ಹಣ್ಣುಗಳು ಶೀಘ್ರ ಹಣ್ಣಾಗಲು ಕ್ಯಾಲ್ಶಿಯಂ ಕಾರ್ಬೈಡ್ ಮತ್ತು ಕಾರ್ಬೈಡ್ ಗ್ಯಾಸ್ ನಂತಹ ರಾಸಾಯನಿಕ ಬಳಸದಂತೆ ಆಹಾರ ಪ್ರಾಧಿಕಾರ ಎಚ್ಚರಿಕೆ ನೀಡಿದೆ.
ಹಣ್ಣುಗಳು ಶೀಘ್ರ ಮಾಗುವಂತೆ ಮಾಡಲು ಉದ್ದಿಮೆದಾರರು, ವ್ಯಾಪಾರಿಗಳು ಹಾಗೂ ಮಧ್ಯವರ್ತಿಗಳು ರಾಸಾಯನಿಕ ಬಳಸದಂತೆ ಆಹಾರ ಪ್ರಾಧಿಕಾರ ಎಚ್ಚರಿಸಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಸಂಸ್ಥೆ 2011ರಲ್ಲಿಯೇ ಹಣ್ಣುಗಳನ್ನು ಕೃತಕವಾಗಿ ಮಾಗಿಸಲು ಕಾರ್ಬೈಡ್ ಗ್ಯಾಸ್ ಬಳಕೆ ನಿಷೇಧಿಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಮಾವಿನ ಹಣ್ಣುಗಳನ್ನು ಕೃತಕವಾಗಿ ಮಾಗಿಸಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಆಹಾರ ಪ್ರಾಧಿಕಾರ ಪ್ರಕಟಣೆ ಹೊರಡಿಸಿದ್ದು, ಹಣ್ಣುಗಳನ್ನು ಮಾಗಿಸಲು ಕೃತಕ ರಾಸಾಯನಿಕ ಬಳಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಪ್ರಾಧಿಕಾರ ಎಚ್ಚರಿಸಿದೆ.
ಹಣ್ಣುಗಳನ್ನು ಕೃತಕವಾಗಿ ಮಾಗಿಸುವ ಕುರಿತು ಅಧಿಕಾರಿಗಳು ಕಾರ್ಯಾಚರಣೆ ನಡೆಸಲಿದ್ದು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರತರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
ಕೃತಕವಾಗಿ ಹಣ್ಣು ಮಾಗಿಸುವುದು ಅಪರಾಧ
ಕ್ಯಾಲ್ಸಿಯಂ ಕಾರ್ಬೈಡ್ ಅಸಿಟಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತದೆ, ಇದು ಆರ್ಸೆನಿಕ್ ಮತ್ತು ರಂಜಕದ ಕುರುಹುಗಳನ್ನು ಹೊಂದಿರುತ್ತದೆ. ಈ ಖನಿಜಗಳ ಸೇವನೆಯು ಆರೋಗ್ಯಕ್ಕೆ ಅಪಾಯಕಾರಿ. ಹಣ್ಣುಗಳನ್ನು ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಅಥವಾ ಕಾರ್ಬೈಡ್ ಅನಿಲವನ್ನು ಬಳಸಿದರೆ, ಅದು ಅವುಗಳ ಮೇಲೆ ಆರ್ಸೆನಿಕ್ ಮತ್ತು ರಂಜಕದ ಶೇಷಗಳನ್ನು ಬಿಡಬಹುದು.
“ಮಸಾಲಾ’ ಎಂದೂ ಕರೆಯಲ್ಪಡುವ ಈ ಪದಾರ್ಥಗಳು ತಲೆತಿರುಗುವಿಕೆ, ಆಗಾಗ್ಗೆ ಬಾಯಾರಿಕೆ, ಕಿರಿಕಿರಿ, ದೌರ್ಬಲ್ಯ, ನುಂಗಲು ತೊಂದರೆ, ವಾಂತಿ ಮತ್ತು ಚರ್ಮದ ಹುಣ್ಣುಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು” ಎಂದು ಆಹಾರ ಗುಣಮಟ್ಟ ನಿಯಂತ್ರಣ ಸಂಸ್ಥೆ ವಿವರಿಸಿದೆ.
ಮಾವಿನಹಣ್ಣುಗಳನ್ನು ಕೃತಕವಾಗಿ ಮಾಗಿಸಲಾಗಿದೆಯೇ ಎಂದು ನಿರ್ಧರಿಸಲು ನಿಮಗೆ ಸಹಾಯ ಮಾಡುವ ಕೆಲವು ಪರೀಕ್ಷೆಗಳಿವೆ. ಸೇವನೆಯ ಮೊದಲು ಅವುಗಳನ್ನು ಸರಿಯಾಗಿ ಸ್ವಚ್ಛಗೊಳಿಸಲು ನೀವು ಕ್ರಮಗಳನ್ನು ತೆಗೆದುಕೊಳ್ಳಬಹುದು