Tuesday, September 22, 2026
Google search engine
Homeರಾಜ್ಯ8 ಭ್ರಷ್ಟ ಅಧಿಕಾರಿಗಳು ಲೋಕಾ ಬಲೆಗೆ: 29.61 ಕೋಟಿ ಮೌಲ್ಯದ ಅಕ್ರಮ ಸಂಪತ್ತು ಪತ್ತೆ

8 ಭ್ರಷ್ಟ ಅಧಿಕಾರಿಗಳು ಲೋಕಾ ಬಲೆಗೆ: 29.61 ಕೋಟಿ ಮೌಲ್ಯದ ಅಕ್ರಮ ಸಂಪತ್ತು ಪತ್ತೆ

ಬೆಂಗಳೂರು: ಆದಾಯಕ್ಕಿಂತಲೂ ಅಧಿಕ ಅಕ್ರಮ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ 8 ಮಂದಿ ಸರ್ಕಾರಿ ಅಧಿಕಾರಿಗಳನ್ನು ಬಲೆಗೆ ಕೆಡವಿದ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಏಕಕಾಲದಲ್ಲಿ 33 ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದಾರೆ.

ಬೆಂಗಳೂರು ನಗರ, ಕಲಬುರಗಿ, ಮಂಡ್ಯ, ಕೊಡಗು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೀದರ್ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 8 ಮಂದಿ‌ ಭ್ರಷ್ಟ ಅಧಿಕಾರಿಗಳ ಬಳಿ 29 ಕೋಟಿ 61 ಲಕ್ಷ 56 ಸಾವಿರ 901 ರೂ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿಯನ್ನು ಪತ್ತೆಹಚ್ಚಿದ್ದಾರೆ.

ಲೋಕಾಯುಕ್ತದ ಪ್ರಾಥಮಿಕ ಶೋಧದಲ್ಲಿ 8 ಅಧಿಕಾರಿಗಳು ಹೊಂದಿರುವ ಒಟ್ಟು 29,61,56,901 ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇದರಲ್ಲಿ17,98,21,945 ಮೌಲ್ಯದ ಸ್ಥಿರಾಸ್ತಿ ಹಾಗೂ 11,63,34,956 ಮೌಲ್ಯದ ಚರಾಸ್ತಿ ಸೇರಿದೆ ಎಂದು ಲೋಕಾಯುಕ್ತ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಎಸ್ ಪಿಗಳ‌ ನೇತೃತ್ವದಲ್ಲಿ ಮಂಗಳವಾರ ಮುಂಜಾನೆಯಿಂದ ಸಂಜೆವರೆಗೆ ಲೋಕಾಯುಕ್ತ ಅಧಿಕಾರಿಗಳ ತಂಡಗಳು ದಾಳಿ ನಡೆಸಿದ 33 ವಿವಿಧ ಸ್ಥಳಗಳಲ್ಲಿ ದಾಖಲೆಗಳು, ಆಸ್ತಿ-ಪಾಸ್ತಿ ವಿವರಗಳು ಹಾಗೂ ಇತರೆ ಸಂಬಂಧಿತ ದಾಖಲೆಗಳನ್ನು ಪರಿಶೀಲನೆ ನಡೆಸಿ ಅಕ್ರಮ‌ ಆಸ್ತಿ ಪಾಸ್ತಿಯನ್ನು ಪತ್ತೆಹಚ್ಚಲಾಗಿದೆ ಎಂದು ಲೋಕಾಯುಕ್ತ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬಲೆಗೆ ಬಿದ್ದ ಅಧಿಕಾರಿಗಳ ಆಸ್ತಿ ಪಾಸ್ತಿ ವಿವರ

ಶಿವರಾಜು ಎಂ, ಹಾಸ್ಟೆಲ್ ಸೂಪರಿಡೆಂಟ್, ಬಿಸಿಎಂ, ಮಂಡ್ಯ
ಇವರಿಗೆ ಸೇರಿದ 2 ಸ್ಥಳಗಳಲ್ಲಿ ಶೋಧ ಕೈಗೊಂಡು 5 ನಿವೇಶನ, 2 ವಾಸದ ಮನೆಗಳು, 2 ವಾಣಿಜ್ಯ ಮಳಿಗೆಗಳು, 1 ಪಾರ್ಮ್ ಹೌಸ್, ಕೃಷಿ ಜಮೀನು, 2.50 ಲಕ್ಷ ನಗದು,33,80 ಲಕ್ಷ ಮೌಲ್ಯದ ಚಿನ್ನಾಭರಣ, 15 ಲಕ್ಷ ಮೌಲ್ಯದ ವಾಹನಗಳು ಸೇರಿ 2ಕೋಟಿ 71ಲಕ್ಷ 90 ಸಾವಿರ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ.

ಹೆಚ್.ಎಂ ರಂಗನಾಥ್,(ನಿವೃತ್ತಿ) ಸಹಾಯಕ ಅಭಿಯಂತರರು, ಬಿಬಿಎ, ಶಿವಾಜಿನಗರ

ಇವರಿಗೆ ಸೇರಿದ 4 ಸ್ಥಳಗಳಲ್ಲಿ ಶೋಧ ಕೈಗೊಂಡು 2 ನಿವೇಶನಗಳು, 4 ವಾಸದ ಮನೆ,9 ಎಕರೆ 35 ಗುಂಟೆ ಕೃಷಿ ಜಮೀನು, 1,03.00,000 ನಗದು, 40 ಲಕ್ಷ ಮೌಲ್ಯದ ಚಿನ್ನಾಭರಣಗಳು, 11,96 ಲಕ್ಷ ಮೌಲ್ಯದ 3 ವಾಹನಗಳು, 18,68,257 ಮೌಲ್ಯದ ಬೆಲೆಬಾಳುವ ಗೃಹ ಸಂಬಂಧಿ ವಸ್ತುಗಳು ಸೇರಿ 3,84,67,257 ರೂ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ.

ರಾಜೇಶ್ವರಿ ಬಾಬಲಾಡ್, ಎಇಇ ಜೆಸ್ಲಾಂ, ಎಂ.ಆರ್.ಟಿ.ಎಲ್.ಡಿ.ಸಿ. ಕಲಬುರಗಿ ಡಿವಿಜನ್, ಕಲಬುರಗಿ.
ಇವರಿಗೆ ಸೇರಿದ 3 ಸ್ಥಳಗಳಲ್ಲಿ ಶೋಧ ಕೈಗೊಂಡು 5 ನಿವೇಶನಗಳು, 2 ವಾಸದ ಮನೆಗಳು 13,900 ನಗದು 16.41,513  ಬೆಲೆ ಬಾಳುವ ಚಿನ್ನಾಭರಣಗಳು, 14.86 ಲಕ್ಷ ಮೌಲ್ಯದ ವಾಹನಗಳು ಸೇರಿ  1,91,06,333 ರೂ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ.

ಹೆಚ್.ಆರ್ ರಮೇಶ್, ಮುನಿಸಪಲ್ ಕಮಿಷನರ್ ಧಾರವಾಡ

ಇವರಿಗೆ ಸೇರಿದ 3 ಸ್ಥಳಗಳಲ್ಲಿ ಶೋಧ ಕೈಗೊಂಡು 1 ವಾಸದ ಮನೆ. 3 ಎಕರೆ ಕೃಷಿ ಜಮೀನು 4,66.200 ನಗದು 46.48.306 ಮೌಲ್ಯದ ಚಿನ್ನಾಭರಣಗಳು  20.85 ಲಕ್ಷ ಮೌಲ್ಯದ ವಾಹನಗಳು 6.80.500 ಬೆಲೆಬಾಳುವ ಇತರೆ ವಸ್ತುಗಳು ಸೇರಿ 1.78.80,006 ರೂ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ.

