ಬೆಂಗಳೂರು: ಮಹಾರಾಜ ಟ್ರೋಫಿ ಕೆಎಸ್‌ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ) ಟಿ20 ಟೂರ್ನಿಯ ನಾಲ್ಕನೇ ಆವೃತ್ತಿಯ ಹರಾಜಿನಲ್ಲಿ ಅಚ್ಚರಿ ಮೂಡಿಸುವಂತೆ, ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಮಾರಾಟವಾಗದೆ ಉಳಿದಿದ್ದಾರೆ.
ಆರ್ ಸಿಬಿ ಆಟಗಾರ ಹಾಗೂ ಭಾರತ ತಂಡದ ಪರ ಆಡಿದ ಅನುಭವ ಹೊಂದಿರುವ ಬ್ಯಾಟರ್ ದೇವದತ್ ಪಡಿಕ್ಕಲ್ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದರು. ಇವರನ್ನು ಹುಬ್ಬಳ್ಳಿ ಟೈಗರ್ಸ್ ತಂಡ 13.20 ಲಕ್ಷಕ್ಕೆ ಖರೀದಿಸಿದೆ.
2024ರ ಆವೃತ್ತಿಯಲ್ಲಿ ಅವರು ಮೈಸೂರು ವಾರಿಯರ್ಸ್ ಪರ ಆಡಿದ್ದರೂ, ಪ್ರದರ್ಶನ ಅಷ್ಟೇನೂ ಪ್ರಭಾವಶಾಲಿಯಾಗಿರಲಿಲ್ಲ. ತಂಡ ಟ್ರೋಫಿ ಗೆದ್ದಿದ್ದರೂ, ಸಮಿತ್ ದ್ರಾವಿಡ್ ಅವರ ವೈಯಕ್ತಿಕ ಪ್ರದರ್ಶನವು ನಿರೀಕ್ಷಿತ ಮಟ್ಟದಲ್ಲಿರಲಿಲ್ಲ ಎಂಬುದು ಗಮನಾರ್ಹ.
ಅಭಿನವ್ ಮನೋಹರ್ ಮತ್ತು ಮನೀಶ್ ಪಾಂಡೆ ಕೂಡ ಪಡಿಕ್ಕಲ್‌ರನ್ನು ನಿಕಟವಾಗಿ ಹಿಂಬಾಲಿಸಿದ್ದಾರೆ. ಅಭಿನವ್ ಮನೋಹರ್ ಅವರನ್ನು ಹುಬ್ಬಳ್ಳಿ ಟೈಗರ್ಸ್ 12.20 ಲಕ್ಷಕ್ಕೆ ಖರೀದಿಸಿದರೆ, ಮನೀಶ್ ಪಾಂಡೆ ಅವರನ್ನು ಮೈಸೂರು ವಾರಿಯರ್ಸ್ ಇದೇ ಮೊತ್ತಕ್ಕೆ 12.20 ಲಕ್ಷ) ತಮ್ಮ ತೆಕ್ಕೆಗೆ ಹಾಕಿಕೊಂಡಿತು.
ಬೌಲರ್‌ಗಳ ವಿಭಾಗದಲ್ಲಿ, ಶಿವಮೊಗ್ಗ ಲಯನ್ಸ್ ತಂಡವು ವೇಗಿ ವಿದ್ವತ್ ಕಾವೇರಪ್ಪ ಅವರಿಗಾಗಿ 10.80 ಲಕ್ಷ ದೊಡ್ಡ ಮೊತ್ತವನ್ನು ವ್ಯಯಿಸಿತು. ಬೆಂಗಳೂರು ಬ್ಲಾಸ್ಟರ್ಸ್ ತಂಡವು ಬೌಲರ್ ವಿದ್ಯಾಧರ್ ಪಾಟೀಲ್ ಅವರನ್ನು 8.30 ಲಕ್ಷಕ್ಕೆ ಖರೀದಿಸಿತು. ಇದು ಈ ಋತುವಿನಲ್ಲಿ ಬೌಲರುಗಳಿಗೆ ನೀಡಲಾದ ಆದ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಕೆಎಸ್‌ಸಿಎ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಮೈಸೂರು ವಾರಿಯರ್ಸ್ ಆಲ್‌ರೌಂಡರ್‌ಗಳಾದ ಕೆ. ಗೌತಮ್ ಅವರನ್ನು 4.40 ಲಕ್ಷಕ್ಕೆ ಮತ್ತು ಯಶೋವರ್ಧನ್ ಪರಂತಪ್ ಅವರನ್ನು 2.00 ಲಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಆಲ್‌ರೌಂಡರ್‌ಗಳಿಗೆ ಹೆಚ್ಚಿನ ಒತ್ತು ನೀಡಿದೆ.
ಸಮಿತ್ ದ್ರಾವಿಡ್ 2024ರ ಆವೃತ್ತಿಯಲ್ಲಿ ಅವರು ಮೈಸೂರು ವಾರಿಯರ್ಸ್ ಪರ ಆಡಿದ್ದರೂ, ಪ್ರದರ್ಶನ ಅಷ್ಟೇನೂ ಪ್ರಭಾವಶಾಲಿಯಾಗಿರಲಿಲ್ಲ. ತಂಡ ಟ್ರೋಫಿ ಗೆದ್ದಿದ್ದರೂ, ಸಮಿತ್ ದ್ರಾವಿಡ್ ಅವರ ವೈಯಕ್ತಿಕ ಪ್ರದರ್ಶನವು ನಿರೀಕ್ಷಿತ ಮಟ್ಟದಲ್ಲಿರಲಿಲ್ಲ ಎಂಬುದು ಗಮನಾರ್ಹ.


