Thursday, December 25, 2025
Google search engine
Homeದೇಶಭಾರತೀಯ ಸೇನೆಗೆ 6 ದಶಕ ಸೇವೆ ಸಲ್ಲಿಸಿದ್ದ ಮಿಗ್-21 ಸೆಪ್ಟೆಂಬರ್ ನಲ್ಲಿ ನಿವೃತ್ತಿ!

ಭಾರತೀಯ ಸೇನೆಗೆ 6 ದಶಕ ಸೇವೆ ಸಲ್ಲಿಸಿದ್ದ ಮಿಗ್-21 ಸೆಪ್ಟೆಂಬರ್ ನಲ್ಲಿ ನಿವೃತ್ತಿ!

ಭಾರತೀಯ ಸೇನೆಯಲ್ಲಿ 6 ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಮಿಗ್-21 ವಿಮಾನವನ್ನು ಸೆಪ್ಟೆಂಬರ್ ನಿಂದ ಹಂತ ಹಂತವಾಗಿ ಸೇವೆಯಿಂದ ನಿವೃತ್ತಿ ಹೊಂದಲಿವೆ.

ಕಾರ್ಗಿಲ್ ಸೇರಿದಂಗತೆ ಭಾರತದ ಯುದ್ಧಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮಿಗ್-21 ವಿಮಾನಗಳನ್ನು ಹಂತ ಹಂತವಾಗಿ ಸೇವೆಯನ್ನು ನಿಲ್ಲಿಸಲಿದ್ದು, ಈ ಜಾಗವನ್ನು ತೇಜಸ್ ಎಂಕೆ1ಎ ಯುದ್ಧ ವಿಮಾನಗಳು ತುಂಬಲಿವೆ.

ಪ್ರಸ್ತುತ ಭಾರತೀಯ ಸೇನೆಯಲ್ಲಿ 36 ಮಿಗ್ 21 ವಿಮಾನಗಳು ಕಾರ್ಯಚರಿಸುತ್ತಿವೆ. ಭಾರತದ ವಾಯು ಕ್ಷೇತ್ರವನ್ನು ಸಮರ್ಥವಾಗಿ ರಕ್ಷಿಸುತ್ತಾ ಬಂದಿದ್ದ ಮಿಗ್-21 ವಿಮಾನಗಳು ಒಟ್ಟಾರೆ 900 ಇದ್ದವು. ಇದರಲ್ಲಿ 600 ಭಾರತದಲ್ಲೇ ನಿರ್ಮಾಣವಾಗಿದ್ದವು.

1963ರಲ್ಲಿ ಮೊದಲ ಬಾರಿಗೆ ಭಾರತೀಯ ಸೇನೆಗೆ ಸೇರ್ಪಡೆಯಾದ ರಷ್ಯಾ ನಿರ್ಮಿತ ಮಿಗ್-21 ವಿಮಾನಗಳು 2000 ಇಸವಿ ವರೆಗೂ ಭಾರತದ ಪ್ರಮುಖ ಅಸ್ತ್ರವಾಗಿತ್ತು. ಆದರೆ ಸುಖೋಯ್ 30 ಎಂಕೆಐ ಸೇರ್ಪಡೆಯಾಗುತ್ತಿದ್ದಂತೆ ವರ್ಚಸ್ಸು ಕಳೆದುಕೊಳ್ಳಲು ಆರಂಭಿಸಿತು.

ಇತ್ತೀಚೆಗೆ ಮಿಗ್ -21 ವಿಮಾನಗಳ ನೇವಿಗೇಷನ್ ಸೇರಿದಂತೆ ಮುಂತಾದ ತಂತ್ರಜ್ಞಾನಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಆದರೂ ಆಧುನಿಕ ಯುದ್ಧ ವಿಮಾನಗಳ ಮುಂದೆ ಪೈಪೋಟಿ ನಡೆಸಲು ವಿಫಲವಾಗಿದೆ.

2023 ಅಕ್ಟೋಬರ್ ನಲ್ಲಿ ರಾಜಸ್ಥಾನದ ಬಾರ್ಮರ್ ನಲ್ಲಿ ಮಿಗ್-21 ವಿಮಾನ ಕೊನೆಯ ಬಾರಿಗೆ ಹಾರಾಟ ನಡೆಸಿತ್ತು. ಭಾರತೀಯ ಸೇನೆ ಇದೀಗ ಮಿಗ್-21 ವಿಮಾನಕ್ಕೆ ಬೀಳ್ಕೊಡುಗೆ ನೀಡಲು ನಿರ್ಧರಿಸಿದ್ದು, ಭಾರತದ ಯಶಸ್ಸಿನ ಅವಿಭಾಜ್ಯ ಅಂಗವಾಗಿ ಮಾಡಿದ ಸಾಧನೆಗಳನ್ನು ಸ್ಮರಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments