ಅಮೋಘ ಪ್ರದರ್ಶನ ನೀಡಿದ ಭಾರತ ವನಿತೆಯರ ತಂಡ 304 ರನ್ ಗಳ ಅಂತರದಿಂದ ಐರ್ಲೆಂಡ್ ತಂಡವನ್ನು ಮಣಿಸಿ ಏಕದಿನ ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿ ಚಾರಿತ್ರಿಕ ಸಾಧನೆ ಮಾಡಿದೆ.
ಭಾರತ ಪ್ರವಾಸ ಕೈಗೊಂಡಿರುವ ಐರ್ಲೆಂಡ್ ವಿರುದ್ಧ ಬುಧವಾರ ನಡೆದ ಸರಣಿಯ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ವನಿತೆಯರ ತಂಡ 50 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 435 ರನ್ ಕಲೆ ಹಾಕಿತು. ಕಠಿಣ ಗುರಿ ಬೆಂಬತ್ತಿದ ಐರ್ಲೇಂಡ್ ತಂಡ 31.4 ಓವರ್ ಗಳಲ್ಲಿ 131 ರನ್ ಗೆ ಪತನಗೊಂಡಿತು. ಈ ಮೂಲಕ ಭಾರತ ವನಿತೆಯರು 3-0ಯಿಂದ ಸರಣಿ ವೈಟ್ ವಾಷ್ ಸಾಧನೆ ಮಾಡಿತು.
ಭಾರತ ತಂಡ 304 ರನ್ ಗಳ ಅಂತರದಿಂದ ಗೆಲುವು ಭಾರತದ ಪಾಲಿಗೆ ರನ್ ಗಳ ಆಧಾರದಲ್ಲಿ ಅತೀ ದೊಡ್ಡ ಅಂತರದ ಗೆಲುವಾಗಿದ್ದರೆ, 435 ರನ್ ಪೇರಿಸಿರುವುದು ಏಕದಿನ ಕ್ರಿಕೆಟ್ ನಲ್ಲಿ ಅತೀ ದೊಡ್ಡ ಮೊತ್ತದ ವಿಶ್ವದಾಖಲೆಯಾಗಿದೆ.
ಇಬ್ಬರು ಆರಂಭ ಆಟಗಾರ್ತಿಯರು ಶತಕ ಸಿಡಿಸಿ ಮತ್ತೊಂದು ವಿಕ್ರಮ ಸಾಧಿಸಿದರು. ನಾಯಕಿ ಸ್ಮೃತಿ ಮಂದಾನ 80 ಎಸೆತಗಳಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್ ನೆರವಿನಿಂದ 135 ರನ್ ಚಚ್ಚಿದರೆ, ಪ್ರತಿಕಾ ರಾವಲ್ 129 ಎಸೆತಗಳಲ್ಲಿ 20 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ ೧೫೪ ರನ್ ಚಚ್ಚಿದರು.
ಸ್ಮೃತಿ ಮಂದಾನ ಮತ್ತು ಪ್ರತಿಕಾ ಮೊದಲ ವಿಕೆಟ್ ಗೆ 26.4 ಓವರ್ ಗಳಲ್ಲಿ 233 ರನ್ ಜೊತೆಯಾಟದಿಂದ ಮತ್ತೊಂದು ದಾಖಲೆ ಬರೆದಿದ್ದೂ ಅಲ್ಲದೇ ಭಾರತ ವಿಶ್ವದಾಖಲೆಯ ಮೊತ್ತ ದಾಖಲಿಸುವ ಭರವಸೆ ಮೂಡಿಸಿದರು. ನಂತರ ಬಂದ ರಿಚಾ ಘೋಷ್ (59), ತೇಜಲ್ ಹಸಬಿನ್ಸ್ (28) ಉತ್ತಮ ಪ್ರದರ್ಶನ ನೀಡಿ ತಂಡದ ಮೊತ್ತ ಮತ್ತಷ್ಟು ಉಬ್ಬಿಸಿದರು.