Wednesday, October 23, 2024
Google search engine
Homeಆರೋಗ್ಯಸಿದ್ಧಪಡಿಸಿದ ಆಹಾರ, ಪಾನೀಯಗಳಿಂದ ಬೇಗ ಸಾವು: 30 ವರ್ಷದ ಸುದೀರ್ಘ ಸಮೀಕ್ಷೆಯಲ್ಲಿ ಬಹಿರಂಗ!

ಸಿದ್ಧಪಡಿಸಿದ ಆಹಾರ, ಪಾನೀಯಗಳಿಂದ ಬೇಗ ಸಾವು: 30 ವರ್ಷದ ಸುದೀರ್ಘ ಸಮೀಕ್ಷೆಯಲ್ಲಿ ಬಹಿರಂಗ!

ಅಲ್ಟ್ರಾ ಪ್ರೊಸೆಸ್ ಮಾಡಲಾದ ಆಹಾರ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸುವವರು ಸಾಮಾನ್ಯವಾಗಿ ಬೇಗ ಸಾವಿಗೀಡಾಗುತ್ತಾರೆ ಎಂಬುದು ಹಾರ್ವರ್ಡ್ ವಿಶ್ವವಿದ್ಯಾಲಯದ ಸುದೀರ್ಘ 30 ವರ್ಷಗಳ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.

ಹಾರ್ವರ್ಡ್ ವಿಶ್ವವಿದ್ಯಾಲಯ ಸುಮಾರು 30 ವರ್ಷಗಳ ಸುದೀರ್ಘ ಅವಧಿಯಲ್ಲಿ 1,114,000 ರೋಗಿಗಳನ್ನು ಸಂಶೋಧನೆಗೆ ಒಳಪಡಿಸಿ ಈ ವರದಿ ಸಿದ್ಧಪಡಿಸಿದೆ.

ಸಿದ್ಧವಾದ ಆಹಾರ, ಕೋಳಿ ಸಾಗಾಣೆ, ಸಮುದ್ರ ಆಧಾರಿತ ಪದಾರ್ಥ, ಸಕ್ಕರೆ ಆಧಾರಿತ ಪಾನೀಯ, ಡೈರಿ ಆಧಾರಿತ ಡೆಸರ್ಟ್ ಗಳು, ತಕ್ಷಣ ಸಿದ್ದಪಡಿಸಬಹುದಾದ ಉಪಹಾರ ಮುಂತಾದ ಅಲ್ಟ್ರಾ ಪ್ರೊಸೆಸ್ ಆಗಿರುವ ಆಹಾರ ಪದಾರ್ಥಗಳನ್ನು ಸೇವಿಸಿದಷ್ಟು ಸಾವಿನ ಆತಂಕ ಹೆಚ್ಚುತ್ತದೆ ಎಂದು ವರದಿ ಹೇಳಿದೆ.

ಸಾಮಾನ್ಯವಾಗಿ ಮನೆಗಳಲ್ಲಿ ಆಹಾರ ಸಿದ್ಧಪಡಿಸುವಾಗ ಬಳಸಲಾಗದ ಆಹಾರಗಳಲ್ಲಿ ರಾಸಾಯನಿಕ ಪದಾರ್ಥಗಳನ್ನು ಬಳಸಲಾಗುತ್ತದೆ. ಇದರಲ್ಲಿ ನಕಲಿ ಬಣ್ಣ, ನಕಲಿ ಸಕ್ಕರೆ, ರುಚಿಕಾರಕ ಅಂಶಗಳನ್ನು ಸೇರಿಸಲಾಗುತ್ತಿದೆ. ಇದರಿಂದ ನಾರಿನಾಂಶ ಸೇರಿದಂತೆ ಹಲವು ಆರೋಗ್ಯ ವೃದ್ಧಿ ಅಂಶಗಳು ಇರುವುದಿಲ್ಲ ಎಂದು ವರದಿ ವಿವರಿಸಿದೆ.

ಸಿದ್ಧಪಡಿಸಿದ ಆಹಾರ ಹಾಗೂ ಸಕ್ಕರೆ ಆಧಾರಿತ ಪಾನೀಯಗಳನ್ನು ಹೆಚ್ಚು ಸೇವಿಸುವವರಲ್ಲಿ ಸಾಮಾನ್ಯಕ್ಕಿಂತ ಬೇಗ ಮೃತಪಟ್ಟವರ ಪ್ರಮಾಣ ಶೇ.13ರಷ್ಟು ಇದೆ. ನಕಲಿ ಸಕ್ಕರೆ ಅಥವಾ ಸಕ್ಕರೆ ಅಂಶ ಹೊಂದಿರುವ ಪಾನೀಯ ಸೇವನೆಯಿಂದ ಶೇ.9ರಷ್ಟು ಮಂದಿ ನಿಗದಿತ ಪ್ರಮಾಣಕ್ಕಿಂತ ಬೇಗನೇ ಮೃತಪಟ್ಟಿದ್ದಾರೆ. ಅಲ್ಲದೇ ಅಲ್ಟ್ರಾ ಪ್ರೊಸೆಸ್ ಮಾಡಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಶೇ.4ರಷ್ಟು ಮಂದಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಹಾರ್ವರ್ಡ್ ವಿವಿ ವರದಿ ವಿವರಿಸಿದೆ.

34 ವರ್ಷಗಳ ಸರಾಸರಿ ಅವಧಿಯಲ್ಲಿ ಸಂಶೋಧಕರು 48,193 ಸಾವುಗಳನ್ನು ಗುರುತಿಸಿದ್ದಾರೆ, ಇದರಲ್ಲಿ ಕ್ಯಾನ್ಸರ್‌ನಿಂದ 13,557 ಸಾವುಗಳು, ಹೃದಯ ಕಾಯಿಲೆಗಳಿಂದ 11,416 ಸಾವುಗಳು, ಉಸಿರಾಟದ ಕಾಯಿಲೆಗಳಿಂದ 3,926 ಸಾವುಗಳು ಮತ್ತು ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳಿಂದ 6,343 ಸಾವುಗಳು ಸೇರಿವೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments