ಜಾರಿ ನಿರ್ದೇಶನಾಲಯದ ತನಿಖೆಯೇ ಅಕ್ರಮವಾಗಿದ್ದು, 180 ಕೋಟಿ ಮೌಲ್ಯದ ಆಸ್ತಿಯನ್ನು ಮಾಜಿ ಸಚಿವ ಪ್ರಫುಲ್ ಪಟೇಲ್ ಅವರಿಗೆ ವಾಪಸ್ ಮಾಡುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿದೆ.
ಮುಂಬೈನಲ್ಲಿರುವ ಕೀಸಿ ಹೌಸ್ ನ ಬೃಹತ್ ಅಪಾರ್ಟ್ ಮೆಂಟ್ ನ 12 ಮತ್ತು 15ನೇ ಅಂತಸ್ತಿನಲ್ಲಿದ್ದ ಪ್ರಫುಲ್ ಪಟೇಲ್ ಅವರ ಫ್ಲ್ಯಾಟ್ ಗಳನ್ನು ಇಡಿ ವಶಕ್ಕೆ ಪಡೆದಿತ್ತು. ಈ ಫ್ಲ್ಯಾಟ್ ಗಳನ್ನು ಸಂಬಂಧಿಕರು ಬಳಸುತ್ತಿದ್ದು, ಸ್ಮಗ್ಲಿಂಗ್ ಮತ್ತು ಇನ್ನಿತರ ಅಕ್ರಮ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಆರೋಪಿಸಿತ್ತು.
ಪ್ರಫುಲ್ ಪಟೇಲ್ ಇದೀಗ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬೆಂಬಲ ನೀಡಿದ ಅಜಿತ್ ಪವಾರ್ ನೇತೃತ್ವದ ಎನ್ ಸಿಪಿಯಲ್ಲಿ ಗುರುತಿಸಿಕೊಂಡಿದ್ದು, ರಾಜ್ಯಸಭಾ ಸದಸ್ಯರಾಗಿದ್ದಾರೆ.