Thursday, September 19, 2024
Google search engine
Homeತಾಜಾ ಸುದ್ದಿಸಿಕ್ಸರ್ ಬಾರಿಸಿದ ಬೆನ್ನಲ್ಲೇ ಮೈದಾನದಲ್ಲೇ ಮೃತಪಟ್ಟ ಯುವಕ!

ಸಿಕ್ಸರ್ ಬಾರಿಸಿದ ಬೆನ್ನಲ್ಲೇ ಮೈದಾನದಲ್ಲೇ ಮೃತಪಟ್ಟ ಯುವಕ!

ಸಿಕ್ಸರ್ ಬಾರಿಸುತ್ತಿದ್ದಂತೆ ಮೈದಾನದಲ್ಲೇ ವ್ಯಕ್ತಿಯೊಬ್ಬ ಕುಸಿದುಬಿದ್ದು ಮೃತಪಟ್ಟ ಆಘಾತಕಾರಿ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ಸಂಭವಿಸಿದೆ.

ಮೀರಾ ರಸ್ತೆ ಸಮೀಪದ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದಾಗ ಎದುರಾಳಿ ಬೌಲರ್ ಗೆ ಮುಂದೆ ಬಂದು ಸಿಕ್ಸರ್ ಬಾರಿಸುತ್ತಿದ್ದಂತೆ ವ್ಯಕ್ತಿ ಕುಸಿದು ಬಿದ್ದಿದ್ದಾನೆ. ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಿಂಕ್ ಸಮವಸ್ತ್ರ ಧರಿಸಿದ ವ್ಯಕ್ತಿ ಸಿಕ್ಸರ್ ಅನ್ನು ಬೌಲರ್ ತಲೆಯ ಮೇಲೆ ಹೊಡೆದು ನಂತರದ ಎಸೆತಕ್ಕೆ ಸಜ್ಜಾಗುತ್ತಿದ್ದರೆ ಮತ್ತೊಂದೆಡೆ ಅಂಪೈರ್ ಸಿಕ್ಸರ್ ಸನ್ನೆ ಮಾಡುತ್ತಿದ್ದಾಗಲೇ ಬ್ಯಾಟ್ಸ್ ಮನ್ ಕುಸಿದು ಬಿದ್ದಿದ್ದಾರೆ.

ಕೂಡಲೇ ಆಟಗಾರರು ಓಡಿ ಬಂದು ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ರಕ್ಷಿಸಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ವ್ಯಕ್ತಿ ಸಾವಿಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments