9
ಪುರಾಣ ಪ್ರಸಿದ್ಧ ಸ್ವಾಮಿ ಅಯ್ಯಪ್ಪ ದೇವಸ್ಥಾನದ ಶಬರಿಮಲೆಯಲ್ಲಿ ಸಂಕ್ರಾಂತಿ ಹಬ್ಬದ ದಿನವಾದ ಇಂದು ಮಕರ ಜ್ಯೋತಿ ದರ್ಶನ ನೀಡಿದೆ.
ಕೇರಳದ ಶಬರಿಮಲೆಯಲ್ಲಿ ಮಕರ ಸಂಕ್ರಾತಿ ದಿನ ಸಂಜೆ ಕಾಣಿಸಿಕೊಳ್ಳುವ ಮಕರಜ್ಯೋತಿ ದರ್ಶನ ನೀಡಿದ್ದು, ಮಕರ ಜ್ಯೋತಿಯ ದರ್ಶನದಿಂದ ಅಯ್ಯಪ್ಪ ಮಾಲಾಧಾರಿಗಳು ಸಂಭ್ರಮದಿಂದ ಅಯ್ಯಪ್ಪ ಘೋಷಣೆ ಕೂಗಿದರು.
ಪತ್ತನಂತಿಟ್ಟ ಜಿಲ್ಲೆಯ ಪೊನ್ನಂಬಲಮೆಡು ಅರಣ್ಯದಲ್ಲಿ ಮೂರು ಬಾರಿ ಪವಿತ್ರ ಮಕರ ಜ್ಯೋತಿ ದರ್ಶನ ನೀಡುತ್ತದೆ ಎಂಬ ಪ್ರತೀತಿ ಇದೆ. ಈ ಬಾರಿಯೂ ಮಕರ ಸಂಕ್ರಮಣ ದಿನದಂದು ಜ್ಯೋತಿ ಕಾಣಿಸಿಕೊಂಡಿದ್ದು, ಭಕ್ತರು ಸಂತಸಗೊಂಡರು.