ಮುಂಬೈ: ವಿಶ್ವದ ಪ್ರಮುಖ K-pop ಉತ್ಸವಗಳಲ್ಲಿ ಒಂದಾದ Weverse Con Festival ಇದೇ ಮೊದಲ ಬಾರಿಗೆ ಭಾರತಕ್ಕೆ ಬರಲಿದೆ. ಹೈಬ್ ಆಯೋಜಿಸುತ್ತಿರುವ ಈ ಎರಡು ದಿನಗಳ ಸಂಗೀತ ಉತ್ಸವವು 2027ರ ಮಾರ್ಚ್ 27 ಮತ್ತು 28ರಂದು ನವದೆಹಲಿಯಲ್ಲಿ ನಡೆಯಲಿದೆ. ಕೊರಿಯಾದ ಹೊರಗೆ ನಡೆಯಲಿರುವ ಮೊದಲ Weverse Con Festival ಇದಾಗಿದೆ.
ಭಾರತದಲ್ಲಿ ನಡೆಯಲಿರುವ ಪ್ರಮುಖ K-pop ಉತ್ಸವಗಳಲ್ಲಿ ಇದೂ ಒಂದಾಗಿದ್ದು, ದೇಶ-ವಿದೇಶಗಳ ಜನಪ್ರಿಯ ಕಲಾವಿದರ ಸಂಗೀತ ಪ್ರದರ್ಶನಗಳು, ಅದ್ಧೂರಿ ಕಾರ್ಯಕ್ರಮಗಳು ಹಾಗೂ ಅಭಿಮಾನಿಗಳಿಗಾಗಿ ವಿಶೇಷ ಚಟುವಟಿಕೆಗಳು ಒಂದೇ ವೇದಿಕೆಯಲ್ಲಿ ನಡೆಯಲಿವೆ.
Weverse ಮೂಲಕ ವಿಶ್ವದಾದ್ಯಂತದ ಅಭಿಮಾನಿಗಳ ಸಮುದಾಯವನ್ನು ನೇರ ಅನುಭವದೊಂದಿಗೆ ಸಂಪರ್ಕಿಸುವುದು ಈ ಉತ್ಸವದ ವಿಶೇಷತೆಯಾಗಿದೆ. ಇಲ್ಲಿ ಕೇವಲ ಸಂಗೀತ ಕಾರ್ಯಕ್ರಮಗಳಷ್ಟೇ ಅಲ್ಲದೆ, ಅಭಿಮಾನಿಗಳೊಂದಿಗೆ ಸಂವಾದ, ವಿವಿಧ ಮನರಂಜನಾ ಚಟುವಟಿಕೆಗಳು, ಬ್ರ್ಯಾಂಡ್‌ಗಳ ವಿಶೇಷ ಕಾರ್ಯಕ್ರಮಗಳು ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಅನುಭವಗಳಿಗೂ ಅವಕಾಶ ಇರಲಿದೆ.
ಕಲಾವಿದರು ಮತ್ತು ಅಭಿಮಾನಿಗಳ ನಡುವಿನ ನೇರ ಸಂಪರ್ಕಕ್ಕೆ ಈ ಉತ್ಸವದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದರು ಮತ್ತು ಇತರ ಅಭಿಮಾನಿಗಳೊಂದಿಗೆ ಸಮಯ ಕಳೆಯಲು ಹಲವು ಅವಕಾಶಗಳು ಇರಲಿವೆ. ಭಾರತೀಯ ಮತ್ತು K-pop ಕಲಾವಿದರ ಜೊತೆಗೆ, ವಿವಿಧ ದೇಶಗಳ ಕಲಾವಿದರು ಒಂದೇ ವೇದಿಕೆಯಲ್ಲಿ ಸೇರಿ ವಿಶೇಷ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಈ ಕಾರ್ಯಕ್ರಮಗಳು ಉತ್ಸವದ ಪ್ರಮುಖ ಆಕರ್ಷಣೆಯಾಗಲಿವೆ.
ಹೈಬ್ ನ ಸಿಇಒ ಜಾಸನ್ ಜೈಸಾಂಗ್ ಲೀ ಮಾತನಾಡಿ, “Weverse Con Festival India ಮೂಲಕ ನಮ್ಮ ‘multi-home, multi-genre’ ಕಾರ್ಯತಂತ್ರಕ್ಕೆ ಹೊಸ ಅಧ್ಯಾಯ ಆರಂಭವಾಗಲಿದೆ. ಜಾಗತಿಕ ಮಟ್ಟದಲ್ಲಿ ಹೈಬ್ ನ ಹೈಬಿನ ಬೆಳವಣಿಗೆಗೆ ಭಾರತ ಪ್ರಮುಖ ಮಾರುಕಟ್ಟೆಯಾಗಿದೆ. ಭಾರತದ ಸೃಜನಶೀಲತೆ ಮತ್ತು ನಮ್ಮ ಜಾಗತಿಕ ಅನುಭವವನ್ನು ಒಟ್ಟುಗೂಡಿಸಿ, ಭಾರತೀಯ ಪ್ರೇಕ್ಷಕರಿಗೆ ಹತ್ತಿರವಾಗುವ ಹೊಸ ಅನುಭವವನ್ನು ನೀಡಲು ನಾವು ಬಯಸಿದ್ದೇವೆ. ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದರೊಂದಿಗೆ ಸಂಪರ್ಕ ಸಾಧಿಸಿ, ಸಂಭ್ರಮಿಸಿ ಮತ್ತು ಹೊಸ ಅನುಭವಗಳನ್ನು ಪಡೆಯುವಂತಹ ಉತ್ಸವವನ್ನು ಭಾರತದಲ್ಲಿ ಆಯೋಜಿಸಲು ನಾವು ಉತ್ಸುಕರಾಗಿದ್ದೇವೆ,” ಎಂದರು.
Weverse ಕಂಪನಿಯ ಅಧ್ಯಕ್ಷ ಝೋಯಿಲ್ ಯಾಂಗ್ ಮಾತನಾಡಿ, “ಭಾರತವು ವಿಶ್ವದ ಅತಿ ದೊಡ್ಡ K-pop ಅಭಿಮಾನಿ ಸಮುದಾಯಗಳನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಹೈಬ್ ಜೊತೆಗೆ Weverse Con Festival ಅನ್ನು ಭಾರತಕ್ಕೆ ತರಲು ನಾವು ಸಂತೋಷಪಡುತ್ತೇವೆ. Weverse ಮೂಲಕ ಆನ್‌ಲೈನ್‌ನಲ್ಲಿ ಕಲಾವಿದರು ಮತ್ತು ಅಭಿಮಾನಿಗಳನ್ನು ಸಂಪರ್ಕಿಸುತ್ತಿದ್ದೇವೆ. ಇದೀಗ ಈ ಉತ್ಸವದ ಮೂಲಕ ಆ ಅನುಭವವನ್ನು ಅಭಿಮಾನಿಗಳಿಗೆ ನೇರವಾಗಿ ನೀಡಲು ನಾವು ಬಯಸಿದ್ದೇವೆ,” ಎಂದರು.



