Wednesday, September 23, 2026
Google search engine
Homeವಾಣಿಜ್ಯಏರ್‌ಟೆಲ್ ಪೋಸ್ಟ್‌ ಪೇಯ್ಡ್ ಗ್ರಾಹಕರಿಗೆ ಬಂಪರ್ ಕೊಡುಗೆ: ಆ್ಯಪಲ್ ನ ವಿಸ್ತರಿತ ಐಕ್ಲೌಡ್+ ಜೊತೆಗೆ ಆ್ಯಪಲ್...

ಏರ್‌ಟೆಲ್ ಪೋಸ್ಟ್‌ ಪೇಯ್ಡ್ ಗ್ರಾಹಕರಿಗೆ ಬಂಪರ್ ಕೊಡುಗೆ: ಆ್ಯಪಲ್ ನ ವಿಸ್ತರಿತ ಐಕ್ಲೌಡ್+ ಜೊತೆಗೆ ಆ್ಯಪಲ್ ಟಿವಿ, ಆ್ಯಪಲ್ ಆರ್ಕೇಡ್ ಲಭ್ಯ

ಬೆಂಗಳೂರು: ಭಾರತದ ಮುಂಚೂಣಿ ದೂರಸಂಪರ್ಕ ಸೇವಾ ಸಂಸ್ಥೆಗಳಲ್ಲಿ ಒಂದಾದ ಭಾರ್ತಿ ಏರ್‌ಟೆಲ್, ತನ್ನ ₹999 ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಫ್ಯಾಮಿಲಿ ಪೋಸ್ಟ್‌ ಪೇಯ್ಡ್ ಯೋಜನೆಗಳನ್ನು ಮತ್ತಷ್ಟು ಆಕರ್ಷಕಗೊಳಿಸಿದೆ.

ಈ ಯೋಜನೆಗಳಿಗೆ ಆ್ಯಪಲ್ ನ ಐಕ್ಲೌಡ್+ ಸೌಲಭ್ಯವನ್ನು ಸೇರ್ಪಡೆಗೊಳಿಸಲಾಗಿದ್ದು, ಇದರೊಂದಿಗೆ ಆ್ಯಪಲ್ ಟಿವಿ ಮತ್ತು ಆ್ಯಪಲ್ ಆರ್ಕೇಡ್ ಸಹ ದೊರೆಯಲಿದೆ. ಇದು ಗ್ರಾಹಕರಿಗೆ ಹೆಚ್ಚಿನ ಮೌಲ್ಯವನ್ನು ಒದಗಿಸುವುದರ ಜತೆಗೆ, ತಮ್ಮ ಹಾಲಿ ಯೋಜನೆಯನ್ನು ಅಪ್‌ ಗ್ರೇಡ್ ಮಾಡಲು ಮತ್ತೊಂದು ಬಲವಾದ ಕಾರಣವನ್ನು ನೀಡಿದೆ.

ಏರ್‌ಟೆಲ್‌ ನ ಈ ನೂತನ ಪೋಸ್ಟ್‌ ಪೇಯ್ಡ್ ಕೊಡುಗೆಯು ಆ್ಯಪಲ್ ನ ವಿಸ್ತರಿತ ಐಕ್ಲೌಡ್+ ಸೌಲಭ್ಯಗಳನ್ನು ಒಳಗೊಂಡಿದೆ. ಇದು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಅತ್ಯಂತ ಸುರಕ್ಷಿತವಾಗಿ ಸಂಗ್ರಹಿಸಲು ಮತ್ತು ಹಂಚಿಕೊಳ್ಳಲು ನೆರವಾಗುತ್ತದೆ. ಇದಲ್ಲದೆ, ಆ್ಯಪಲ್ ಟಿವಿಯ ಜನಪ್ರಿಯ ಪ್ರಶಸ್ತಿ ವಿಜೇತ ಒರಿಜಿನಲ್ ಕಾರ್ಯಕ್ರಮಗಳನ್ನು ವೀಕ್ಷಿಸುವ ಹಾಗೂ ಆ್ಯಪಲ್ ಆರ್ಕೇಡ್ ಮೂಲಕ ನೂರಾರು ರೋಚಕ ಗೇಮ್‌ಗಳನ್ನು ಆಡುವ ಅವಕಾಶವನ್ನು ಕಲ್ಪಿಸುತ್ತದೆ. ಈ ನೂತನ ಸೌಲಭ್ಯವು ₹999 ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಫ್ಯಾಮಿಲಿ ಪ್ಲಾನ್ ಹೊಂದಿರುವ ಏರ್‌ಟೆಲ್ ಗ್ರಾಹಕರಿಗೆ ಲಭ್ಯವಾಗಲಿದೆ.

ಐಕ್ಲೌಡ್+ ಮೂಲಕ ಏರ್‌ಟೆಲ್‌ನ ಲಕ್ಷಾಂತರ ಪೋಸ್ಟ್‌ ಪೇಯ್ಡ್ ಗ್ರಾಹಕರು ತಮ್ಮ ಫೋಟೋಗಳು, ಫೈಲ್‌ಗಳು, ಪಾಸ್‌ವರ್ಡ್‌ಗಳು, ಸಂಪರ್ಕ ಸಂಖ್ಯೆಗಳು ಸೇರಿದಂತೆ ಪ್ರಮುಖ ಮಾಹಿತಿಯನ್ನು ತಮ್ಮ ಆ್ಯಪಲ್ ಡಿವೈಸ್‌ಗಳಲ್ಲಿ ಸುರಕ್ಷಿತವಾಗಿ ಶೇಖರಿಸಿಟ್ಟುಕೊಳ್ಳಲು, ಸಿಂಕ್ ಮಾಡಲು ಮತ್ತು ಸುಲಭವಾಗಿ ಪಡೆಯಲು ಸಾಧ್ಯವಾಗಲಿದೆ. ಡಿಜಿಟಲ್ ಮಾಹಿತಿಯು ಸುರಕ್ಷಿತವಾಗಿ ಬ್ಯಾಕಪ್ ಆಗುವುದರಿಂದ, ಹೊಸ ಡಿವೈಸ್ ಪಡೆದಾಗಲೂ ಡೇಟಾವನ್ನು ಸುಲಭವಾಗಿ ಮರಳಿ ಪಡೆಯಬಹುದು. ಇದರೊಂದಿಗೆ, ಆ್ಯಪಲ್ ಟಿವಿಯು ಆ್ಯಪಲ್ನ ಅತ್ಯುನ್ನತ ಗುಣಮಟ್ಟದ ಒರಿಜಿನಲ್ ಸರಣಿಗಳು ಮತ್ತು ಚಲನಚಿತ್ರಗಳ ವೀಕ್ಷಣೆಗೆ ಅವಕಾಶ ನೀಡಿದರೆ, ಆ್ಯಪಲ್ ಆರ್ಕೇಡ್ ಯಾವುದೇ ಕಿರಿಕಿರಿಯುಂಟುಮಾಡುವ ಜಾಹೀರಾತುಗಳು ಅಥವಾ ಆ್ಯಪ್ ಒಳಗಿನ ಹೆಚ್ಚುವರಿ ಖರೀದಿಗಳಿಲ್ಲದೆ (ಇನ್-ಆ್ಯಪ್ ಪರ್ಚೇಸ್) ನೂರಾರು ಗೇಮ್‌ಗಳನ್ನು ಅನಿಯಮಿತವಾಗಿ ಆಡುವ ಸೌಲಭ್ಯವನ್ನು ಒದಗಿಸುತ್ತದೆ.

₹999ರ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆಯು ಮೂವರು ಸದಸ್ಯರ ಕುಟುಂಬಕ್ಕೆ ಫಾಸ್ಟ್‌ ಲೇನ್ ತಂತ್ರಜ್ಞಾನದೊಂದಿಗೆ ಅನಿಯಮಿತ ಡೇಟಾ, ಸ್ಪ್ಯಾಮ್ ಕರೆಗಳಿಂದ ರಕ್ಷಣೆ ಹಾಗೂ ಮನರಂಜನಾ ಚಂದಾದಾರಿಕೆಗಳನ್ನು ಒದಗಿಸುತ್ತದೆ. ಇದೀಗ ಆ್ಯಪಲ್ನ ಐಕ್ಲೌಡ್+, ಆ್ಯಪಲ್ ಟಿವಿ ಮತ್ತು ಆ್ಯಪಲ್ ಆರ್ಕೇಡ್ ಸೇರ್ಪಡೆಯೊಂದಿಗೆ ಸಂಪರ್ಕ, ಮನರಂಜನೆ, ಗೇಮಿಂಗ್ ಮತ್ತು ಕ್ಲೌಡ್ ಸ್ಟೋರೇಜ್‌ಗಳು ಒಂದೇ ಪ್ಲಾನ್‌ನಲ್ಲಿ ದೊರೆಯಲಿವೆ. ಇದು ಕುಟುಂಬಗಳಿಗೆ ಮತ್ತಷ್ಟು ಪ್ರಯೋಜನಕಾರಿಯಾಗಲಿದ್ದು, ಗ್ರಾಹಕರು ತಮ್ಮ ಪೋಸ್ಟ್‌ಪೇಯ್ಡ್ ಯೋಜನೆಯನ್ನು ಅಪ್‌ಗ್ರೇಡ್ ಮಾಡಿಕೊಳ್ಳಲು ಮಹತ್ವದ ಕಾರಣವಾಗಲಿದೆ.

ಗ್ರಾಹಕರು ಏರ್‌ಟೆಲ್ ಆ್ಯಪ್ ಮೂಲಕ ಅಥವಾ ಹತ್ತಿರದ ಯಾವುದೇ ಏರ್‌ಟೆಲ್ ಮಳಿಗೆಗೆ ಭೇಟಿ ನೀಡಿ ಈ ಯೋಜನೆಗಳಿಗೆ ಸುಲಭವಾಗಿ ಅಪ್‌ಗ್ರೇಡ್ ಮಾಡಿಕೊಳ್ಳಬಹುದಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಭಾರ್ತಿ ಏರ್‌ಟೆಲ್‌ನ ಮಾರುಕಟ್ಟೆ ಕಾರ್ಯಾಚರಣೆಗಳ (ಮಾರ್ಕೆಟ್ ಆಪ್ಸ್) ನಿರ್ದೇಶಕ ಅಮಿತ್ ತ್ರಿಪಾಠಿ, “ಏರ್‌ಟೆಲ್‌ನಲ್ಲಿ ನಾವು ನಿರಂತರವಾಗಿ ನಮ್ಮ ಗ್ರಾಹಕರ ಜೀವನವನ್ನು ಸರಳಗೊಳಿಸಲು ಹಾಗೂ ವಿಶಿಷ್ಟ ಸೇವೆಗಳ ಮೂಲಕ ಹೆಚ್ಚಿನ ಮೌಲ್ಯವನ್ನು ಸೃಷ್ಟಿಸಲು ಶ್ರಮಿಸುತ್ತೇವೆ. ಸಂಪರ್ಕ, ಮನರಂಜನೆ ಮತ್ತು ಇಡೀ ಕುಟುಂಬಕ್ಕೆ ಅಗತ್ಯವಿರುವ ಸಮಗ್ರ ಡಿಜಿಟಲ್ ಅನುಭವವನ್ನು ಒಂದೇ ಯೋಜನೆಯಡಿ ತರುವ ಆಶಯದೊಂದಿಗೆ ನಮ್ಮ ಫ್ಯಾಮಿಲಿ ಪೋಸ್ಟ್‌ ಪೇಯ್ಡ್ ಯೋಜನೆಗಳನ್ನು ರೂಪಿಸಲಾಗಿದೆ.

ಇದೀಗ ಆ್ಯಪಲ್ ನ ಐಕ್ಲೌಡ್+, ಆ್ಯಪಲ್ ಟಿವಿ ಮತ್ತು ಆ್ಯಪಲ್ ಆರ್ಕೇಡ್ ಸೇರ್ಪಡೆಗೊಳಿಸುವ ಮೂಲಕ ನಾವು ಈ ಸೇವೆಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದ್ದೇವೆ. ಇದು ಗ್ರಾಹಕರಿಗೆ ಹೆಚ್ಚಿನ ಮೌಲ್ಯವನ್ನು ನೀಡುವುದರ ಜತೆಗೆ, ಏರ್‌ಟೆಲ್ ಸೇವೆಯ ಅನುಭವವನ್ನು ಮತ್ತಷ್ಟು ಲಾಭದಾಯಕವಾಗಿಸಲಿದೆ” ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments