Home ತಾಜಾ ಸುದ್ದಿ ಸಂಕ್ರಾಂತಿ ವೇಳೆ ದುರ್ಘಟನೆ ಬಗ್ಗೆ ಮೊದಲೇ ಭವಿಷ್ಯ ಹೇಳಿದ್ದರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೋದರ ಸ್ಫೋಟಕ ಹೇಳಿಕೆ

ಸಂಕ್ರಾಂತಿ ವೇಳೆ ದುರ್ಘಟನೆ ಬಗ್ಗೆ ಮೊದಲೇ ಭವಿಷ್ಯ ಹೇಳಿದ್ದರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೋದರ ಸ್ಫೋಟಕ ಹೇಳಿಕೆ

ಸಂಕ್ರಾಂತಿ ವೇಳೆ ಮನೆಯಲ್ಲಿ ದುರ್ಘಟನೆ ನಡೆಯುತ್ತದೆ ಎಂದು ಮನೆಯ ಹಿರಿಯರು ಭವಿಷ್ಯ ನುಡಿಸಿದ್ದರು ಎಂದು ಅಪಘಾತಕ್ಕೀಡಾಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.

by Editor
0 comments
laxmi hebbalkar

ಸಂಕ್ರಾಂತಿ ವೇಳೆ ಮನೆಯಲ್ಲಿ ದುರ್ಘಟನೆ ನಡೆಯುತ್ತದೆ ಎಂದು ಮನೆಯ ಹಿರಿಯರು ಭವಿಷ್ಯ ನುಡಿಸಿದ್ದರು ಎಂದು ಅಪಘಾತಕ್ಕೀಡಾಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಕಾರು ಅಪಘಾತದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಪ್ರಯಾಣಿಸುತ್ತಿದ್ದ ಚನ್ನರಾಜ ಹಟ್ಟಿಹೊಳಿ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದು, ಚಿಕಿತ್ಸೆ ಪಡೆದ ನಂತರ ಮಾಧ್ಯಮಗಳಿಗೆ ಘಟನೆಯ ವಿವರ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗ ಮನೆಯಿಂದ 15 ನಿಮಿಷ ದೂರದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

ಮನೆಯಲ್ಲಿ ದುರ್ಘಟನೆ ನಡೆಯುತ್ತೆ ಎಂದು ಮನೆಯ ಹಿರಿಯರು ಭವಿಷ್ಯ ನುಡಿದಿದ್ದರು. ಸಂಕ್ರಮಣದ ಆಜುಬಾಜು ಇಂತಹ ಘಟನೆಗಳು ಆಗುತ್ತವೆ ಎಂದು ಹಿರಿಯರು ಹೇಳಿದ್ದರು. ನಮಗೆ ಬೇಕಾದವರು ಸಂಕ್ರಮಣದ ಸಂದರ್ಭದಲ್ಲಿ ಮನೆಯಲ್ಲಿ ದುರ್ಘಟನೆ ನಡೆಯುತ್ತದೆ ಎಂದು ಭವಿಷ್ಯ ಹೇಳಿದ್ರು. ಆದರೂ ಕೂಡಾ ನಮ್ಮಿಂದಲೇ ಅಚಾತುರ್ಯ ನಮ್ಮಿಂದಲೇ ಜರುಗಿದೆ ಎಂದು ಹೇಳಿದರು.

banner

ಸಂಕ್ರಮಣ ಹಬ್ಬದ ನಿಮಿತ್ತ ಕುಟುಂಬ ಸಮೇತ ಮನೆ ದೇವರು ವೀರಭದ್ರ ದೇವಸ್ಥಾನಕ್ಕೆ ಹೋಗಲು ರಾತ್ರಿಯೇ ತರಾತುರಿಯಲ್ಲಿ ಬೆಂಗಳೂರು ನಿವಾಸವನ್ನ ಬಿಟ್ಟಿದ್ವಿ. ಮನೆಗೆ 15 ನಿಮಿಷದಲ್ಲಿ ತಲುಪುತ್ತಿದ್ದೆವು. ಆಗ ಬೆಳಗ್ಗೆ 5 ಗಂಟೆಗೆ 2 ನಾಯಿಗಳು ಒಂದರ ಹಿಂದೆ ಒಂದು ಅಡ್ಡ ಬಂದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಅವರು ವಿವರಿಸಿದರು.

ದಿಢೀರನೆ 2 ನಾಯಿಗಳು ಒಂದರ ಹಿಂದೆ ಒಂದು ಅಡ್ಡ ಬಂದಿದ್ದು, ಡ್ರೈವರ್ ಏನೂ ಮಾಡಲು ಸಾಧ್ಯವಾಗಲಿಲ್ಲ. ನಾಯಿಗಳು ಬರುವುದಕ್ಕೆ ಮುಂದುಗಡೆ ಕಂಟೇನರ್ ಇದಿದ್ದರಿಂದ ಅಪಘಾತ ಆಗಿದೆ. ಪ್ರಾಣಿಗಳ ಜೀವ ರಕ್ಷಣೆ ಮಾಡಲು ತರಾತುರಿ ಲೆಫ್ಟ್ ಕಡೆಗೆ ಕಾರನ್ನ ತೆಗೆದುಕೊಂಡಿದ್ದಾನೆ. ಆಗ ರಸ್ತೆ ಬದಿ ಇರೋ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ನನಗೆ, ಸಹೋದರಿ ಸಚಿವರಿಗೆ ಬೆನ್ನು ಮೂಳೆಗೆ ಏರ್ ಲೈನ್ಸ್ ಪ್ರ್ಯಾಕ್ಚರ್ ಆಗಿದೆ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.

ಅಪಘಾತ ಸುದ್ದಿಯಿಂದ ಮನೆಯಲ್ಲಿ ಗಾಬರಿ ಆಗಿದ್ದರಿಂದ ನಾನು ಚಿಕಿತ್ಸೆ ಪಡೆದು ಹೋಗಿದ್ದೆ. ಪೆಟ್ಟಾಗಿದ್ದರಿಂದ ನೋವು ಜಾಸ್ತಿಯಿದೆ. ಹೀಗಾಗಿ ಮಾತನಾಡಲು ಸಾಧ್ಯ ಆಗುತ್ತಿಲ್ಲ. ಸಹೋದರಿ ಅಪಾಯದಿಂದ ಪಾರಾಗಿದ್ದಾರೆ. ದೇವರು, ಜನರ ಆಶೀರ್ವಾದಿಂದ ಆರಾಮಾಗಿದ್ದಾರೆ ಎಂದು ನುಡಿದರು.

ಶಿವು ಅಂತಾ ಒಳ್ಳೆಯ ಡ್ರೈವರ್. ಅಪಘಾತಗೂ ಮುನ್ನ 10 ನಿಮಿಷ ನಾನೇ ಮಾತಾಡಿದೆ. ಪೆಟ್ರೋಲ್ ಹಾಕಿಸಿಕೊಳ್ಳಣವಾ ಎಂದು ಕೇಳಿದೆ. ಇದಕ್ಕೆ ಇಲ್ಲ ಅಣ್ಣಾ 15 ನಿಮಿಷದಲ್ಲಿ ಬೆಳಗಾವಿ ಮುಟ್ಟುತ್ತೇವೆ ಎಂದ. ನಾನು ನಮ್ಮ ಗನ್ ಮ್ಯಾನ್ ಗೂ ಕೇಳಿದೆ. ಸಿಎಲ್‌ಪಿ ಸಭೆ ಮುಗಿದ ಬಳಿಕ ನಮಗೆ ಯಾವುದೇ ಬೆಂಗಾವಲು ವಾಹನ ಇರಲಿಲ್ಲ. ನಾವು ಯಾರಿಗೂ ಇಂಟಿಮೇಶನ್ ಕೊಟ್ಟಿರಲಿಲ್ಲ ಎಂದು ವಿವರಿಸಿದರು.

ಡ್ರೈವರ್ ಕರೆಸಿದ್ದರೆ ಈ ದುರ್ಘಟನೆ ನಡೆಯುತ್ತಿರಲಿಲ್ಲ ಹಬ್ಬ ಇರುವುದಿರಂದ ಬೆಳಗಾವಿ ಡ್ರೈವರ್ ನನಗೆ ಕರೆ ಮಾಡಿ ದಾವಣಗೆರೆ ವರೆಗೂ ಬರುತ್ತೇನೆ ಅಂತಾ ಹೇಳಿದ್ದ. ನಾನೇ ಬೇಡಬಿಡು ಬೆಳಗ್ಗೆ ಹೊಳೆಗೆ ಸ್ನಾನಕ್ಕೆ ಹೋಗೋಣ ಅಂತಾ ಹೇಳಿದ್ದೆ. ಡ್ರೈವರ್ ನ ದಾವಣಗೆರೆಗೆ ಕರೆಸಿದ್ದರೆ ಈ ದುರ್ಘಟನೆ ನಡೆಯುತ್ತಿರಲಿಲ್ಲ ಎಂದು ಈಗ ಅನಿಸುತ್ತದೆ ಎಂದು ಅವರು ನುಡಿದರು.

ಕಾರಿನಲ್ಲಿ ಮುಂದೆ ಡ್ರೈವರ್, ಆತನ ಪಕ್ಕದಲ್ಲಿ ಗನ್ ಮ್ಯಾನ್ ಇದ್ದರು. ನಾನು ಡ್ರೈವರ್ ಹಿಂದೆ, ಗನ್ ಮ್ಯಾನ್ ಹಿಂದೆ ಸಹೋದರಿ ಲಕ್ಷ್ಮೀ ಹೆಬ್ಬಾಳ್ಕರ್​ ಕುಳಿತ್ತಿದ್ದರು. ಡ್ರೈವರ್ ಗೆ ಮೈಮೇಲೆ ಗಾಯಗಳಾಗಿವೆ, ಗನ್ ಮ್ಯಾನ್ ಗೆ ಒಳಪೆಟ್ಟಾಗಿದೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ, ಸ್ಪೀಕರ್, ಗೃಹ ಸಚಿವರು, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಸೇರಿ ಪಕ್ಷಾತೀತವಾಗಿ ಎಲ್ಲರೂ ಆರೋಗ್ಯ ವಿಚಾರಿಸಿದ್ದಾರೆ. ನಮ್ಮ ಆರೋಗ್ಯ ವಿಚಾರಿಸಿದವರಿಗೆ ಧನ್ಯವಾದಗಳು. ಸಚಿವೆ ಹೆಬ್ಬಾಳ್ಕರ್ ಅವರನ್ನ ಬೆಂಗಳೂರಿಗೆ ಶಿಫ್ಟ್ ಮಾಡುವ ಅವಶ್ಯಕತೆ ಇಲ್ಲ. ಮೂರು ವಾರಗಳ ಕಾಲ ರೆಸ್ಟ್ ಮಾಡಲು ಹೇಳಿದ್ದಾರೆ. ಬೆಂಗಳೂರಿಗೆ ಶಿಷ್ಟ್ ಮಾಡುವ ಅವಶ್ಯಕತೆ ಬರುವುದಿಲ್ಲ ಎಂದು ತಿಳಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಬಿಸಿಸಿಐನಿಂದ ಮೇಜರ್ ಸರ್ಜರಿ: ಆಟಕ್ಕೆ ತಕ್ಕಂತೆ ಆದಾಯ, ಸಂಗಾತಿ ಪ್ರವೇಶ ನಿರ್ಬಂಧ! 15 ದಿನಕ್ಕೊಮ್ಮೆ ಕ್ರೆಡಿಟ್ ಸ್ಕೋರ್ ನವೀಕರಣಕ್ಕೆ ಆರ್ ಬಿಐ ತಾಕಿತು! ಸಾಮೂಹಿಕ ಅತ್ಯಾಚಾರ ಎಸಗಿದ ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ವಿರುದ್ಧ ಎಫ್ ಐಆರ್ ದಾಖಲು! ಬಿಆರ್‌ಎಸ್ ನಾಯಕ ರಾಮರಾವ್, ಹರೀಶ್‌ಗೆ ಗೃಹಬಂಧನ ಇಸ್ರೇಲ್-ಹಮಾಸ್ ಕದನ ವಿರಾಮ ಸಾಧ್ಯತೆ: ಮಧ್ಯಪ್ರಾಚ್ಯದಲ್ಲಿ ಶಾಂತಿ ವಾಪಸ್ 3ನೇ ತಲೆಮಾರಿನ ನಾಗ್ ಕ್ಷಿಪಣಿ ಮೊದಲ ಪ್ರಯೋಗ ಯಶಸ್ವಿ! ಖೋಖೋ ವಿಶ್ವಕಪ್: ಬ್ರೆಜಿಲ್ ಮಣಿಸಿದ ಭಾರತ ಪುರುಷರ ತಂಡ ನಾಕೌಟ್ ಸನಿಹ ಖೋ-ಖೋ ವಿಶ್ವಕಪ್‌ 2025: ದಕ್ಷಿಣ ಕೊರಿಯಾ ವಿರುದ್ಧ ಗೆದ್ದು ಇತಿಹಾಸ ಬರೆದ ಭಾರತ ಮಹಿಳಾ ತಂಡ ರಣಜಿ ಟ್ರೋಫಿ ದೆಹಲಿ ಸಂಭಾವ್ಯ ತಂಡದಲ್ಲಿ ವಿರಾಟ್ ಕೊಹ್ಲಿ, ರಿಷಭ್ ಪಂತ್ ! ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ವಾರ್ಷಿಕ ಪ್ರಶಸ್ತಿ ಪ್ರಕಟ!