ಕಿರಣ್ ಕುಮಾರ್ ಬೈಂದೂರು, ಎಇಇ, ಹೆಸ್ಕಾಂ, ಧಾರವಾಡ

ಇವರಿಗೆ 6 ಸ್ಥಳಗಳಲ್ಲಿ ಶೋಧ ಕೈಗೊಂಡು 1 ವಾಸದ ಮನೆ. 1 ವಾಣಿಜ್ಯ ಮಳಿಗೆ 2ಎಕರೆ ಕೃಷಿ ಜಮೀನು, 4.60.850 ನಗದು, 73.71,810 ಮೌಲ್ಯದ ಚಿನ್ನಾಭರಣಗಳು, 15,10 ಲಕ್ಷ ಮೌಲ್ಯದ ವಾಹನಗಳು ಸೇರಿ 1,79.62,660 ರೂ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ.

ದರ್ಶನ್ ಗೌಡ ಜಿ, ಎಫ್.ಡಿ.ಎ. ಡಿಸಿ ಕಛೇರಿ, ಚಿಕ್ಕಬಳ್ಳಾಪುರ

ಇವರಿಗೆ ಸೇರಿದ 8 ಸ್ಥಳಗಳಲ್ಲಿ ಶೋಧ ಕೈಗೊಂಡು 3 ನಿವೇಶನ. 16 ವಾಸದ ಮನೆಗಳು, 2,67,000 ನಗದು, 6,60 ಲಕ್ಷ ಮೌಲ್ಯದ ಚಿನ್ನಾಭರಣಗಳು, 22,80 ಲಕ್ಷ ಮೌಲ್ಯದ ವಾಹನಗಳು ಸೇರಿ1.86,78,000 ರೂ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ.

ಮಾಣೀಕ್ ರಾವ್ ಬಿನ್ ಗುಂಡಪ್ಪ ಶೆರಿಕರ್, (ನಿವೃತ್ತ) ಕೃಷಿ ಅಧಿಕಾರಿಗಳು, ಬೀದರ್
ಇವರಿಗೆ ಸೇರಿದ 3 ಸ್ಥಳಗಳಲ್ಲಿ ಶೋಧ ಕೈಗೊಂಡು 6 ನಿವೇಶನ, 3 ವಾಸದ ಮನೆಗಳು, 14 ಎಕರೆ 20 ಗುಂಟೆ ಕೃಷಿ ಜಮೀನು, 14.300 ರೂ ನಗದು, 61,61,250 ಬೆಲೆ ಬಾಳುವ ಚಿನ್ನಾಭರಣಗಳು,29.40 ಲಕ್ಷ ಬೆಲೆ ಬಾಳುವ ವಾಹನಗಳು ಸೇರಿ 2,51,38,945 ರೂ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ

ಶ್ರೀದೇವಿ, ಜಿಲ್ಲಾ ನೊಂದಣಾಧಿಕಾರಿಗಳು, ಬಸವನಗುಡಿ, ( ಈ ಹಿಂದೆ ಬೆಂಗಳೂರು ದಕ್ಷಿಣ ಜಿಲ್ಲೆ, ರಾಮನಗರ)
ಇವರಿಗೆ ಸೇರಿದ 4 ಸ್ಥಳಗಳಲ್ಲಿ ಶೋಧ ಕೈಗೊಂಡು 2 ನಿವೇಶನ. 2 ವಾಸದ ಮನೆಗಳು. 2,50 ಕೋಟಿ ಮೌಲ್ಯದ ಕೃಷಿ ಜಮೀನು, 2,30 ಕೋಟಿ ಮೌಲ್ಯದ ಗಾರ್ಮೆಂಟ್ ಪ್ಯಾಕ್ಟರಿ 30.87.950‌ ನಗದು, 35.58.150 ಬೆಲೆಯ ಚಿನ್ನಾಭರಣಗಳು, ರೂ 23,15,600 ರೂ ಮೌಲ್ಯದ ವಾಹನಗಳು, ಹಾಗೂ 5 ಲಕ್ಷ  ಇತರೆ ವಸ್ತುಗಳ ಸೇರಿ  6,80,61,700 ರೂ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments