Wednesday, December 24, 2025
Google search engine
Homeದೇಶರೈಲು ಪ್ರಯಾಣಿಕರ ಲಗೇಜ್ ಗೂ ಶುಲ್ಕ ಜಾರಿ: ಕೇಂದ್ರ ಸಚಿವ ಅಶ್ವಿನ್ ವೈಭವ್

ರೈಲು ಪ್ರಯಾಣಿಕರ ಲಗೇಜ್ ಗೂ ಶುಲ್ಕ ಜಾರಿ: ಕೇಂದ್ರ ಸಚಿವ ಅಶ್ವಿನ್ ವೈಭವ್

ರೈಲು ಪ್ರಯಾಣಿಕರು ಇನ್ನು ಮುಂದೆ ತಮ್ಮ ಜೊತೆ ಹೆಚ್ಚಿನ ಲಗೇಜ್ ಹೊತ್ತು ತಂದರೆ ಶುಲ್ಕ ಪಾವತಿಸಬೇಕಾಗುತ್ತದೆ!

ಹೌದು, ಲೋಕಸಭೆಯಲ್ಲಿ ಬುಧವಾರ ರೈಲ್ವೆ ಸಚಿವ ಅಶ್ವಿನ್ ವೈಭವ್ ಈ ವಿಷಯ ತಿಳಿಸಿದ್ದು, ರೈಲು ಪ್ರಯಾಣಿಕರು ಇನ್ನು ಮುಂದೆ ನಿಗದಿಗಿಂತ ಹೆಚ್ಚು ಲಗೇಜ್ ತಂದರೆ ಶುಲ್ಕ ಪಾವತಿಸಬೇಕಾಗುತ್ತದೆ. ಪ್ರಸ್ತುತ ಲಗೇಜ್ ಗೆ ಶುಲ್ಕ ಜಾರಿ ಮಾಡಲಾಗಿದ್ದರೂ ಸಮರ್ಪಕವಾಗಿ ಜಾರಿ ಮಾಡಲಾಗಿಲ್ಲ ಎಂದರು.

ಸಂಸದ ವೈಮಿರೆಡ್ಡಿ ಪ್ರಭಾಕರ್ ರೆಡ್ಡಿ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಲಗೇಜ್ ಗೆ ಶುಲ್ಕ ವಿಧಿಸುವ ಮಾದರಿಯಲ್ಲಿ ರೈಲು ನಿಲ್ದಾಣಗಳಲ್ಲಿ ಲಗೇಜ್ ಗೆ ಶುಲ್ಕ ವಿಧಿಸಲಾಗುತ್ತದೆಯೇ ಎಂಬ ಉತ್ತರಿಸಿದ ಸಚಿವರು, ನಿಗದಿಗಿಂತ ಹೆಚ್ಚಿನ ಪ್ರಮಾಣದ ಲಗೇಜ್ ಗಳಿಗೆ ತೂಕಕ್ಕಿಂತ 1.5 ಪಟ್ಟು ಶುಲ್ಕ ವಿಧಿಸಲಾಗುತ್ತಿದೆ ಎಂದರು.

ರೈಲು ಬೋಗಿಗಳಲ್ಲಿ ಪ್ರಯಾಣಿಕರು ತರುವ ಲಗೇಜ್ ಗೆ ಮಿತಿ ಹೇರಲಾಗಿದೆ. 40 ಕೆಜಿಯಷ್ಟು ಲಗೇಜ್ ತರಲು ಮಹಿಳೆ ಅಥವಾ ಪುರುಷ ಪ್ರಯಾಣಿಕರಿಗೆ ಅವಕಾಶವಿದೆ. ವಿಶೇಷ ಅನುಮತಿ ಮೇರೆಗೆ 80 ಕೆಜಿಯಷ್ಟು ಲಗೇಜ್ ಉಚಿತವಾಗಿ ಹೊತ್ತೊಯ್ಯಬಹುದು ಎಂದರು.

ಎರಡನೇ ದರ್ಜೆ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಗರಿಷ್ಠ 35 ಕೆಜಿ, ವಿಶೇಷ ಅನುಮತಿ ಮೇರೆಗೆ ಗರಿಷ್ಠ 70 ಕೆಜಿ ಲಗೇಜ್ ತರಬಹುದಾಗಿದೆ. ಸ್ಲೀಪರ್ ಕೋಚ್ ನಲ್ಲಿ 40 ಕೆಜಿ ಹಾಗೂ ಗರಿಷ್ಠ 80 ಕೆಜಿ ಲಗೇಜ್ ಗೆ ಅವಕಾಶ ನೀಡಲಾಗಿದೆ.

ಎಸಿ 3 ಟಯರ್ ಕೋಚ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಗರಿಷ್ಠ 40 ಕೆಜಿ ತೂಕದ ಲಗೇಜ್ ತರಬಹುದಾಗಿದೆ. ಎಸಿ-2 ಟಯರ್ ಬೋಗಿಯಲ್ಲಿ 50ರಿಂದ ಗರಿಷ್ಠ 100 ಕೆಜಿ ಲಗೇಜ್ ಪ್ರವೇಶಕ್ಕೆ ಅವಕಾಶವಿದೆ. ಎಸಿ ಪ್ರಥಮ ದರ್ಜೆ ಬೋಗಿಯ ಪ್ರಯಾಣಿಕರು ಉಚಿತವಾಗಿ 70 ಕೆಜಿ ಹಾಗೂ ಶುಲ್ಕ ಭರ್ತಿ ಮಾಡಿದರೆ ಗರಿಷ್ಠ 150 ಕೆಜಿ ಲಗೇಜ್ ಹೊತ್ತೊಯ್ಯಬಹುದಾಗಿದೆ.

ಪ್ರಯಾಣಿಕರು ಉಚಿತವಾಗಿ ಹೆಚ್ಚಿನ ಲಗೇಜ್ ಬುಕ್ ಮಾಡಲು ಮತ್ತು ಮೇಲೆ ಪಟ್ಟಿ ಮಾಡಲಾದ ವರ್ಗದ ಪ್ರಕಾರ ಗರಿಷ್ಠ ಮಿತಿಯವರೆಗೆ ಕಂಪಾರ್ಟ್‌ಮೆಂಟ್‌ನಲ್ಲಿ ಸಾಗಿಸಲು ಅನುಮತಿಸಲಾಗಿದೆ, ಲಗೇಜ್ ದರದ 1.5 ಪಟ್ಟು ಶುಲ್ಕವನ್ನು ಪಾವತಿಸಬೇಕು ಎಂದು ಅವರು ಲೋಕಸಭೆಗೆ ವಿವರಣೆ ನೀಡಿದ್ದಾರೆ.

100 ಸೆಂ.ಮೀ.x60 ಸೆಂ.ಮೀ.x25 ಸೆಂ.ಮೀ. (ಉದ್ದ x ಅಗಲ x ಎತ್ತರ) ಹೊರಗಿನ ಅಳತೆಗಳನ್ನು ಹೊಂದಿರುವ ಟ್ರಂಕ್‌ಗಳು, ಸೂಟ್‌ಕೇಸ್‌ಗಳು ಮತ್ತು ಪೆಟ್ಟಿಗೆಗಳನ್ನು ಪ್ರಯಾಣಿಕರ ವಿಭಾಗಗಳಲ್ಲಿ ವೈಯಕ್ತಿಕ ಲಗೇಜ್ ಆಗಿ ಸಾಗಿಸಲು ಅನುಮತಿಸಲಾಗಿದೆ.

“ದೊಡ್ಡಅಳತೆಯ ಟ್ರಂಕ್‌ಗಳು, ಸೂಟ್‌ಕೇಸ್‌ಗಳು ಮತ್ತು ಪೆಟ್ಟಿಗೆಗಳು ಯಾವುದೇ ಒಂದು ಆಯಾಮವನ್ನು ಮೀರಿದರೆ, ಅಂತಹ ವಸ್ತುಗಳನ್ನು ಬ್ರೇಕ್‌ವ್ಯಾನ್ (SLR ಗಳು) / ಪಾರ್ಸೆಲ್ ವ್ಯಾನ್‌ಗಳಲ್ಲಿ ಬುಕ್ ಮಾಡಿ ಸಾಗಿಸಬೇಕಾಗುತ್ತದೆ ಮತ್ತು ಪ್ರಯಾಣಿಕರ ವಿಭಾಗಗಳಲ್ಲಿ ಅಲ್ಲ,” ಎಂದು ಸಚಿವರು ಸ್ಪಷ್ಟಪಡಿಸಿದರು.

ವಾಣಿಜ್ಯ ವಸ್ತುಗಳನ್ನು ಕಂಪಾರ್ಟ್‌ಮೆಂಟ್‌ನಲ್ಲಿ ವೈಯಕ್ತಿಕ ಲಗೇಜ್ ಆಗಿ ಬುಕಿಂಗ್ ಮತ್ತು ಸಾಗಣೆಗೆ ಅನುಮತಿಸಲಾಗುವುದಿಲ್ಲ. ನಿಯಮಿತ ಮಿತಿಗಿಂತ ಹೆಚ್ಚಿನ ಹೆಚ್ಚುವರಿ ಲಗೇಜ್ ಅನ್ನು ರೈಲುಗಳ ಬ್ರೇಕ್ ವ್ಯಾನ್ (SLR ಗಳು) ನಲ್ಲಿ ಲಗೇಜ್ ಆಗಿ ಬುಕ್ ಮಾಡಲು ಸೂಚಿಸಲಾದ ಗರಿಷ್ಠ ಮಿತಿಗೆ ಒಳಪಟ್ಟು ಸಾಗಿಸಲಾಗುತ್ತದೆ ಎಂಬ ರೈಲ್ವೆಯ ಮಾನದಂಡಗಳನ್ನು ಅವರು ಪುನರುಚ್ಚರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments