Friday, October 9, 2026
Google search engine
Homeಬೆಂಗಳೂರುಕ್ರಿಸ್‌ಮಸ್: 1 ಟನ್ ಪ್ಲಮ್ ಕೇಕ್ ಮಿಕ್ಸಿಂಗ್ ಸಮಾರಂಭ ಆರಂಭಿಸಿದ ಎಂ5 ಇಸಿಟಿ ಮಾಲ್

ಕ್ರಿಸ್‌ಮಸ್: 1 ಟನ್ ಪ್ಲಮ್ ಕೇಕ್ ಮಿಕ್ಸಿಂಗ್ ಸಮಾರಂಭ ಆರಂಭಿಸಿದ ಎಂ5 ಇಸಿಟಿ ಮಾಲ್

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕ್ರಿಸ್‌ಮಸ್ ಹಬ್ಬದ ಸಡಗರ ಅವಧಿಗೂ ಮುನ್ನವೇ ಕಾಲಿಟ್ಟಿದೆ! ಹಬ್ಬದ ದಿನಗಣನೆಗೆ ಅಧಿಕೃತ ಚಾಲನೆ ನೀಡುವ ಸಲುವಾಗಿ, ಎಂ5 ಮಹೇಂದ್ರ ಗ್ರೂಪ್ ವತಿಯಿಂದ ಅಭಿವೃದ್ಧಿಪಡಿಸಲಾದ ದಕ್ಷಿಣ ಬೆಂಗಳೂರಿನ ಮೊಟ್ಟಮೊದಲ ಇಂಟಿಗ್ರೇಟೆಡ್ ಮಾಲ್ ಆದ ಎಂ5 ಇಸಿಟಿ ಮಾಲ್, ಲುಲು ಡೈಲಿ ಸಹಯೋಗದೊಂದಿಗೆ ಜನಮೆಚ್ಚಿದ ಸಾಂಪ್ರದಾಯಿಕ ಕೇಕ್ ಮಿಕ್ಸಿಂಗ್ ಸಂಭ್ರಮವನ್ನು ಅದ್ಧೂರಿ 1 ಟನ್ ಪ್ಲಮ್ ಕೇಕ್ ಮಿಕ್ಸಿಂಗ್ ಸಮಾರಂಭದ ಮೂಲಕ ಅನಾವರಣಗೊಳಿಸಿದೆ.

ಈ ಸಮಾರಂಭವು ಮುಂಬರುವ ಶನಿವಾರ, ಅಕ್ಟೋಬರ್ 10, 2026ರಂದು ಸಂಜೆ 4.00 ರಿಂದ 6.00ಗಂಟೆಯವರೆಗೆ ನಡೆಯಲಿದ್ದು, ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಕ್ರಿಸ್‌ಮಸ್ ಹಬ್ಬಕ್ಕೆ ಇನ್ನು ನಿಖರವಾಗಿ 60 ದಿನಗಳು ಬಾಕಿ ಇರುವಂತೆಯೇ, ಮಾಲ್ ತನ್ನ ಹಬ್ಬದ ಆಚರಣೆಯನ್ನು ಅತ್ಯಂತ ಅದ್ಧೂರಿ ಹಾಗೂ ವಿಶಿಷ್ಟ ಅನುಭವವನ್ನಾಗಿ ಪರಿವರ್ತಿಸಿದೆ. ಇದು ಕೇವಲ ಕೇಕ್ ತಯಾರಿಕೆಯಷ್ಟೇ ಅಲ್ಲದೆ, ಪ್ರೀತಿ ಮತ್ತು ಒಗ್ಗಟ್ಟಿನ ಸಂಕೇತವಾಗಿರುವ ಈ ಸಂಪ್ರದಾಯದಲ್ಲಿ ಗ್ರಾಹಕರು, ಕುಟುಂಬಸ್ಥರು ಹಾಗೂ ಸಂದರ್ಶಕರು ಉತ್ಸಾಹದಿಂದ ಕೈಜೋಡಿಸಿ ಭಾಗಿಯಾಗಲು ಮುಕ್ತ ಆಹ್ವಾನ ನೀಡಿದೆ.

40 ಅಡಿ x 4 ಅಡಿ ವಿಸ್ತೀರ್ಣದ ಬೃಹತ್ ಹಾಗೂ ಆಕರ್ಷಕ ವೇದಿಕೆಯಲ್ಲಿ ಸಿದ್ಧಪಡಿಸಲಾದ ಈ ಸಮಾರಂಭವು ಇಡೀ ಮಾಲ್ ಅನ್ನು ಒಂದು ಸಂಭ್ರಮದ ಹಬ್ಬದ ಕೂಟವನ್ನಾಗಿ ಬದಲಾಯಿಸಿತು. ಒಣಹಣ್ಣುಗಳು (ಡ್ರೈ ಫ್ರೂಟ್ಸ್), ನಟ್ಸ್ ಹಾಗೂ ಹಬ್ಬದ ವಿಶೇಷ ಪದಾರ್ಥಗಳ ಸಮೃದ್ಧ ಮಿಶ್ರಣವು ಕ್ರಿಸ್‌ಮಸ್ ಪ್ಲಮ್ ಕೇಕ್‌ಗೆ ಅಗತ್ಯವಿರುವ ಸಾಂಪ್ರದಾಯಿಕ ರುಚಿಯ ಶ್ರೀಮಂತ ಅಡಿಪಾಯವನ್ನು ಸೃಷ್ಟಿಸಿತು. ಈ ಸಮಾರಂಭದ ಭವ್ಯತೆಯು ಸಂಭ್ರಮದ ತೀವ್ರತೆಯನ್ನು ಹೆಚ್ಚಿಸಿದ್ದು, ಮಾಲ್‌ನಲ್ಲಿದ್ದ ಗ್ರಾಹಕರು ಮತ್ತು ಕುಟುಂಬಗಳಿಗೆ ಕಣ್ಮನ ಸೆಳೆಯುವ ಅತ್ಯಂತ ಆಕರ್ಷಕ ಅನುಭವವಾಗಿ ಮೂಡಿಬಂತು.

ಈ ಸಾಂಪ್ರದಾಯಿಕ ಕೇಕ್-ಮಿಕ್ಸಿಂಗ್ ಆಚರಣೆಯು ತನ್ನದೇ ಆದ ವಿಶೇಷ ಮಹತ್ವವನ್ನು ಒಳಗೊಂಡಿದೆ. ಸಿದ್ಧಪಡಿಸಲಾದ ಈ ಸಮೃದ್ಧ ಮಿಶ್ರಣವನ್ನು ಹಲವು ವಾರಗಳ ಕಾಲ ಹಾಗೆಯೇ ಬಿಟ್ಟು ಹದಗೊಳಿಸಲಾಗುತ್ತದೆ (ಮೆಚ್ಯೂರ್ ಆಗಲು ಬಿಡಲಾಗುತ್ತದೆ). ಇದರಿಂದ ಎಲ್ಲಾ ಪದಾರ್ಥಗಳು ಸಂಪೂರ್ಣವಾಗಿ ನೆನೆದು, ಎಲ್ಲರೂ ಕಾತರದಿಂದ ಕಾಯುವ ಕ್ರಿಸ್‌ಮಸ್ ಪ್ಲಮ್ ಕೇಕ್ ಆಗಿ ಬೇಕ್ ಆಗುವ ಮುನ್ನ ತನ್ನ ವಿಶಿಷ್ಟ ಘಮ ಹಾಗೂ ಪರಿಮಳವನ್ನು ಪಡೆದುಕೊಳ್ಳಲು ಸಮಯಾವಕಾಶ ಸಿಗುತ್ತದೆ.

ಈ ಸಂಭ್ರಮಾಚರಣೆಯ ಕುರಿತು ಮಾತನಾಡಿದ ಎಂ5 ಮಹೇಂದ್ರ ಗ್ರೂಪ್‌ನ ಎಂ5 ಇಸಿಟಿ ಮಾಲ್‌ನ ಸೆಂಟರ್ ಡೈರೆಕ್ಟರ್ ರಾಜೇಶ್ ನಾಯ್ಡು ಅವರು, “ಕ್ರಿಸ್‌ಮಸ್ ಎಂದರೆ ಒಗ್ಗಟ್ಟು ಮತ್ತು ಸಾಮರಸ್ಯದ ಸಂಭ್ರಮ. ಹಬ್ಬದ ಋತು ಅಧಿಕೃತವಾಗಿ ಆರಂಭವಾಗುವುದಕ್ಕೂ ಮುನ್ನವೇ ಆ ಸಡಗರದ ಅನುಭವವನ್ನು ಎಂ5 ಇಸಿಟಿ ಮಾಲ್‌ನಲ್ಲಿ ಕಟ್ಟಿಕೊಡಲು ನಾವು ಬಯಸಿದ್ದೆವು. ಕ್ರಿಸ್‌ಮಸ್‌ಗೆ 60 ದಿನ ಮುನ್ನವೇ ಇಂತಹ ಭವ್ಯ ಕೇಕ್-ಮಿಕ್ಸಿಂಗ್ ಸಮಾರಂಭದೊಂದಿಗೆ ದಿನಗಣನೆಯನ್ನು ಆರಂಭಿಸುವುದಕ್ಕಿಂತ ಅತ್ಯುತ್ತಮ ಮಾರ್ಗ ಇನ್ನೊಂದಿಲ್ಲ. ಈ ಆಚರಣೆಯ ಬೃಹತ್ ಪ್ರಮಾಣ, ನಮ್ಮ ಗ್ರಾಹಕರ ಉತ್ಸಾಹಭರಿತ ಭಾಗವಹಿಸುವಿಕೆ ಹಾಗೂ ಸಮಾರಂಭದುದ್ದಕ್ಕೂ ಕಂಡುಬಂದ ಸಂಭ್ರಮದ ಶಕ್ತಿಯು ನಮ್ಮ ಹಬ್ಬದ ಉತ್ಸಾಹಕ್ಕೆ ನಿಜಕ್ಕೂ ಜೀವ ತುಂಬಿದೆ. ಕ್ರಿಸ್‌ಮಸ್ ಹಬ್ಬ ಸಮೀಪಿಸುತ್ತಿದ್ದಂತೆ ಈ ಸಂಭ್ರಮವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ನಾವು ಎದುರುನೋಡುತ್ತಿದ್ದೇವೆ” ಎಂದು ತಿಳಿಸಿದರು.

ಆಚರಣೆಯ ಕುರಿತು ಮಾತನಾಡಿದ ಲುಲು ಗ್ರೂಪ್ ಇಂಡಿಯಾದ ಕರ್ನಾಟಕ ನಿರ್ದೇಶಕ ಶ್ರೀ ನೋಮನ್ ಅಜೀಜ್ ಖಾನ್ ಅವರು, “ಲುಲು ಕೇಕ್ ಮಿಕ್ಸಿಂಗ್ ಸಮಾರಂಭವು ಜನರನ್ನು ಒಂದೆಡೆ ಬೆಸೆಯುವ ಮತ್ತು ಹಬ್ಬದ ಋತುವಿನ ಆರಂಭವನ್ನು ಸಾರುವ ಒಂದು ಸುಂದರ ಸಂಪ್ರದಾಯವಾಗಿದೆ. ಎಂ5 ಇಸಿಟಿ ಮಾಲ್ ಜತೆಗೂಡಿ ಇದನ್ನು ಆಚರಿಸಲು ಹಾಗೂ ಎಲೆಕ್ಟ್ರಾನಿಕ್ ಸಿಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಮುದಾಯಗಳು ಹಾಗೂ ಕುಟುಂಬಗಳನ್ನು ಸ್ವಾಗತಿಸಲು ನಾವು ಹರ್ಷಿಸುತ್ತೇವೆ. ಎಂ5 ನಲ್ಲಿರುವ ನಮ್ಮ 45,000 ಚದರ ಅಡಿ ವಿಸ್ತೀರ್ಣದ ಲುಲು ಡೈಲಿ ಮಳಿಗೆಯು ತಾಜಾ ಉತ್ಪನ್ನಗಳು, ಉತ್ತಮ ಗುಣಮಟ್ಟದ ದಿನಸಿ, ಶುಚಿ-ರುಚಿಯಾದ ನೈರ್ಮಲ್ಯಯುಕ್ತ ಆಹಾರ ಮತ್ತು ಹಬ್ಬದ ಅಗತ್ಯ ಸಾಮಗ್ರಿಗಳನ್ನು ಒಂದೇ ಸೂರಿನಡಿ ಒದಗಿಸುತ್ತಿದೆ. ಪ್ರತಿಯೊಬ್ಬ ಗ್ರಾಹಕರೂ ಲುಲು ಸಂಸ್ಥೆಯೊಂದಿಗೆ ಗುರುತಿಸಿಕೊಳ್ಳುವ ಸಂತೋಷ, ತಾಜಾತನ ಮತ್ತು ಮೌಲ್ಯವನ್ನು ಪಡೆದುಕೊಳ್ಳುವುದೇ ನಮ್ಮ ಮುಖ್ಯ ಗುರಿಯಾಗಿದೆ. ಇಂದು ನಮ್ಮೊಂದಿಗೆ ಕೈಜೋಡಿಸಿದ ಸಾರ್ವಜನಿಕರ ಅಪಾರ ಉತ್ಸಾಹವು ಈ ಬಾರಿಯ ಕ್ರಿಸ್‌ಮಸ್‌ಗೆ ಅತ್ಯಂತ ಸ್ಮರಣೀಯ ಆರಂಭವನ್ನು ಒದಗಿಸಿದೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments