ಮಗುವಿನ ಹಾಡಲು ಸೈ, ಯುವತಿಯಂತೆ ಹಾಡೋದಕ್ಕೂ ಜೈ. ಮುದುಕಿಯಂತೆ ಹಾಡಿದರೂ ಮೈ ಜುಂ ಎನಿಸುವಂತೆ ಹಾಡುತ್ತಿದ್ದ ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಖ್ಯಾತರಾಗಿದ್ದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಬದುಕಿನ ಹಾಡು ಮುಗಿಸಿದ್ದಾರೆ.
ಒಂದು ಕಾಲದಲ್ಲಿ ಪ್ರಣಯ ಹಾಡೆಂದರೂ ಸರಿ, ವಿರಹದ ಹಾಡದರೂ ಸರಿ, ಪುಟ್ಟ ಮಕ್ಕಳ ತುಂಟಾಟದ ಹಾಡಾದರೂ ಸರಿ. ನೋವಿನ ಗೀತೆಯಾದರೂ ಸರಿ ಎಲ್ಲದಕ್ಕೂ ಮೊದಲ ಆಯ್ಕೆಯಾಗುತ್ತಿದ್ದುದು ಎಸ್. ಜಾನಕಿ.
ಜಪಾನ್ ಸೇರಿದಂತೆ ವಿದೇಶೀ ಭಾಷೆಗಳಲ್ಲಿ ಅಲ್ಲದೇ ಕನ್ನಡ, ಮಲಯಾಳಂ, ತೆಲುಗು, ತಮಿಳು, ಕೊಂಕಣಿ, ಸೇರಿದಂತೆ ಭಾರತದ 20ಕ್ಕೂ ಅಧಿಕ ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಜಾನಕಿ ಸಾಂಸ್ಕೃತಿ ನಗರಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ವಿಧಿವಶರಾದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್ ಜಾನಕಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.
4 ಪ್ರತಿಷ್ಠಿತ ಚಲನ ಚಿತ್ರ ಪ್ರಶಸ್ತಿ, 33 ವಿವಿಧ ರಾಜ್ಯಗಳ ರಾಜ್ಯ ಪ್ರಶಸ್ತಿ, 2013ರಲ್ಲಿ ಪದ್ಮಭೂಷಣ, ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ, ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿ ಹಾಗೂ ತಮ್ಮ ಮೆಚ್ಚಿನ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗೆ ಎಸ್. ಜಾನಕಿ ಭಾಜನರಾಗಿದ್ದಾರೆ.



