ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳವನ್ನು ಇಸ್ರೊ ಉಪಗ್ರಹ ಬಾಹ್ಯಕಾಶದಿಂದ ಸೆರೆಹಿಡಿದ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.
45 ದಿನಗಳ ಕಾಲ ನಡೆಯುವ ಮಹಾ ಕುಂಭಮೇಳದಲ್ಲಿ ಸುಮಾರು 45 ಕೋಟಿ ಜನರು ಭೇಟಿ ನೀಡುವ ನಿರೀಕ್ಷೆ ಇದೆ. ಈಗಾಗಲೇ 10 ಕೋಟಿಗೂ ಅಧಿಕ ಜನರು ತ್ರಿವಳಿ ಸಂಗಮನದಲ್ಲಿ ಸ್ನಾನ ಮಾಡಿದ್ದಾರೆ.
ವಿಶ್ವದ ಅತೀ ದೊಡ್ಡ ಧಾರ್ಮಿಕ ಕಾರ್ಯಕ್ರಮವಾಗಿ ಗಮನ ಸೆಳೆಯುತ್ತಿರುವ ಕುಂಭಮೇಳದ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆಗಳು ಉಪಗ್ರಹಗಳ ಮೂಲಕ ಚಿತ್ರಗಳನ್ನು ಸೆರೆ ಹಿಡಿಯುವ ಪ್ರಯತ್ನ ಮಾಡಿವೆ.
ಹೈದರಾಬಾದ್ ಮೂಲದ ಸಂಸ್ಥೆ ಕುಂಭಮೇಳದಲ್ಲಿ ಹಗಲು ಮತ್ತು ರಾತ್ರಿಯ ಫೋಟೊಗಳನ್ನು ಸೆರೆ ಹಿಡಿದಿದೆ. ಇದರಲ್ಲಿ ಭಾರೀ ಸಂಖ್ಯೆಯಲ್ಲಿ ಹಾಕಿರುವ ಶಿಬಿರಗಳು, ಸೇತುವೆಗಳು ಹಾಗೂ ರಸ್ತೆ ಸೇರಿದಂತೆ ಅಲ್ಲಿನ ಮೂಲಭೂತ ವ್ಯವಸ್ಥೆ ಹಾಗೂ ವಿನ್ಯಾಸದ ಚಿತ್ರಗಳನ್ನು ಸೆರೆ ಹಿಡಿದಿವೆ.
ಈ ಬಾಹ್ಯಕಾಶದ ಫೋಟೊಗಳನ್ನು ಉತ್ತರ ಪ್ರದೇಶ ಸರ್ಕಾರ ಕೂಡ ಬಳಸಿಕೊಂಡು ಜನದಟ್ಟಣೆ ಹಾಗೂ ಕಾಲ್ತುಳಿತ, ಬೆಂಕಿ ಅವಘಡ ಮುಂತಾದ ಸಂಭಾವ್ಯ ಅನಾಹುತಗಳ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ.