ತಾಯಿ – ಮಗಳು ಸ್ನಾನ ಮಾಡುವಾಗ ವಿಡಿಯೋ ಮಾಡುತ್ತಿದ್ದ ಯುವಕನನ್ನು ಬೆಂಗಳೂರಿನ ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚೆನ್ನಸಂದ್ರ ನಿವಾಸಿ ಮೊಯಿನುದ್ದೀನ್ (24) ನನ್ನು ಮಹಿಳೆಯ ಪತಿ ನೀಡಿದ ದೂರು ಆಧರಿಸಿ ಬಂಧಿಸಲಾಗಿದೆ.
ದೂರುದಾರರ ಮನೆಯ ಸಮೀಪದಲ್ಲೇ ಸ್ಥಳೀಯ ನಿವಾಸಿಯಾಗಿದ್ದ ಆರೋಪಿ, ಅಪ್ರಾಪ್ತ ಮಗಳೊಂದಿಗೆ ತಾಯಿ ಸ್ನಾನ ಮಾಡುತ್ತಿದ್ದಾಗ ಬಾತ್ ರೂಮ್‌ನ ಕಿಟಕಿಯಿಂದ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿಯುತ್ತಿದ್ದ.
ಜುಲೈ 8ರಂದು ಬೆಳಗ್ಗೆ 6:30ರ ಸುಮಾರಿಗೆ ಸ್ನಾನ ಮಾಡುವ ದೃಶ್ಯ ಸೆರೆ ಹಿಡಿಯುತ್ತಿರುವುದನ್ನು ಗಮನಿಸಿದ ಬಾಲಕಿ ತಾಯಿಗೆ ಹೇಳಿದ್ದಾಳೆ. ಹೊರಗೆ ಬಂದು ಗಮನಿಸುವಷ್ಟರಲ್ಲಿ ಆರೋಪಿ ಓಡಿ ಹೋಗುತ್ತಿರುವುದನ್ನು ದಂಪತಿ ಗಮನಿಸಿತಕ್ಷಣ ಮಹಿಳೆಯ ಪತಿ ಕಾಡುಗೋಡಿ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿ ಕಾಡುಗೋಡಿಯಲ್ಲಿ ಎಲೆಕ್ಟ್ರಿಶಿಯನ್ ಕೆಲಸ ಮಾಡುತ್ತಿದ್ದ. ಆತನ ಮೊಬೈಲ್ ಫೋನ್‌ನಲ್ಲಿದ್ದ ವಿಡಿಯೋ ಡಿಲೀಟ್ ಮಾಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


