Wednesday, October 14, 2026
Google search engine
Homeವಾಣಿಜ್ಯಬೆಂಗಳೂರಿನಲ್ಲಿ ಪೇಸ್ ಐಐಟಿ & ಮೆಡಿಕಲ್ ಪ್ರಾದೇಶಿಕ ಕೇಂದ್ರ ಆರಂಭ

ಬೆಂಗಳೂರಿನಲ್ಲಿ ಪೇಸ್ ಐಐಟಿ & ಮೆಡಿಕಲ್ ಪ್ರಾದೇಶಿಕ ಕೇಂದ್ರ ಆರಂಭ

ಬೆಂಗಳೂರು, ಅ. 11, 2026: ಜೆಇಇ, ನೀಟ್ ಹಾಗೂ ಫೌಂಡೇಶನ್ ಹಂತದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ದೇಶದ ಮುಂಚೂಣಿ ತರಬೇತಿ ಸಂಸ್ಥೆಯಾದ ಪೇಸ್ ಐಐಟಿ & ಮೆಡಿಕಲ್, ನಗರದಲ್ಲಿ ತನ್ನ ನೂತನ ಪ್ರಾದೇಶಿಕ ಕೇಂದ್ರವನ್ನು ಭಾನುವಾರ ವಿಧ್ಯುಕ್ತವಾಗಿ ಉದ್ಘಾಟಿಸಿತು.

ನೂತನ ಕೇಂದ್ರವು ಬೆಳತ್ತೂರು ಮುಖ್ಯರಸ್ತೆ ಸಮೀಪದ ಆವಲಹಳ್ಳಿ, ಕುರುಡುಸೊಣ್ಣೆನಹಳ್ಳಿಯ ವರ್ಜೋನಗರ ಇಂಡಸ್ಟ್ರಿಯಲ್ ಎಸ್ಟೇಟ್ನ ಎಂಜಿ ಸ್ಕ್ವೇರ್ನ 2ನೇ ಮಹಡಿಯಲ್ಲಿ (ಬೆಂಗಳೂರು – 560049) ಕಾರ್ಯಾರಂಭ ಮಾಡಿದೆ.

ನೂತನ ಕೇಂದ್ರದ ಆರಂಭದ ಅಂಗವಾಗಿ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2:00 ರವರೆಗೆ ಮುಕ್ತ ವಿಜ್ಞಾನ ಮತ್ತು ಗಣಿತ ಉತ್ಸವವನ್ನು (ಕಾರ್ನಿವಲ್) ಆಯೋಜಿಸಲಾಗಿತ್ತು. ಅನ್ವೇಷಣೆ, ಪ್ರಯೋಗ ಹಾಗೂ ಸಂವಾದಾತ್ಮಕ ಕಲಿಕೆಯ ಅನುಭವ ಪಡೆಯಲು ವಿದ್ಯಾರ್ಥಿಗಳು ಮತ್ತು ಪೋಷಕರು ಉತ್ಸಾಹದಿಂದ ಭಾಗವಹಿಸಿದ್ದರು.

ಬ್ರಿಕ್ಸ್ ಇಂಟರ್ನ್ಯಾಷನಲ್ ಹಾಗೂ ಬ್ರಿಕ್ಸ್ ಪೇ ಇಂಡಿಯಾದ ಅಧ್ಯಕ್ಷ ಡಾ. ಪವನ್ ಜೋಷ್ ಮುಖ್ಯ ಅತಿಥಿಯಾಗಿ ಮತ್ತು ಗೌರವಾನ್ವಿತ ವಾಣಿಜ್ಯ ಆಯುಕ್ತ ರಫಿ ಅಹಮದ್ ಗೌರವ ಅತಿಥಿಯಾಗಿ ಪಾಲ್ಗೊಂಡು ಕೇಂದ್ರವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕ ಕುಲದೀಪ್ ತ್ಯಾಗಿ, ಹಿರಿಯ ಅಧ್ಯಾಪಕ (ರಸಾಯನಶಾಸ್ತ್ರ) ಅಂಕಿತ್ ಅಗರ್ವಾಲ್ ಹಾಗೂ ಬೆಂಗಳೂರು ಕೇಂದ್ರದ ಮಾಸ್ಟರ್ ಫ್ರಾಂಚೈಸಿ ವೀಣಾ ರಜಾಯಿ ಉಪಸ್ಥಿತರಿದ್ದರು. ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ತ್ಯಾಗಿ ಅವರು ಆನ್ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವೈಟ್ ಫೀಲ್ಡ್ ನ ಪಾರ್ಸೆಕ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಉತ್ಸವದಲ್ಲಿ ಪ್ರಾಯೋಗಿಕ ವಿಜ್ಞಾನ ಪ್ರಾತ್ಯಕ್ಷಿಕೆಗಳು, ಗಣಿತ ಸವಾಲುಗಳು, ಮೆದುಳಿಗೆ ಕಸರತ್ತು ನೀಡುವ ಒಗಟುಗಳು ಹಾಗೂ ಸಂವಾದಾತ್ಮಕ ಚಟುವಟಿಕೆಗಳು ಗಮನಸೆಳೆದವು. ವಿದ್ಯಾರ್ಥಿಗಳಲ್ಲಿ ಕುತೂಹಲ, ವಿಮರ್ಶಾತ್ಮಕ ಚಿಂತನೆ ಮತ್ತು ವೈಜ್ಞಾನಿಕ ಪರಿಕಲ್ಪನೆಗಳ ಪ್ರಾಯೋಗಿಕ ತಿಳುವಳಿಕೆಯನ್ನು ಬೆಳೆಸಲು ಈ ಚಟುವಟಿಕೆಗಳನ್ನು ವಿನ್ಯಾಸಗೊಳಿಸಲಾಗಿತ್ತು. ವಿದ್ಯಾರ್ಥಿಗಳು ನೂತನ ಕೇಂದ್ರವನ್ನು ವೀಕ್ಷಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಪ್ರಾಯೋಗಿಕ ಕಲಿಕೆಗೆ ಜಂಟಿ ಪ್ರಯತ್ನ: ಪೇಸ್–ಪಾರ್ಸೆಕ್ ಸಹಭಾಗಿತ್ವ
ಉದ್ಘಾಟನಾ ಸಮಾರಂಭದ ಪ್ರಮುಖ ಆಕರ್ಷಣೆಯಾಗಿ, ಪಾರ್ಸೆಕ್ನ ವಿಜ್ಞಾನ ಪ್ರಯೋಗಾಲಯಗಳು ಹಾಗೂ ಬೆಂಗಳೂರಿನ ಪೇಸ್ ಐಐಟಿ & ಮೆಡಿಕಲ್ ನಡುವಿನ ಸಹಯೋಗವನ್ನು ಮುಖ್ಯ ಅತಿಥಿ ಡಾ. ಪವನ್ ಜೋಷ್ ಘೋಷಿಸಿದರು. ತರಗತಿಯ ಬೋಧನೆಗೆ ಪೂರಕವಾಗಿ ನೈಜ, ಪ್ರಾಯೋಗಿಕ ಅನ್ವೇಷಣೆಯನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ವಿಜ್ಞಾನ ಕಲಿಕೆಗೆ ಅವಕಾಶ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಶಿಕ್ಷಣವನ್ನು ಹೆಚ್ಚು ಆಸಕ್ತಿದಾಯಕ, ಅನ್ವಯಿಕ-ಆಧಾರಿತ ಹಾಗೂ ಇಂದಿನ ಯುವ ಕಲಿಯುವವರ ಅಗತ್ಯಗಳಿಗೆ ತಕ್ಕಂತೆ ರೂಪಿಸುವ ಜಂಟಿ ಬದ್ಧತೆಯನ್ನು ಈ ಸಹಭಾಗಿತ್ವ ಬಿಂಬಿಸುತ್ತದೆ.

ಈ ಯೋಜನೆ ಕುರಿತು ವಿಶ್ವಾಸ ವ್ಯಕ್ತಪಡಿಸಿದ ಡಾ. ಪವನ್ ಜೋಷ್, “ಶ್ರೀಮತಿ ವೀಣಾ ರಜಾಯಿ ಅವರ ದೂರದೃಷ್ಟಿ ಮತ್ತು ಮುಂಬೈನ ಪೇಸ್ ಐಐಟಿ & ಮೆಡಿಕಲ್ನ ಹಿರಿಮೆಯನ್ನು ಪರಿಗಣಿಸಿ ಬೆಂಗಳೂರು ಕೇಂದ್ರದೊಂದಿಗೆ ಕೈಜೋಡಿಸಲು ನಿರ್ಧರಿಸಲಾಯಿತು” ಎಂದು ತಿಳಿಸಿದರು.

ಈ ಪಾಲುದಾರಿಕೆಯು ಸೈದ್ಧಾಂತಿಕ ಪರಿಕಲ್ಪನೆಗಳನ್ನು ನೈಜ ಜಗತ್ತಿನ ಅನ್ವಯಗಳೊಂದಿಗೆ ಜೋಡಿಸಲು ವಿದ್ಯಾರ್ಥಿಗಳಿಗೆ ನೆರವಾಗಲಿದ್ದು, ಅವರಲ್ಲಿ ವೈಜ್ಞಾನಿಕ ಮನೋಭಾವ, ವಿಶ್ಲೇಷಣಾತ್ಮಕ ಚಿಂತನೆ ಹಾಗೂ ವಿಜ್ಞಾನದ ಆಳವಾದ ಗ್ರಹಿಕೆಯನ್ನು ರೂಪಿಸಲಿದೆ ಎಂದು ಸಂಸ್ಥೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments