ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿರುವ 45 ಮಂದಿ ರೌಡಿಗಳನ್ನು ಗಡಿಪಾರು ಮಾಡಿ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಡಿಪಾರು ಮಾಡಿರುವ ರೌಡಿಗಳ ವಿರುದ್ಧ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು.
ಕೊಲೆ, ಸುಲಿಗೆ, ಮಾದಕ ವಸ್ತು ಮಾರಾಟ ಹಾಗೂ ಸೇವನೆ, ಮಟ್ಕಾ, ಭೂಮಾಫಿಯಾ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಗಳಿಂದ ಸಮಾಜದಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆ ಗಳಿರುವುದರಿಂದ ಅವರನ್ನು ಬೀದರ್, ಯಾದಗಿರಿ, ದಕ್ಷಿಣ ಕನ್ನಡ, ಚಾಮರಾಜನಗರಗಳಿಗೆ ಗಡಿಪಾರು ಮಾಡಿ ಆದೇಶಿಸಲಾಗಿದ್ದು, ಇವರ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿದೆ ಎಂದರು.
ಗಡಿಪಾರಾದ ರೌಡಿಗಳು: ಇಮ್ರಾನ್ ಅಲಿಯಾಸ್ ಕಟಗ ಮನಿಯಾರ್ (33), ಸೈಯದ್ ಸೊಹೆಲ್ ಅಲಿಯಾಸ್ ಅಡ್ಡ ಸೊಹೆಲ್ (21), ಖಾಜುಲೈನ್ ಕೋಟೂರ (24), ಅಮ್ಜದ್ ಶಿರಹಟ್ಟಿ (28,) ರಾಕೇಶ ಮದರಕಲ್ಲ (33) ಉದಯ ಕೆಲಗೇರಿ (24), ಅಶ್ಪಾಕ್ ಅತ್ತಾರ (40), ಮೆಹಬೂಬ್ ಸಾಬ (46), ರಾಹುಲ್ ಪ್ರಹ್ಲಾದ್ (35), ವಾಸುದೇವ ಕೊಲ್ಹಾಪುರ (46), ಪರಶುರಾಮ ಕಬಾಡೆ (60), ಮಹಮ್ಮದ್ ಅಜೀಜ್ ಬೇಪಾರಿ (27), ಆಂಜನೇಯ ಪೂಜಾರ (39), ಸುದೀಪ್ ಬಾರಕೇರ್ (21), ಅರ್ಜುನ ವಡ್ಡರ (23), ಅಕ್ಬರ್ ಬಿಜಾಪುರ (26), ವಿಶಾಲ ಬಿಜವಾಡ (25), ರಾಕೇಶ ಜಮಖಂಡಿ (32), ಸುನಿಲ್ ಮಾಳಗಿ (24), ಹಜರತ್ ಅಲಿ ಅಲಿಯಾಸ್ ಪಾಡಾ ಮಕಾಂದರ (22), ಸತೀಶ್ ಅಲಿಯಾಸ್ ಸತ್ಯಾ ಗೋಕಾವಿ (27), ಸಿದ್ದಪ್ಪ ಬಡಕಣ್ಣವರ (38), ಶಂಕರ ಅಥಣಿ (28),ರಾಜೇಶ ಅಲಿಯಾಸ್ ಬಾಂಡ್ ರಾಜಾ ನಾಗನೂರ (21), ಅರವಿಂದ ‘ಜಂತ್ರಿ (28), ಕಾರ್ತಿಕ ಮದರಿಮಠ (22), ವಿಜಯಕುಮಾರ್ ಆಲೂರ್ (24), ಮಹಮ್ಮದ್ ಸಾಧಿಕ್ ಅಲಿಯಾಸ್ ಗಿಲಿಗಿಲಿ ಸಾದಿಕ ಬೆಟಗೇರಿ (28), ದಾದಾಫೀರ್ ಚೌಧರಿ (28), ಜುನೇದ್ ಅಲಿಯಾಸ್ ಡೈಮಂಡ್ ಮುಲ್ಲಾ (30), ಅಲ್ತ್‌ಾ ಕರಡಿಗುಡ್ಡ (29), ಮಹಮ್ಮದ್ ಸಾಧಿಕ್ ಅಲಿಯಾಸ್ ಬಾಬಾಸಾಧಿಕ್ ಬೇಪಾರಿ (29), ಮಹಮ್ಮದ್ ಸಾಧಿಕ್ ಅಲಿಯಾಸ್ ಮ್ಯಾಟ್ನಿ ಸಾಧಿಕ್ ಮುನವಳ್ಳಿ (22), ಶಾದಾಬ ಕರಡಿಗುಡ್ಡ (32), ಚೇತನ ಮೆಟ್ಟಿ (30), ಕರ್ಣಾ ಮುಂಡಗೋಡ ( 28), ಇಮ್ರಾನ್ ಕಲಾದಗಿ (22), ಅಲ್ಲಾವುದ್ದೀನ್ ಅಲಿಯಾಸ್ ಡಲ್ಯಾ ನದ್ ರ್ ( 39), ಸಿದ್ಧಾರ್ಥ ಹೆಗ್ಗಣದೊಡಿ (22), ಇಸರಾರ ಅಲಿಯಾಸ್ ಅಬ್ದುಲ್ ಶೇಖ್ (23), ಸೋಹಿಲ್ ಖಾನ್ ಹಾಲಬಾವಿ (23), ಆನಂದ ಕೊಪ್ಪದ (25), ಕಾರ್ತಿಕ ಮಾನೆ (24), ಕಿರಣ ಕಲಬುರಗಿ (30, ವಿಜಯ ಕಠಾರೆ (24) ಗಡಿಪಾರು ಆದೇಶಕ್ಕೆ ಒಳಗಾದ ರೌಡಿಶೀಟರ್ ಗಳಾಗಿದ್ದಾರೆ.
ಧಾರವಾಡ ಶಹರ ಪೊಲೀಸ್ ಠಾಣೆಯ 7 ಜನ, ಉಪನಗರ ಪೊಲೀಸ್ ಠಾಣೆಯ 3 ಜನ, ವಿದ್ಯಾಗಿರಿ ಠಾಣೆಯ 7ಜನ, ಮೂವರು ಪೊಲೀಸ್ ಠಾಣೆಯ ವ್ಯಾಪ್ತಿಯ ಒಟ್ಟು 17 ಜನ ಗಡಿಪಾರು ಮಾಡಲಾಗಿದೆ. ಹುಬ್ಬಳ್ಳಿ ನಗರದ ಶಹರ ಠಾಣೆಯ 1, ಉಪನಗರ ಠಾಣೆಯ 1 ಒಬ್ಬ, ಕಮಿರಿಪೇಟೆ ಠಾಣೆಯ 2 ಜನ, ಬೆಂಡಿಗೇರಿ ಠಾಣೆಯ 3ಜನ, ಕಸಬಾ ಪೇಟ್ ಠಾಣೆಯ 9 ಜನ, ಅಶೋಕ ನಗರ ಠಾಣೆ 2 ಜನ, ವಿದ್ಯಾನಗರ ಠಾಣೆಯ 1 ಜನ, ಎಪಿಎಂಸಿ ನವನಗರ ಠಾಣೆಯ 4 ಜನ, ಜತೆಗೆ ಕೇಶ್ವಾಪುರ ಠಾಣೆಯ 5 ಜನ ಸೇರಿ ಹುಬ್ಬಳ್ಳಿಯ ವ್ಯಾಪ್ತಿಯಲ್ಲಿ ಒಟ್ಟು 28 ಜನ ರೌಡಿಶೀಟರ್ ಗಳನ್ನು ಗಡಿಪಾರಿಗೆ ಕ್ರಮ ಕೈಗೊಳ್ಳಲಾಗಿದೆ.
ಒಂದು ವೇಳೆ ಗಡಿಪಾರು ಆದೇಶ ಉಲ್ಲಂಘಿಸಿದ್ದಲ್ಲಿ ಈ ರೌಡಿಶೀಟರ್ ಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.