Thursday, September 19, 2024
Google search engine
Homeತಾಜಾ ಸುದ್ದಿಉತ್ತರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಗೆ ಯುವಕನಿಂದ 8 ಬಾರಿ ಮತದಾನ: ವೀಡಿಯೊ ವೈರಲ್!

ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಗೆ ಯುವಕನಿಂದ 8 ಬಾರಿ ಮತದಾನ: ವೀಡಿಯೊ ವೈರಲ್!

ಯುವಕನೊಬ್ಬ ಬಿಜೆಪಿ ಅಭ್ಯರ್ಥಿ ಪರ 8 ಬಾರಿ ಮತ ಚಲಾಯಿಸಿ 8 ಬೆರಳಿಗೆ ಶಾಯಿ ಹಾಕಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಸಮಾಜವಾದಿ ಹಾಗೂ ಕಾಂಗ್ರೆಸ್ ಪಕ್ಷಗಳು ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಪೋಸ್ಟ್ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.

ಉತ್ತರ ಪ್ರದೇಶದ ಫಾರೂಖಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುಖೇಶ್ ರಜಪೂತ್ ಪರ ಯುವಕ ಸತತ 8 ಬಾರಿ ಮತ ಚಲಾಯಿಸಿದ ಸುಮಾರು 2 ನಿಮಿಷದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚುನಾವಣಾಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ.

ಚುನಾವಣಾಧಿಕಾರಿ ದೂರಿನ ಹಿನ್ನೆಲೆಯಲ್ಲಿ ನಯಾ ಗೋಯೆನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯುವಕನ ಪತ್ತೆ ಕಾರ್ಯ ನಡೆದಿದೆ. ಒಂದು ಬೆರಳಿಗೆ ಅಧಿಕಾರಿಗಳು ಹಾಕಬೇಕು. ಆದರೆ ಈ ಯುವಕ 8 ಬೆರಳಿಗೆ ಶಾಹಿ ಹಾಕಿಸಿಕೊಂಡಿರುವುದನ್ನು ತೋರಿಸಿಕೊಂಡಿದ್ದಾನೆ. ಹಾಗಾದರೆ ಅಧಿಕಾರಿಗಳು ಏನು ಮಾಡುತ್ತಿದ್ದರು? ಇದು ನಿಜವೇ ಅಥವಾ ಸುಳ್ಳೇ ಎಂಬ ಬಗ್ಗೆ ಪರಿಶೀಲನೆ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments