ಮೆಕ್ಲಾರೆನ್ ತಂಡದ ಲ್ಯಾಂಡೊ ನೊರಿಸ್ ದುಬೈ ಓಪನ್ ಗ್ರ್ಯಾನ್ ಪ್ರೀಯಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಫಾರ್ಮುಲಾ-1 ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಮೆಕ್ಲಾರೆನ್ ತಂಡ 17 ವರ್ಷಗಳ ನಂತರ ಫಾರ್ಮುಲಾ ಒನ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಭಾನುವಾರ ನಡೆದ ಅಂತಿಮ ಮೂರು ಹಂತದ ರೇಸ್ ನಲ್ಲಿ ಮೂರನೇ ಸ್ಥಾನ ಪಡೆದರೂ ಲ್ಯಾಂಡೊ ನೊರಿಸ್ ಡ್ರೈವರ್ಸ್ ಚಾಂಪಿಯನ್ ಶಿಪ್ ಅಗ್ರಸ್ಥಾನ ಪಡೆದರು. ಈ ಮೂಲಕ 2008ರ ನಂತರ ಮೆಕ್ಲಾರೆನ್ ತಂಡದ ಚಾಲಕ ಡ್ರೈವರ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದ ಸಾಧನೆ ಮಾಡಿದರು.
ಅಸ್ಕರ್ ಪಿಯಾಸ್ತ್ರಿ ಮತ್ತು ನಾಲ್ಕು ಬಾರಿಯ ಚಾಂಪಿಯನ್ ಮ್ಯಾಕ್ಸ್ ವೆರ್ಸಾಪ್ಟಾನ್ 12 ಅಂಕದೊಂದಿಗೆ ಡ್ರೈವರ್ಸ್ ಚಾಂಪಿಯನ್ ಶಿಪ್ ನಲ್ಲಿ ೨ನೇ ಸ್ಥಾನ ಪಡೆದರು.


