Thursday, 19 November 2026 — Kannadavahini
BREAKING NEWS
ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್ ಬೆಂಗಳೂರು ಸತ್ವ ಸಿಟಿಯಿಂದ ಬೆಂಗಳೂರು ಮಕ್ಕಳ ಕಲ್ಪನಾಶಕ್ತಿಗೆ ವೇದಿಕೆ ‘ವರ್ಲ್ಡ್ ಆಫ್ ವಂಡರ್ಸ್’ ಅನಾವರಣ ರಾಜ್ಯ 1000 ವಿದ್ಯಾರ್ಥಿಗಳ ಕೌಶಲ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಜ್ಞಾನಿ AI ಒಪ್ಪಂದಕ್ಕೆ ಸಹಿ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್ ಬೆಂಗಳೂರು ಸತ್ವ ಸಿಟಿಯಿಂದ ಬೆಂಗಳೂರು ಮಕ್ಕಳ ಕಲ್ಪನಾಶಕ್ತಿಗೆ ವೇದಿಕೆ ‘ವರ್ಲ್ಡ್ ಆಫ್ ವಂಡರ್ಸ್’ ಅನಾವರಣ ರಾಜ್ಯ 1000 ವಿದ್ಯಾರ್ಥಿಗಳ ಕೌಶಲ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಜ್ಞಾನಿ AI ಒಪ್ಪಂದಕ್ಕೆ ಸಹಿ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್
ಮನರಂಜನೆ

ಗಣರಾಜ್ಯೋತ್ಸವ ದಿನ ಜೀ ಟಿವಿಯಲ್ಲಿ ಭೈರತ್ ರಣಗಲ್ ಪ್ರಸಾರ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 25 ವೀಕ್ಷಣೆಗಳು

ಈಗ ಸಿನಿಪ್ರಿಯರಿಗೆ ಇಲ್ಲಿದೆ ನೋಡಿ ಮತ್ತೊಂದು ಗುಡ್ ನ್ಯೂಸ್. ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅಭಿನಯದ, ನರ್ತನ್ ನಿರ್ದೇಶಿಸಿರುವ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ‘ಭೈರತಿ ರಣಗಲ್ ‘ ಚಿತ್ರವು ಇದೇ ಜನವರಿ 26 ರಂದು ಸಂಜೆ 4:30 ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಬೆಳ್ಳಿತೆರೆಯ ಮೇಲೆ ಸೂಪರ್ ಹಿಟ್ ಆಗಿರುವ ಭೈರತ್ ರಣಗಲ್ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಗೆ ರುಕ್ಮಿಣಿ ವಸಂತ್ ಅವರು ಜೋಡಿಯಾಗಿದ್ದು ಇವರಿಬ್ಬರ ಜೋಡಿ ನಿಮಗೆ ಮತ್ತಷ್ಟು ಮನರಂಜನೆ ನೀಡಲಿದೆ.

ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ತಂಗಿಯಾಗಿ ನಟಿ ಛಾಯಾ ಸಿಂಗ್ ಕಾಣಿಸಿಕೊಂಡಿದ್ದಾರೆ. ಶಿವಣ್ಣ ಡಬಲ್ ಶೇಡ್‌ನಲ್ಲಿ ಮಿಂಚಿದ್ದು, ಫಸ್ಟ್ ಹಾಫ್‌ನಲ್ಲಿ ಕಾನೂನು ಕಾಯುವ ವಕೀಲನಾಗಿ, ಸೆಕೆಂಡ್ ಹಾಫ್‌ನಲ್ಲಿ ಕಾನೂನನ್ನೇ ಕೈಗೆತ್ತಿಕೊಳ್ಳುವ ಗ್ಯಾಂಗ್‌ಸ್ಟರ್ ಆಗಿ ಗಮನಸೆಳೆಯುತ್ತಾರೆ.

ಖಡಕ್ ಡೈಲಾಗ್ ಗಳು, ಶಿವರಾಜ್ ಕುಮಾರ್ ಅವರ ಉತ್ತಮವಾದ ನಟನೆ, ಶಬೀರ್, ರಾಹುಲ್ ಬೋಸ್ ಅವರಂತಹ ಖಳನಟರ ಸಖತ್ ಅಭಿನಯ ಸಿನಿಪ್ರಿಯರ ಮನಗೆಲ್ಲುವುದು ಗ್ಯಾರಂಟಿ. ಅಷ್ಟೇ ಅಲ್ಲದೆ ಈ ಚಿತ್ರದಲ್ಲಿ ಹಿರಿಯ ನಟ ದೇವರಾಜ್, , ಬಾಬು ಹಿರಣಯ್ಯ ಮತ್ತು ಮಧು ಗುರುಸ್ವಾಮಿ ನಟಿಸಿದ್ದಾರೆ.

ರೋಣಾಪುರದ ಜನರ ನೋವು, ಕಾರ್ಮಿಕರ ಸಂಕಷ್ಟಗಳ ಸುತ್ತ ಕಥೆ ಸಾಗುತ್ತದೆ. ಘಟ್ಟ ಎಂಬ ಸೈಕೋ ರಾಕ್ಷಸನ ಆರ್ಭಟವೂ ಇದೆ. ವಕೀಲನಾಗಿ ಜನರ ಪರ ನಿಲ್ಲುವ ರಣಗಲ್ ಗೆ(ಡಾ. ಶಿವರಾಜ್ ಕುಮಾರ್) ಆ ಊರಿನ ಸರ್ಕಾರಿ ಆಸ್ಪತ್ರೆಯ ವೈದ್ಯೆ ವೈಶಾಲಿ ಮೇಲೆ (ರುಕ್ಮಿಣಿ ವಸಂತ್) ಪ್ರೀತಿ ಹುಟ್ಟುತ್ತದೆ. ಭೈರತಿ ರಣಗಲ್ ತನ್ನದೇ ಮೈನಿಂಗ್ ಸಾಮ್ರಾಜ್ಯ ಕಟ್ಟುತ್ತಾನೆ. ಅಲ್ಲಿಂದ ಮುಂದೆ ಪರಾಡೆ ಹಾಗೂ ರಣಗಲ್ ನಡುವಿನ ಏಟು ಎದಿರೇಟು ಹೇಗೆ ಸಾಗುತ್ತದೆ ಎಂಬುವುದೇ ಈ ಚಿತ್ರದ ಸಾರಾಂಶ.

ಒಬ್ಬ ಸಾಮಾನ್ಯ ವಕೀಲನಾಗಿದ್ದ ಭೈರತಿ ರಣಗಲ್ ಯಾಕೆ ಗ್ಯಾಂಗ್‌ಸ್ಟರ್ ಆದಾ ಎಂದು ತಿಳ್ಕೊಬೇಕಾ? ಹಾಗಿದ್ರೆ ವೀಕ್ಷಿಸಿ ‘ಭೈರತಿ ರಣಗಲ್’ ಇದೇ ಜನವರಿ 26 ರಂದು ಸಂಜೆ 4:30 ಕ್ಕೆ ಗಂಟೆಗೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8426 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment