Wednesday, July 1, 2026
Google search engine
Homeಕ್ರೀಡೆನಗದು ಪುರಸ್ಕಾರ ನೀಡದೇ ವಿಶ್ವಕಪ್ ಗೆದ್ದ ಖೋಖೋ ಆಟಗಾರರಿಗೆ ಅಪಮಾನ?

ನಗದು ಪುರಸ್ಕಾರ ನೀಡದೇ ವಿಶ್ವಕಪ್ ಗೆದ್ದ ಖೋಖೋ ಆಟಗಾರರಿಗೆ ಅಪಮಾನ?

ನವದೆಹಲಿ: ಚೊಚ್ಚಲ ಖೋಖೋ ವಿಶ್ವ ಕಪ್ ಗೆದ್ದ ಭಾರತದ ಪುರುಷ ಮತ್ತು ಮಹಿಳೆಯರ ತಂಡಗಳಿಗೆ ಯಾವುದೇ ನಗದು ಪುರಸ್ಕಾರ ನೀಡದಿರುವುದು ವಿವಾದಕ್ಕೆ ಕಾರಣವಾಗಿದೆ.

ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಖೋ- ಖೋ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಅಂತಿಮ ಹಣಾಹಣಯಲ್ಲಿ ಭಾರತೀಯ ಪುರುಷರ ತಂಡ ನೇಪಾಳ ತಂಡವನ್ನು 54-36 ಅಂತರದಿಂದ ಸೋಲಿಸಿ ಚಾಂಪಿಯನ್ ಆದರೇ ಮಹಿಳೆಯರ ಫೈನಲಲ್ಲಿ ಭಾರತ ಮಹಿಳಾ ತಂಡ ನೇಪಾಳ ತಂಡವನ್ನು 78-38 ಅಂಕಗಳಿಂದ ಮಣಿಸಿತ್ತು. ಈ ಐತಿಹಾಸಿಕ ಸಾಧನೆಯ ಹೊರತಾಗಿಯೂ ಭಾರತೀಯ ಖೋ-ಖೋ ಪಟುಗಳಿಗೆ ನಗದು ಬಹುಮಾನ ಸಿಕ್ಕಿಲ್ಲ ಎಂಬುದೇ ಸೋಜಿಗ.

ಖೋ-ಖೋ ವಿಶ್ವಕಪ್ನಲ್ಲಿ ಎರಡೂ ವಿಭಾಗಗಳಲ್ಲಿ ಅಜೇಯರಾಗಿ ಉಳಿದು ಪ್ರಶಸ್ತಿ ಗೆದ್ದುಕೊಂಡರೂ ಭಾರತೀಯರು ಬಹುಮಾನ ಮೊತ್ತ ಪಡೆದಿಲ್ಲ. ಟೂರ್ನಿ ಆರಭಕ್ಕೂ ಮುನ್ನವೇ ನಗದು ಬಹುಮಾನ ನೀಡುವುದಿಲ್ಲ ಎಂದು ನಿರ್ಧರಿಸಲಾಗಿತ್ತು. ಇದರಿಂದ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದರೂ ಯಾವುದೇ ನಗದು ಬಹುಮಾನ ನೀಡಲಾಗಿಲ್ಲ.

ಇನ್ನು ಗೆದ್ದ ತಂಡಗಳಿಗೆ ಟ್ರೋಫಿಯನ್ನು ನೀಡಿ ಗೌರವಿಸಲಾಗಿದೆ. ಇದಲ್ಲದೇ ತಂಡದಲ್ಲಿರುವ ಆಟಗಾರರಿಗೆ ಪದಕ ಮತ್ತು ವೈಯಕ್ತಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಕಾನೂನು ತೊಡಕಿನ ಕಾರಣ

ಖೋ-ಖೋ ವಿಶ್ವಕಪ್‌ಗೆ ಆಗಮಿಸುವ ಸಾಗರೋತ್ತರ ಆಟಗಾರರಿಗೆ ಉಂಟಾಗಬಹುದಾದ ತೆರಿಗೆ ಕಾನೂನುಗಳ ತೊಡಕುಗಳನ್ನು ತಪ್ಪಿಸಲು ಯಾವುದೇ ರೀತಿಯ ನಗದು ಬಹುಮಾನವನ್ನು ನೀಡದಿರಲು ನಿರ್ಧರಿಸಿದ್ದೇವೆ ಎಂದು ಖೋ-ಖೋ ವಿಶ್ವಕಪ್ ಆಯೋಜಕರು ಟೂರ್ನಿ ಆರಂಭಕ್ಕೂ ಮುನ್ನವೇ ತಿಳಿಸಿದ್ದರು. ಹೀಗಾಗಿ ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡಗಳಿಗೆ ನಗದು ಬಹುಮಾನ ನೀಡಲಾಗಿಲ್ಲ.

ಇದರ ಜೊತೆಗೆ ಈ ಕ್ರೀಡೆ ಆಯೋಜನೆಗೆ ನಿರೀಕ್ಷಿತ ಮಟ್ಟದಲ್ಲಿ ಪ್ರಾಯೋಜಕತ್ವ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಚೊಚ್ಚಲ ಟೂರ್ನಿಗೆ ಆರ್ಥಿಕ ಸಮಸ್ಯೆಗೆ ಎದುರಾಗಿದ್ದು, ಈ ಹಣಕಾಸಿನ ಸಮಸ್ಯೆಯನ್ನು ಸರಿ ಹೊಂದಿಸಲು ಮೊದಲೇ ಬಹುಮಾನ ಮೊತ್ತವನ್ನು ನೀಡದಿರಲು ನಿರ್ಧರಿಸಲಾಗಿತ್ತು ಎಂಬ ಮಾತುಗಳು ಕೂಡ ಕೇಳಿ ಬಂದಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments