾರಿಕೆಯನ್ನು ಅಭಿನಂದಿಸಿದ್ದಾರೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ಡಿಆರ್ ಡಿಒ ಅಧ್ಯಕ್ಷ ಸಮೀರ್ ವಿ ಕಾಮತ್, ಕ್ಷಿಪಣಿಯನ್ನು ಭಾರತೀಯ ಸೇನೆಗೆ ಸೇರ್ಪಡೆಗೆ ಸಿದ್ಧಪಡಿಸಲು ನೆರವಾದ ಎಲ್ಲರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

‘ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ 4’ ಕಾರ್ಯಾಚರಣೆಯ ಮೌಲ್ಯಮಾಪನವನ್ನು ಯಶಸ್ವಿಯಾಗಿ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಅಡಿಯಲ್ಲಿ ನಡೆಸಲಾಗಿತ್ತು.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8429 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment