Friday, October 9, 2026
Google search engine
Homeವಾಣಿಜ್ಯಪೋಸ್ಟ್‌ ಪೇಯ್ಡ್ ಪ್ಲಾನ್‌ ಗಳಲ್ಲಿ ಉಚಿತ ಇಂಟರ್‌ ನ್ಯಾಷನಲ್ ರೋಮಿಂಗ್ ನೀಡಿದ ಏರ್‌ಟೆಲ್

ಪೋಸ್ಟ್‌ ಪೇಯ್ಡ್ ಪ್ಲಾನ್‌ ಗಳಲ್ಲಿ ಉಚಿತ ಇಂಟರ್‌ ನ್ಯಾಷನಲ್ ರೋಮಿಂಗ್ ನೀಡಿದ ಏರ್‌ಟೆಲ್

ಬೆಂಗಳೂರು: ಭಾರತದ ಪ್ರಮುಖ ದೂರಸಂಪರ್ಕ ಸೇವಾ ಪೂರೈಕೆದಾರರಲ್ಲಿ ಒಂದಾದ ಭಾರ್ತಿ ಏರ್‌ಟೆಲ್, ಇನ್ನಷ್ಟು ಹೆಚ್ಚಿನ ಪ್ರಯೋಜನಗಳನ್ನು ಒಳಗೊಂಡ ನೂತನ ಪೋಸ್ಟ್‌ ಪೇಯ್ಡ್ ಪ್ಲಾನ್‌ಗಳನ್ನು ಇಂದು ಪ್ರಕಟಿಸಿದೆ. ಅಕ್ಟೋಬರ್ 8, 2026 ರಿಂದ ಗ್ರಾಹಕರು ಈ ಹೊಸ ಪೋಸ್ಟ್‌ ಪೇಯ್ಡ್ ಪ್ಲಾನ್‌ ಗಳ ಮೂಲಕ ಎಲ್ಲಾ ಹಾಲಿ ಪ್ರಯೋಜನಗಳ ಜೊತೆಗೆ ಪ್ರತಿ ವರ್ಷ ಒಂದು ಅಂತರರಾಷ್ಟ್ರೀಯ ಪ್ರವಾಸದಲ್ಲಿ ಉಚಿತ ರೋಮಿಂಗ್ ಸೌಲಭ್ಯವನ್ನು ಆನಂದಿಸಬಹುದಾಗಿದೆ.

ಈ ಉಚಿತ ಇಂಟರ್‌ನ್ಯಾಷನಲ್ ರೋಮಿಂಗ್ ಪ್ಯಾಕ್ 5 ದಿನಗಳ ಮಾನ್ಯತೆ (ವ್ಯಾಲಿಡಿಟಿ) ಹೊಂದಿದ್ದು, 5 ಜಿಬಿ ಡೇಟಾ, 60 ನಿಮಿಷಗಳ ಕರೆಗಳು, 25 ಹೊರಹೋಗುವ (ಔಟ್‌ಗೋಯಿಂಗ್) ಎಸ್ಎಎಸ್ ಗಳು ಹಾಗೂ ಉಚಿತ ಒಳಬರುವ (ಇನ್‌ಕಮಿಂಗ್) ಎಸ್ಎಂಎಸ್ ಗಳನ್ನು ಒದಗಿಸುತ್ತದೆ. ಗ್ರಾಹಕರು ಈ 5 ದಿನಗಳ ಪ್ಯಾಕ್ ಅನ್ನು ತಮಗೆ ಬೇಕಾದ ನಿಖರ ಸಮಯದಲ್ಲಿ ಸಕ್ರಿಯಗೊಳಿಸಿಕೊಳ್ಳುವ ಸಂಪೂರ್ಣ ಸೌಲಭ್ಯವನ್ನು ಹೊಂದಿದ್ದು, ವಿದೇಶ ಪ್ರಯಾಣದ ವೇಳೆ ಸಂಪರ್ಕದಲ್ಲಿರುವುದು ಇನ್ನಷ್ಟು ಸುಲಭವಾಗಲಿದೆ. ಏರ್‌ಟೆಲ್ ಪೋಸ್ಟ್‌ಪೇಯ್ಡ್ ಫ್ಯಾಮಿಲಿ ಪ್ಲಾನ್ ಹೊಂದಿರುವ ಗ್ರಾಹಕರಿಗೆ, ಆ ಪ್ಲಾನ್‌ನಲ್ಲಿ ಒಳಗೊಂಡಿರುವ ಪ್ರತಿಯೊಬ್ಬ ಕುಟುಂಬ ಸದಸ್ಯರಿಗೂ ಈ ಉಚಿತ ಇಂಟರ್‌ನ್ಯಾಷನಲ್ ರೋಮಿಂಗ್ ಆಯ್ಕೆ ಲಭ್ಯವಿರುತ್ತದೆ.

ಫಾಸ್ಟ್ ಲೇನ್ ಟೆಕ್ನಾಲಜಿ, ಅನ್‌ಲಿಮಿಟೆಡ್ ಡೇಟಾ, ಸ್ಪ್ಯಾಮ್ ಹಾಗೂ ವಂಚನೆಯ ಲಿಂಕ್‌ಗಳ ವಿರುದ್ಧ ನೆಟ್‌ವರ್ಕ್ ಮಟ್ಟದ ರಕ್ಷಣೆಯೊಂದಿಗೆ ಅತ್ಯುತ್ತಮ ಅನುಭವ ನೀಡುವ ಏರ್‌ಟೆಲ್ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳಿಗೆ ಉಚಿತ ಇಂಟರ್‌ನ್ಯಾಷನಲ್ ರೋಮಿಂಗ್ ಹೊಸ ಸೇರ್ಪಡೆಯಾಗಿದೆ. ಗ್ರಾಹಕರು ವಿವಿಧ ಮನರಂಜನಾ ಚಂದಾದಾರಿಕೆಗಳನ್ನು (ಸಬ್‌ಸ್ಕ್ರಿಪ್ಷನ್‌ಗಳು) ಆನಂದಿಸುವುದರ ಜೊತೆಗೆ, ಏರ್‌ಟೆಲ್ ಪೋಸ್ಟ್‌ಪೇಯ್ಡ್ ಅಡ್ವಾಂಟೇಜ್ ಕ್ಲಬ್ ಮೂಲಕ ಕಾಮಿಡಿ ಶೋಗಳು, ಸಿನಿಮಾ ಪ್ರೀಮಿಯರ್‌ಗಳು ಮತ್ತು ಸಂಗೀತ ಕಛೇರಿಗಳು ಸೇರಿದಂತೆ ಹಲವು ವಿಶೇಷ ಅನುಭವಗಳ ಪ್ರವೇಶಾವಕಾಶವನ್ನೂ ಪಡೆಯಬಹುದು.

ಈ ಬಿಡುಗಡೆ ಕುರಿತು ಮಾತನಾಡಿದ ಭಾರ್ತಿ ಏರ್‌ಟೆಲ್‌ನ ಮಾರ್ಕೆಟ್ ಆಪರೇಷನ್ಸ್ ನಿರ್ದೇಶಕ ಅಮಿತ್ ತ್ರಿಪಾಠಿ ಅವರು, “ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಶ್ರೇಣಿಯ ಅನುಭವವನ್ನು ನೀಡುವುದೇ ನಮಗೆ ಪೋಸ್ಟ್‌ಪೇಯ್ಡ್‌ನ ಮುಖ್ಯ ಉದ್ದೇಶವಾಗಿದೆ. ದೇಶದಲ್ಲೇ ಶ್ರೇಷ್ಠ ನೆಟ್‌ವರ್ಕ್ ಅನುಭವ ನಮ್ಮಲ್ಲಿದ್ದು, ನಮ್ಮ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ 5ಜಿ ಯಲ್ಲಿ ಫಾಸ್ಟ್ ಲೇನ್ ಟೆಕ್ನಾಲಜಿ ಹಾಗೂ ಸ್ಪ್ಯಾಮ್ ಮತ್ತು ವಂಚನೆಗಳಿಂದ ನಿರಂತರ ರಕ್ಷಣೆಯನ್ನು ಒದಗಿಸುತ್ತಿದ್ದೇವೆ. ಅಷ್ಟೇ ಅಲ್ಲದೆ, ಗ್ರಾಹಕರ ದೈನಂದಿನ ಜೀವನವನ್ನು ಉತ್ಕೃಷ್ಟಗೊಳಿಸುವ ಮನರಂಜನೆ ಮತ್ತು ಸೇವೆಗಳ ಮೂಲಕ ಅತ್ಯುತ್ತಮ ಮೌಲ್ಯವನ್ನು ನೀಡುತ್ತಿದ್ದೇವೆ. ಈಗ ಅವರಿಗೆ ಉಚಿತ ಇಂಟರ್‌ನ್ಯಾಷನಲ್ ರೋಮಿಂಗ್ ಕೂಡ ಲಭ್ಯವಾಗುತ್ತಿದೆ. ಗ್ರಾಹಕರಿಗೆ ನಿರಂತರವಾಗಿ ಉನ್ನತ ಮಟ್ಟದ ಸೇವೆ ಒದಗಿಸಲು ಮತ್ತು ಅವರು ಏರ್‌ಟೆಲ್ ಪೋಸ್ಟ್‌ ಪೇಯ್ಡ್ ಆಯ್ಕೆ ಮಾಡಿಕೊಳ್ಳಲು ಇನ್ನಷ್ಟು ಹೊಸ ಕಾರಣಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.

ಹೊಸ ಪ್ಲಾನ್‌ಗಳನ್ನು ಪಡೆಯುವುದು ಹೇಗೆ?

ಅಕ್ಟೋಬರ್ 8, 2026 ರಿಂದ ಜಾರಿಗೆ ಬರುವಂತೆ, ಏರ್‌ಟೆಲ್ ಪೋಸ್ಟ್‌ ಪೇಯ್ಡ್ ಆಯ್ಕೆ ಮಾಡಿಕೊಳ್ಳುವ ಎಲ್ಲಾ ಗ್ರಾಹಕರಿಗೂ ಈ ಪ್ಲಾನ್‌ಗಳು ಲಭ್ಯವಿರುತ್ತವೆ. ಹಾಲಿ ಏರ್‌ಟೆಲ್ ಗ್ರಾಹಕರು (ಹಳೆಯ ಪೋಸ್ಟ್‌ ಪೇಯ್ಡ್ ಅಥವಾ ಪ್ರಿಪೇಯ್ಡ್ ಎರಡೂ ಬಳಕೆದಾರರು) ಏರ್‌ಟೆಲ್ ಆ್ಯಪ್ ಮೂಲಕ ಅಥವಾ ಹತ್ತಿರದ ಏರ್‌ಟೆಲ್ ಸ್ಟೋರ್‌ಗೆ ಭೇಟಿ ನೀಡುವ ಮೂಲಕ ಸುಲಭವಾಗಿ ಈ ಪ್ಲಾನ್‌ಗಳಿಗೆ ಅಪ್‌ಗ್ರೇಡ್ ಆಗಬಹುದು. ಏರ್‌ಟೆಲ್ ಹೊರತುಪಡಿಸಿ ಇತರ ನೆಟ್‌ವರ್ಕ್ ಬಳಕೆದಾರರು ಏರ್‌ಟೆಲ್ ಆ್ಯಪ್ ಮೂಲಕ ಸ್ವಿಚಿಂಗ್ ರಿಕ್ವೆಸ್ಟ್ ಸಲ್ಲಿಸಿ ಅಥವಾ ಏರ್‌ಟೆಲ್ ಸ್ಟೋರ್‌ಗೆ ಭೇಟಿ ನೀಡಿ ಏರ್‌ಟೆಲ್ ಪೋಸ್ಟ್‌ಪೇಯ್ಡ್‌ಗೆ ಬದಲಾಗಬಹುದು.
ಹೊಚ್ಚ-ಹೊಸ ಏರ್‌ಟೆಲ್ ಪೋಸ್ಟ್‌ ಪೇಯ್ಡ್ ಪ್ಲಾನ್‌ಗಳು

ಪ್ಲಾನ್ ಸಿಮ್‌ಗಳ ಸಂಖ್ಯೆ (# of SIMs) ಟೆಲ್ಕೋ ಪ್ರಯೋಜನಗಳು ಸುರಕ್ಷತಾ ಫೀಚರ್‌ಗಳು ಸಬ್‌ಸ್ಕ್ರಿಪ್ಷನ್‌ಗಳು ಇಂಟರ್‌ನ್ಯಾಷನಲ್ ರೋಮಿಂಗ್
₹499 ಒಬ್ಬರಿಗೆ (ಇಂಡಿವಿಜುವಲ್) ಅನ್‌ಲಿಮಿಟೆಡ್ ಡೇಟಾ ಮತ್ತು ಕಾಲಿಂಗ್ ಸ್ಪ್ಯಾಮ್ ಮತ್ತು ವಂಚನೆ ತಡೆಗಟ್ಟುವಿಕೆ ಎಕ್ಸ್‌ ಸ್ಟ್ರೀಮ್ ಪ್ಲೇ ಪ್ರೀಮಿಯಂ, ಗೂಗಲ್ ಒನ್ ಪ್ರತಿ ವರ್ಷ ಪ್ರತಿ ಸಿಮ್‌ಗೆ 1 ಉಚಿತ ಟ್ರಿಪ್
₹749 2 ಸದಸ್ಯರ ಕುಟುಂಬ ಅನ್‌ಲಿಮಿಟೆಡ್ ಡೇಟಾ ಮತ್ತು ಕಾಲಿಂಗ್ ಸ್ಪ್ಯಾಮ್ ಮತ್ತು ವಂಚನೆ ತಡೆಗಟ್ಟುವಿಕೆ ಅಮೆಜಾನ್ ಪ್ರೈಮ್, ಜಿಯೋಹಾಟ್‌ಸ್ಟಾರ್, ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂ, ಗೂಗಲ್ ಒನ್ ಪ್ರತಿ ವರ್ಷ ಪ್ರತಿ ಸಿಮ್‌ಗೆ 1 ಉಚಿತ ಟ್ರಿಪ್
₹1049 3 ಸದಸ್ಯರ ಕುಟುಂಬ ಅನ್‌ಲಿಮಿಟೆಡ್ ಡೇಟಾ ಮತ್ತು ಕಾಲಿಂಗ್ ಸ್ಪ್ಯಾಮ್ ಮತ್ತು ವಂಚನೆ ತಡೆಗಟ್ಟುವಿಕೆ ಆಪಲ್ ಐಕ್ಲೌಡ್+, ಆಪಲ್ ಮ್ಯೂಸಿಕ್, ಅಮೆಜಾನ್ ಪ್ರೈಮ್, ಜಿಯೋಹಾಟ್‌ಸ್ಟಾರ್, ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂ, ಗೂಗಲ್ ಒನ್ ಪ್ರತಿ ವರ್ಷ ಪ್ರತಿ ಸಿಮ್‌ಗೆ 1 ಉಚಿತ ಟ್ರಿಪ್
₹1249 4 ಸದಸ್ಯರ ಕುಟುಂಬ ಅನ್‌ಲಿಮಿಟೆಡ್ ಡೇಟಾ ಮತ್ತು ಕಾಲಿಂಗ್ ಸ್ಪ್ಯಾಮ್ ಮತ್ತು ವಂಚನೆ ತಡೆಗಟ್ಟುವಿಕೆ ಆಪಲ್ ಐಕ್ಲೌಡ್+, ಆಪಲ್ ಮ್ಯೂಸಿಕ್, ಅಮೆಜಾನ್ ಪ್ರೈಮ್, ಜಿಯೋಹಾಟ್‌ಸ್ಟಾರ್, ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂ, ಗೂಗಲ್ ಒನ್ ಪ್ರತಿ ವರ್ಷ ಪ್ರತಿ ಸಿಮ್‌ಗೆ 1 ಉಚಿತ ಟ್ರಿಪ್
₹1449 4 ಸದಸ್ಯರ ಕುಟುಂಬ ಅನ್‌ಲಿಮಿಟೆಡ್ ಡೇಟಾ ಮತ್ತು ಕಾಲಿಂಗ್ ಸ್ಪ್ಯಾಮ್ ಮತ್ತು ವಂಚನೆ ತಡೆಗಟ್ಟುವಿಕೆ ನೆಟ್‌ಫ್ಲಿಕ್ಸ್ ಬೇಸಿಕ್, ಆಪಲ್ ಐಕ್ಲೌಡ್+, ಆಪಲ್ ಮ್ಯೂಸಿಕ್, ಅಮೆಜಾನ್ ಪ್ರೈಮ್, ಜಿಯೋಹಾಟ್‌ಸ್ಟಾರ್, ಎಕ್ಸ್‌ ಸ್ಟ್ರೀಮ್ ಪ್ಲೇ ಪ್ರೀಮಿಯಂ, ಗೂಗಲ್ ಒನ್ ಪ್ರತಿ ವರ್ಷ ಪ್ರತಿ ಸಿಮ್‌ಗೆ 1 ಉಚಿತ ಟ್ರಿಪ್
₹1799 5 ಸದಸ್ಯರ ಕುಟುಂಬ ಅನ್‌ಲಿಮಿಟೆಡ್ ಡೇಟಾ ಮತ್ತು ಕಾಲಿಂಗ್ ಸ್ಪ್ಯಾಮ್ ಮತ್ತು ವಂಚನೆ ತಡೆಗಟ್ಟುವಿಕೆ ನೆಟ್‌ಫ್ಲಿಕ್ಸ್ ಸ್ಟ್ಯಾಂಡರ್ಡ್, ಆಪಲ್ ಐಕ್ಲೌಡ್+, ಆಪಲ್ ಮ್ಯೂಸಿಕ್, ಅಮೆಜಾನ್ ಪ್ರೈಮ್, ಜಿಯೋಹಾಟ್‌ಸ್ಟಾರ್, ಎಕ್ಸ್‌ ಸ್ಟ್ರೀಮ್ ಪ್ಲೇ ಪ್ರೀಮಿಯಂ, ಗೂಗಲ್ ಒನ್ ಪ್ರತಿ ವರ್ಷ ಪ್ರತಿ ಸಿಮ್‌ಗೆ 1 ಉಚಿತ ಟ್ರಿಪ್

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments