Sunday, July 5, 2026
Google search engine
Homeಕಾನೂನುಕ್ಷಮೆ ಕೇಳುವುದಿಲ್ಲ, ಕಮಲ್ ಹಾಸನ್ ಪಟ್ಟು: ಜೂ. 10ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

ಕ್ಷಮೆ ಕೇಳುವುದಿಲ್ಲ, ಕಮಲ್ ಹಾಸನ್ ಪಟ್ಟು: ಜೂ. 10ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

ಕನ್ನಡ ಭಾಷೆಯ ಬಗ್ಗೆ ನಟ ಕಮಲ್ ಹಾಸನ್ ನೀಡುವ ಹೇಳಿಕೆ ಕುರಿತ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಜಲಜೂನ್ 10ರವರೆಗೆ ಮುಂದೂಡಿದೆ.

ಕರ್ನಾಟಕದಲ್ಲಿ ಥಗ್ ಆಫ್ ಲೈಫ್ ಚಿತ್ರ ಬಿಡುಗಡೆಗೆ ಅವಕಾಶ ಹಾಗೂ ಪೊಲೀಸ್ ಭದ್ರತೆ ಕೋರಿ ಕಮಲ್ ಹಾಸನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರನ್ನೊಳಗೊಂಡ ಪೀಠ ವಿಚಾರಣೆಯನ್ನು ಮುಂದೂಡಿದೆ.

ವಿಚಾರಣೆ ಜೂನ್10ಕ್ಕೆ ಮುಂದೂಡಿಕೆ ಆಗಿದ್ದರಿಂದ ಕರ್ನಾಟಕದಲ್ಲಿ ಥಗ್ ಆಫ್ ಲೈಫ್ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಆಗುತ್ತಿಲ್ಲ. ಜೂನ್ 5ರಂದು ಚಿತ್ರ ಬಿಡುಗಡೆ ಆಗಬೇಕಿದ್ದು, ಕಮಲ್ ಹಾಸನ್ ಅವರ ವರ್ತನೆಯಿಂದ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಆಗುತ್ತಿಲ್ಲ.

ಕಮಲ್ ಹಾಸನ್ ತಾವು ಕನ್ನಡ ಭಾಷೆಯನ್ನು ಕೀಳಾಗಿ ನೋಡುವಂತಹ ಹೇಳಿಕೆ ನೀಡಿಲ್ಲ. ತಮಿಳಿನಷ್ಟೇ ಕನ್ನಡ ಕೂಡ ಸಾಂಸ್ಕೃತಿಕ ಮತ್ತು ಸಾಹಿತ್ಯಿಕವಾಗಿ ಶ್ರೀಮಂತವಾಗಿದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದರು.

ಅಲ್ಲದೇ ಕನ್ನಡ ವಾಣಿಜ್ಯ ಮಂಡಳಿಗೆ ಬರೆದ ಪತ್ರದಲ್ಲಿ ಕನ್ನಡ ಭಾಷೆ ಹಾಗೂ ಕನ್ನಡಿಗರು ನನ್ನ ಕುಟುಂಬ ಇದ್ದಂತೆ ಎಂದು ಹೇಳಿದ್ದು, ಪರೋಕ್ಷವಾಗಿ ಕಮ್ಷೆ ಕೋರಲು ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ ಥಗ್ ಆಫ್ ಲೈಫ್ ಚಿತ್ರದ ನಿರ್ಮಾಪಕರು ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದರು,

ನಿರ್ಮಾಪಕದ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಮೂರ್ತಿಗಳು ಈಗಲೂ ಸಮಯ ಪ್ರಜ್ಞೆ ತೋರಿ ಎಂದು ಕಿವಿಮಾತು ಹೇಳಿದರು. ಇದಕ್ಕೆ ಕಮಲ್ ಹಾಸನ್ ಪರ ವಕೀಲರು ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಜೂನ್ 10ರವರೆಗೆ ಮುಂದೂಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments