Monday, May 25, 2026
Google search engine
Homeರಾಜ್ಯಹೆತ್ತವರ ಮುಂದೆಯೇ ಚಿರತೆ ಹೊತ್ತೊಯ್ದ ಮಗು ಶವ ಕಾಡಿನಲ್ಲಿ ಪತ್ತೆ!

ಹೆತ್ತವರ ಮುಂದೆಯೇ ಚಿರತೆ ಹೊತ್ತೊಯ್ದ ಮಗು ಶವ ಕಾಡಿನಲ್ಲಿ ಪತ್ತೆ!

ಹೆತ್ತವರ ಮುಂದೆಯೇ ಚಿರತೆ ಹೊತ್ತೊಯ್ದ ಮಗುವಿನ ಶವ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನವಿಲೇಕಲ್ ಗುಡ್ಡದಲ್ಲಿ ಶವ ಪತ್ತೆಯಾಗಿದೆ.

ಚಿರತೆಯು ಐದು ವರ್ಷದ ಹೆಣ್ಣು ಮಗು ಸಾನ್ವಿಯನ್ನು ಹೊತ್ತೊಯ್ದಿತ್ತು. ಮನೆಯ ಹಿಂದೆ ಕೊಟ್ಟಿಗೆಯಲ್ಲಿ ಮಗುವಿನ ಮೇಲೆ ಚಿರತೆ ದಾಳಿ ಮಾಡಿದಾಗ ಚೀರಾಟ ಕೇಳಿ ಪೋಷಕರು ಬಂದ್ದು, ಹೆತ್ತವರ ಮುಂದೆಯೇ ಚಿರತೆ ಮಗುವನ್ನು ಕಾಡಿಗೆ ಹೊತ್ತೊಯ್ದಿತ್ತು.

ಸ್ಥಳೀಯರು ಹುಡುಕಾಡಿದಾಗ ಕಾಡಂಚಿನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಬೀರೂರು ಪೊಲೀಸ್ ಠಾಣೆಯಲ್ಲಿ ಈ ದಾಖಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಚಿರತೆಯನ್ನು ಸೆರೆ ಹಿಡಿಯಬೇಕು. ಮಗುವಿನ ಸಾವಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಚಿರತೆ ಹಾವಳಿಯಿಂದ ಹೊಲ, ಗದ್ದೆ, ತೋಟಗಳಿಗೆ ಕೆಲಸಕ್ಕೆ ಹೋಗುವ ಕೂಲಿ ಕಾರ್ಮಿಕರು, ಶಾಲಾ ಕಾಲೇಜಿಗೆ ಹೋಗುವ ಮಕ್ಕಳು ಈ ಪ್ರದೇಶದಲ್ಲಿ ಆತಂಕದಿಂದಲೇ ಬದುಕುವ ಸ್ಥಿತಿ ನಿರ್ಮಾಣಗೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments