Wednesday, December 24, 2025
Google search engine
Homeದೇಶಸಾರಿಗೆ ಅಧಿಕಾರಿ ಬಳಿ 100 ಕೋಟಿ ಸಂಪತ್ತು ಪತ್ತೆ: ಎಸಿಬಿ ಅಧಿಕಾರಿಗಳಿಗೆ ಶಾಕ್!

ಸಾರಿಗೆ ಅಧಿಕಾರಿ ಬಳಿ 100 ಕೋಟಿ ಸಂಪತ್ತು ಪತ್ತೆ: ಎಸಿಬಿ ಅಧಿಕಾರಿಗಳಿಗೆ ಶಾಕ್!

ಸಾರಿಗೆ ಇಲಾಖೆಯ ಅಧಿಕಾರಿ ಮನೆಗೆ ದಾಳಿ ನಡೆಸಿದ ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ಪಡೆ ಅಧಿಕಾರಿಗಳು 100 ಕೋಟಿಗೂ ಅಧಿಕ ಸಂಪತ್ತು ಕಂಡು ಬೆಚ್ಚಿಬಿದ್ದಿದ್ದಾರೆ.

ಸಾರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಮೂಡ್ ಕಿಶನ್ ಅವರ ಮೆಹಬೂಬ್ ನಗರದ ನಿವಾಸದ ಮೇಲೆ ದಾಳಿ ನಡೆಸಿದ ಪೊಲೀಸರು 100 ಕೋಟಿಗೂ ಅಧಿಕ ಸಂಪತ್ತು ಪತ್ತೆ ಹಚ್ಚಿದ್ದಾರೆ.

ಮೂಡ್ ಕಿಶನ್ ಮನೆಯಲ್ಲಿ ಅಡಮಾನ ಇರಿಸಿಕೊಂಡ 12.72 ಕೋಟಿ ಮೌಲ್ಯದ ಆಸ್ತಿ ಪತ್ರಗಳು, 62 ಕೋಟಿ ಮೌಲ್ಯದ 31 ಎಕರೆ ಕೃಷಿ ಭೂಮಿ ಅಲ್ಲದೇ ಹಲವಾರು ವಾಣಿಜ್ಯ ಹಾಗೂ ಇತರೆ ನಿವೇಶನಗಳ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ಸಾರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿರುವ ಕಿಶನ್ ಅವರಿಗೆ ಮಾಸಿಕ 1 ಲಕ್ಷದಿಂದ 1.25 ಲಕ್ಷ ರೂ.ವರೆಗೂ ವೇತನವಿದೆ. ಆದರೆ ಅವರ ಬಳಿ 11 ಸ್ಥಳಗಳಲ್ಲಿ ಆಸ್ತಿಗಳು ಇವೆ. ಅಲ್ಲದೇ ಲಹರಿ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ಶೇ.50ರಷ್ಟು ಪಾಲುದಾರಿಕೆ ಮತ್ತು ನಿಜಾಮಾಬಾದ್ ನಲ್ಲಿ 3000 ಚದರ ಅಡಿಯ ಸೋಫಾ ಶೋ ರೂಮ್ ಹೊಂದಿದ್ದಾರೆ.

ಸಂಗಾರೆಡ್ಡಿ ಜಿಲ್ಲೆಯಲ್ಲಿ 31 ಎಕರೆ ಕೃಷಿ ಭೂಮಿ ಹಾಗೂ ನಿಜಾಮಾಬಾದ್ ನಲ್ಲಿ 10 ಎಕರೆ ವಾಣಿಜ್ಯ ಬಳಕೆಯ ಭೂಮಿ ಇವೆ. ಇಷ್ಟೇ ಅಲ್ಲದೇ ಬ್ಯಾಂಕ್ ನಲ್ಲಿ 1.37 ಕೋಟಿ ನಗದು, 1 ಕೆಜಿ ಚಿನ್ನಾಭರಣ, ಇನ್ನೋವಾ ಕ್ರಿಸ್ಟಾ ಮತ್ತು ಹೋಂಡಾ ಸಿಟಿ ಸೇರಿದಂತೆ ಐಷಾರಾಮಿ ಕಾರುಗಳು ಇವೆ.

ವಸತಿ ಪ್ರದೇಶದಲ್ಲಿ ಕಿಶನ್ ನಿಜಾಮಾಬಾದ್‌ನ ಅಶೋಕ ಟೌನ್‌ಶಿಪ್‌ನಲ್ಲಿ ಎರಡು ಫ್ಲಾಟ್‌ಗಳನ್ನು ಮತ್ತು ಸಂಗರೆಡ್ಡಿಯಲ್ಲಿ ವಿಶೇಷ ಪಾಲಿಹೌಸ್ ಸೌಲಭ್ಯವನ್ನು ಹೊಂದಿದ್ದಾರೆಂದು ಹೇಳಲಾಗುತ್ತದೆ.

ಈ ಪ್ರಕರಣವು ಒಟ್ಟು ಮೌಲ್ಯಮಾಪನಕ್ಕೆ ಮಾತ್ರವಲ್ಲ, ಸಂಗ್ರಹಣೆಯ ಲಜ್ಜೆಗೆಟ್ಟ ಸ್ವರೂಪಕ್ಕೂ ಎದ್ದು ಕಾಣುತ್ತದೆ. ಉಪ ಸಾರಿಗೆ ಆಯುಕ್ತರು ಸಕ್ರಿಯ ಸೇವೆಯಲ್ಲಿದ್ದಾಗ ಹೋಟೆಲ್‌ಗಳು ಮತ್ತು ಶೋರೂಮ್‌ಗಳ ವಿಸ್ತಾರವಾದ “ನೆರಳು ಸಾಮ್ರಾಜ್ಯ”ವನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿದೆ, ಇದು ಭ್ರಷ್ಟಾಚಾರ ತಡೆ ಕಾಯ್ದೆಯ ನೇರ ಉಲ್ಲಂಘನೆಯಾಗಿದೆ.

ಸಾರ್ವಜನಿಕ ಸೇವಕರಿಂದ ವಾಸ್ತವಿಕ ರಿಯಲ್ ಎಸ್ಟೇಟ್ ಮತ್ತು ಆತಿಥ್ಯ ದೊರೆಯಾಗಿ ಪರಿವರ್ತನೆಗೊಳ್ಳುವುದು ಎಸಿಬಿ ಈಗ ಕೆಡವಲು ಕೆಲಸ ಮಾಡುತ್ತಿರುವ ಸಂಶಯಾಸ್ಪದ ವಿಧಾನಗಳ ಆಳವಾಗಿ ಬೇರೂರಿರುವ ವ್ಯವಸ್ಥೆಯನ್ನು ಸೂಚಿಸುತ್ತದೆ. ಕಿಶನ್ ವಿರುದ್ಧ ತಿದ್ದುಪಡಿ ಮಾಡಿದ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(1)(ಬಿ) ಮತ್ತು 13(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸೆಕ್ಷನ್‌ಗಳು ಅಕ್ರಮವಾಗಿ ಶ್ರೀಮಂತರಾಗುವುದು ಮತ್ತು ಕ್ರಿಮಿನಲ್ ದುಷ್ಕೃತ್ಯಕ್ಕೆ ಸಂಬಂಧಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments