ತ್ರಿಶೂರ್: ತನ್ನ ಮನೆಯ ವಿಳಾಸಕ್ಕೆ ಒಂಬತ್ತು “ನಕಲಿ” ಮತದಾರರು ನೋಂದಣಿಯಾಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ನಟ ಸುರೇಶ್ ಗೋಪಿ ಗೆದ್ದ ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರದ ಮನೆಯ ಮಾಲೀಕರಾದ ಮಹಿಳೆ ಗಂಭೀರ ಆರೋ ಮಾಡಿದ್ದಾರೆ.
2024ರ ಚುನಾವಣೆಯಲ್ಲಿ ಬಿಜೆಪಿ ಗೆದ್ದ ತ್ರಿಶೂರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ತ್ರಿಶೂರ್ ನಗರದಲ್ಲಿ ತನ್ನ ಕುಟುಂಬದಲ್ಲಿ ತಾನು ಮಾತ್ರ ಮತ ಚಲಾಯಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ತನ್ನ ಇತರ ಕುಟುಂಬ ಸದಸ್ಯರು ತಮ್ಮ ಸ್ವಂತ ಗ್ರಾಮವಾದ ಪೂಚಿನಿಪಡಂನಲ್ಲಿ ಮತ ಚಲಾಯಿಸಲು ತಾನು ಮಾತ್ರ ಮತ ಚಲಾಯಿಸುತ್ತಿದ್ದೇನೆ. ತನ್ನ ಇತರ ಕುಟುಂಬ ಸದಸ್ಯರು ತಮ್ಮ ಸ್ವಂತ ಗ್ರಾಮವಾದ ಪೂಚಿನಿಪಡಂನಲ್ಲಿ ಮತ ಚಲಾಯಿಸಲು ನೋಂದಣಿಯಾಗಿದ್ದಾರೆ ಎಂದು ಆಕೆ ಹೇಳಿದ್ದಾರೆ.
ಪ್ರಸನ್ನಾ ಅವರ ಈ ಆರೋಪಗಳು, ವಿರೋಧ ಪಕ್ಷಗಳು ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಕ ಸುರಿತು ಮಾಡುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಬಂದಿವೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಚುನಾವಣೆಗಳನ್ನು “ಕದಿಯಲು” ಭಾರತೀಯ ಜನತಾ ಪಕ್ಷವು ಮತದಾರರ ವಂಚನೆ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಕೇರಳದಿಂದ ಬಂದ ಈ ಆರೋಪಗಳು ತ್ರಿಶೂರ್ ನಗರದ ಪೂಂಕುನ್ನA ಪ್ರದೇಶದಲ್ಲಿ ಪ್ರಸನ್ನಾ ಅವರ ಮನೆಯ ವಿಳಾಸ ೪ಸಿ, ಕ್ಯಾಪಿಟಲ್ ವಿಲೇಜ್ ಅಪಾರ್ಟೆ್ಮಂಟ್‌ಗೆ ಸಂಬಂಧಿಸಿವೆ. ವರದಿಗಾರರೊಂದಿಗೆ ಮಾತನಾಡಿದ ಪ್ರಸನ್ನಾ, ತನ್ನ ಮನೆಯಲ್ಲಿ ತಾನು ಮಾತ್ರ ತ್ರಿಶೂರ್ ನಗರದಲ್ಲಿ ಮತ ಚಲಾಯಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ತನ್ನ ಕುಟುಂಬದಲ್ಲಿ ಇತರ ನಾಲ್ಕು ವಯಸ್ಕರು ಮತ್ತು ಇಬ್ಬರು ಮಕ್ಕಳಿದ್ದಾರೆ, ಆದರೆ ಆ ವಯಸ್ಕರು ತಮ್ಮ ಪೂರ್ವಿಕರ ಗ್ರಾಮವಾದ ಪೂಚಿನಿಪಡಂನಲ್ಲಿ ಮತ ಚಲಾಯಿಸಲು ನೋಂದಣಿಯಾಗಿದ್ದಾರೆ ಎಂದು ಪ್ರಸನ್ನಾ ಹೇಳಿದ್ದಾರೆ.
ಇತ್ತೀಚೆಗೆ ಯಾರೋ ತನ್ನ ಬಳಿ ಪರಿಶೀಲನೆಗಾಗಿ ಬಂದಾಗ ಒಂಬತ್ತು ಹೆಚ್ಚುವರಿ ಹೆಸರುಗಳ ಬಗ್ಗೆ ತಿಳಿದುಬಂದಿದೆ ಎಂದು ಅವರು ತಿಳಿಸಿದರು.
“ನಮಗೆ ಆ ಒಂಬತ್ತು ಹೆಚ್ಚುವರಿ ಹೆಸರುಗಳಲ್ಲಿ ಯಾರು ಎಂದು ಗೊತ್ತಿಲ್ಲ. ನಾವು ಇಲ್ಲಿ ನಾಲ್ಕು ವರ್ಷಗಳಿಂದ ವಾಸಿಸುತ್ತಿದ್ದೇವೆ. ನಮ್ಮ ಒಪ್ಪಿಗೆ ಇಲ್ಲದೆ ನಮ್ಮ ವಿಳಾಸಕ್ಕೆ ಹೆಸರುಗಳನ್ನು ಸೇರಿಸುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ. ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಅದಕ್ಕೆ ಸಹಿ ಮಾಡಿರುವುದಾಗಿ ತಿಳಿಸಿದರು.
ಈ ಆರೋಪಗಳು ಸಿಪಿಎಂ ನಾಯಕ ಮತ್ತು ತ್ರಿಶೂರ್ನ ಮಾಜಿ ಅಭ್ಯರ್ಥಿ ವಿ.ಎ??. ಸುನೀಲ್ ಕುಮಾರ್ ಅವರ ಆರೋಪಗಳಿಗೆ ಪುಷ್ಟಿ ನೀಡಿವೆ.


