Saturday, May 16, 2026
Google search engine
Homeಕ್ರೀಡೆಆರ್ ಸಿಬಿ- ಪಂಜಾಬ್ ಮುಖಾಮುಖಿ: ಸಮಬಲರ ನಡುವೆ ಫೇವರೆಟ್ ಯಾರು?

ಆರ್ ಸಿಬಿ- ಪಂಜಾಬ್ ಮುಖಾಮುಖಿ: ಸಮಬಲರ ನಡುವೆ ಫೇವರೆಟ್ ಯಾರು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮೊದಲ ಬಾರಿ ಐಪಿಎಲ್ ಪ್ರಶಸ್ತಿ ಎತ್ತಿಹಿಡಿಯಲು ಇಂದು ಸಂಜೆ ಹೋರಾಟ ನಡೆಸಲಿದ್ದು, ಎರಡೂ ತಂಡಗಳ ಮುಖಾಮುಖಿಗಳ ವಿವರ ಹೀಗಿದೆ.

2008ರಲ್ಲಿ ಆರಂಭವಾದ ನಂತರ ಒಂದೂ ಬಾರಿಯೂ ಪ್ರಶಸ್ತಿ ಎತ್ತಿ ಹಿಡಿಯದ ಆರ್ ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಮೊದಲ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವ ಕನಸು ಕಂಡಿವೆ. ಎರಡೂ ತಂಡಗಳು ಇದುವರೆಗೆ ಐಪಿಎಲ್ ನಲ್ಲಿ 36 ಬಾರಿ ಮುಖಾಮುಖಿ ಆಗಿದ್ದು, ತಲಾ 18 ಪಂದ್ಯಗಳ ಗೆಲುವಿನೊಂದಿಗೆ ಸಮಬಲ ಹೊಂದಿವೆ.

ಪಂಜಾಬ್ ವಿರುದ್ಧ ಆರ್ ಸಿಬಿ 160.17ರ ಸರಾಸರಿಯಲ್ಲಿ ರನ್ ಪೇರಿಸಿದ್ದರೆ, ಆರ್ ಸಿಬಿ ವಿರುದ್ಧ ಪಂಜಾಬ್ 158ರ ಸರಾಸರಿಯಲ್ಲಿ ರನ್ ಗಳಿಸಿದೆ. ಆರ್ ಸಿಬಿ 5.83ರ ಸರಾಸರಿಯಲ್ಲಿ ವಿಕೆಟ್ ಪಡೆದಿದ್ದರೆ, ಪಂಜಾಬ್ 5.89ರ ಸರಾಸರಿಯಲ್ಲಿ ವಿಕೆಟ್ ಗಳಿಸಿದೆ.

ಪಂಜಾಬ್ ವಿರುದ್ಧ ಆರ್ ಸಿಬಿ 241 ರನ್ ಗಳಿಸಿರುವುದು ಗರಿಷ್ಠ ಮೊತ್ತವಾಗಿದ್ದರೆ, ಪಂಜಾಬ್ ಗರಿಷ್ಠ 232 ರನ್ ಕಲೆ ಹಾಕಿದೆ. ಟಾಸ್ ಗೆದ್ದು ಆರ್ ಸಿಬಿ 9 ಪಂದ್ಯ ಗೆದ್ದಿದ್ದರೆ ಪಂಜಾಬ್ ಟಾಸ್ ಗೆದ್ದ 8 ಬಾರಿ ಪಂದ್ಯ ಜಯಿಸಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ತಲಾ 7 ಪಂದ್ಯಗಳನ್ನು ಉಭಯ ತಂಡಗಳು ಗೆದ್ದಿವೆ. ಅಂದರೆ ಎರಡೂ ತಂಡಗಳು ಪರಸ್ಪರ ರನ್ ಚೇಸ್ ಮಾಡಿ ಗೆದ್ದ ದಾಖಲೆಯಲ್ಲೂ ಸಮಬಲ ಹೊಂದಿವೆ.

ಪ್ಲೇಆಫ್ ನಲ್ಲಿ ಪಂಜಾಬ್ ವಿರುದ್ಧದ 2 ಮುಖಾಮುಖಿಗಳಲ್ಲೂ ಆರ್ ಸಿಬಿ ಗೆದ್ದಿದೆ. ಕ್ವಾಲಿಫೈಯರ್-1 ಪಂದ್ಯದಲ್ಲಿ 8 ವಿಕೆಟ್ ಗಳಿಂದ ಗೆದ್ದು ಈ ಬಾರಿ ಫೈನಲ್ ತಲುಪಿದ್ದರೆ ಪಂಜಾಬ್ ಸೋತು ಮತ್ತೆ ಫೈನಲ್ ಪ್ರವೇಶಿಸಿದೆ.

ಆರ್ ಸಿಬಿ 9 ಬಾರಿ ಪ್ಲೇಆಫ್ ತಲುಪಿದೆ. ಮೂರು ಬಾರಿ ಫೈನಲ್ ನಲ್ಲಿ ಎಡವಿದೆ. 2009ರಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ 7 ರನ್, 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 35 ರನ್ ಹಾಗೂ 2016ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಗ್ಗರಿಸಿತ್ತು.

ಮತ್ತೊಂದೆಡೆ ಪಂಜಾಬ್ ಕಿಂಗ್ಸ್ 2 ಬಾರಿ ಮಾತ್ರ ಪ್ಲೇಆಫ್ ಪ್ರವೇಶಿಸಿದ್ದು, 2014ರಲ್ಲಿ ಒಂದು ಬಾರಿ ಫೈನಲ್ ತಲುಪಿದ್ದು, ಕೆಕೆಆರ್ ವಿರುದ್ಧ ಸೋಲುಂಡಿತ್ತು. ಕಳೆದ ಬಾರಿ ಕೆಕೆಆರ್ ಗೆ ಪ್ರಶಸ್ತಿಯತ್ತ ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್ ಇದೀಗ ಪಂಜಾಬ್ ತಂಡವನ್ನು ಫೈನಲ್ ನತ್ತ ಮುನ್ನಡೆಸಿದ್ದಾರೆ.

ಕೊಹ್ಲಿ- ಶ್ರೇಯಸ್ ಸಮಬಲ

ವಿರಾಟ್ ಕೊಹ್ಲಿ 5 ಬಾರಿ 600ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. 973 ರನ್ ಬಾರಿಸಿ ಒಂದೇ ಆವೃತ್ತಿಯಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೇ ಒಂದೇ ತಂಡದ ಪರ 9000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಪ್ರಸ್ತುತ ಐಪಿಎಲ್ ನಲ್ಲಿ 8 ಅರ್ಧಶತಕ ಸಿಡಿಸಿದ್ದಾರೆ. 146.5 ಸರಾಸರಿಯಲ್ಲಿ 614 ರನ್ ಗಳಿಸಿದ್ದಾರೆ. ಮತ್ತೊಂದೆಡ ಶ್ರೇಯಸ್ ಅಯ್ಯರ್ 6 ಅರ್ಧಶತಕ ಸೇರಿದಂತೆ 175.8ರ ಸರಾಸರಿಯಲ್ಲಿ 603 ರನ್ ಗಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments