Thursday, May 14, 2026
Google search engine
Homeದೇಶಬೆಂಗಳೂರು-ವಿಜಯವಾಡ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ 4 ವಿಶ್ವದಾಖಲೆ!

ಬೆಂಗಳೂರು-ವಿಜಯವಾಡ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ 4 ವಿಶ್ವದಾಖಲೆ!

ಬೆಂಗಳೂರು-ಕಡಪ-ವಿಜಯವಾಡ ಎಕನಾಮಿಕ ಕಾರಿಡಾರ್ ರಾಷ್ಟೀಯ ಹೆದ್ದಾರಿ ನಿರ್ಮಾಣದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 4 ವಿಶ್ವದಾಖಲೆ ನಿರ್ಮಿಸಿದೆ.

ಜನವರಿ ೬ರಂದು ಆಂಧ್ರಪ್ರದೇಶದ ಪುಟಪರ್ತಿಯಲ್ಲಿ ಕಲ್ಲು-ಮರಳು ಮಿಶ್ರಿತ ಸಿದ್ಧಪಡಿಸಿದ ಕಾಂಕ್ರಿಟ್‌ ಬಳಸಿ 28.89 ಲೇನ್‌ ಕಿ.ಮೀ. ಉದ್ದದ ರಸ್ತೆಯನ್ನು 24 ಗಂಟೆಗಳಲ್ಲಿ ಪೂರ್ಣಗೊಳಿಸಿ ಮೊದಲ ವಿಶ್ವದಾಖಲೆ ನಿರ್ಮಾಣವಾಗಿತ್ತು. ಈ ರಸ್ತೆ 9.64 ಉದ್ದದ ಈ ರಸ್ತೆ ಮೂರು ಲೈನ್‌ ಹೊಂದಿತ್ತು. 24 ಗಂಟೆಗಳಲ್ಲಿ 10,655 ಮೆಟ್ರಿಕ್‌ ಟನ್‌ ಸಿದ್ಧಪಡಿಸಿದ ಕಾಂಕ್ರಿಟ್‌ ಬಳಸಿ ಒಂದೇ ದಿನದಲ್ಲಿ ಅತ್ಯಧಿಕ ಕಾಂಕ್ರಿಟ್‌ ಬಳಸಿದ ಮತ್ತೊಂದು ವಿಶ್ವದಾಖಲೆ ಬರೆಯಲಾಗಿತ್ತು.

ಬೆಂಗಳೂರು-ಕಡಪ- ವಿಜಯವಾಡ ಎಕನಾಮಿಕ ಕಾರಿಡಾರ್‌ ರಸ್ತೆಯಲ್ಲಿ ಒಂದೇ ದಿನ ಎರಡು ವಿಶ್ವದಾಖಲೆ ಆಗಿದ್ದು, ಇಡೀ ಜಗತ್ತಿನಲ್ಲೇ ಇಷ್ಟು ವೇಗವಾಗಿ ಹಾಗೂ ಅತೀ ಹೆಚ್ಚು ಕಾಂಕ್ರಿಟ್‌ ಬಳಸಿ 6 ಲೈನ್‌ ಗಳ ರಸ್ತೆ ನಿರ್ಮಿಸಿರುವುದು ಮೊದಲನೇಯ ಬಾರಿಯಾಗಿತ್ತು ಎಂದು ಪ್ರಾಧಿಕಾರ ಹೇಳಿಕೊಂಡಿದೆ.

ಜನವರಿ 11ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದೀಗ ಮತ್ತೆರಡು ಹೊಸ ವಿಶ್ವದಾಖಲೆ ಬರೆದಿದೆ. 156 ಲೇನ್‌ ಕಿ.ಮೀ. ಅಂದರೆ ಮೂರು ಲೈನ್‌ ಗಳ 52 ಕಿ.ಮೀ. ಉದ್ದದ ರಸ್ತೆಗೆ 57,500 ಮೆಟ್ರಿಕ್‌ ಟನ್‌ ಸೀಮೆಂಟ್‌ ಕಾಂಕ್ರಿಟ್‌ ಬಳಸಿ ರಸ್ತೆ ನಿರ್ಮಾಣ ಪೂರ್ಣಗೊಳಿಸಿದೆ. ಇದಕ್ಕೂ ಮುನ್ನ 84.4 ಲೇನ್‌ ಕಿ.ಮೀ. (2 ಲೈನ್‌ ಅಗಲದ 42.2 ಕಿ.ಮೀ. ಉದ್ದದ) ರಸ್ತೆ ಮಾಡಿದ್ದು ಇದುವರೆಗಿನ ದಾಖಲೆಯಾಗಿತ್ತು.

ಪ್ಯಾಕೇಜ್‌ 2 ಹಾಗೂ ಪ್ಯಾಕೇಜ್‌ 3 ಹೆಸರಿನಲ್ಲಿ ನಡೆದ ಎರಡೂ ಯೋಜನೆಗಳು ಗುಣಮಟ್ಟದಲ್ಲಿ ರಾಜೀ ಇಲ್ಲದೇ ಅತ್ಯಂತ ವೇಗವಾಗಿ ಪೂರ್ಣಗೊಂಡು ದಾಖಲೆಗಳು ನಿರ್ಮಾಣವಾಗಿದೆ ಎಂದು ಪ್ರಾಧಿಕಾರ ಹೇಳಿದೆ.

ಬೆಂಗಳೂರು-ಕಡಪ- ವಿಜಯವಾಡ ನಡುವಿನ 343 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ 6 ಲೇನ್‌ ಗಳನ್ನು ಹೊಂದಿದ್ದು, ಅತ್ಯಂತ ವೇಗವಾಗಿ ಹಾಗೂ ಸುರಕ್ಷಿತ ಪ್ರಯಾಣಕ್ಕೆ ಅನುಕೂಲಕರವಾಗಿದೆ. ಈ ಯೋಜನೆಯಲ್ಲಿ 17 ಆಂತರಿಕ ಬದಲಾವಣೆ, 10 ಕಡೆ ರಸ್ತೆ ಬದಿ ನಿಲುಗಡೆಗೆ ಅವಕಾಶ, 5.3 ಕಿ.ಮೀ. ಉದ್ದ ಸುರಂಗ ಮಾರ್ಗ, ಸುಮಾರು 21 ಕಿ.ಮೀ. ಅರಣ್ಯದ ನಡುವೆ ರಸ್ತೆ ಹಾದು ಹೋಗಲಿದೆ.

ಪುಟಪರ್ತಿಯಲ್ಲಿ ಮಂಗಳವಾರ ಸಾರ್ವಜನಿಕ ಸಭೆಯಲ್ಲಿ ಸಂತಸ ಹಂಚಿಕೊಂಡ ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಸತ್ಯ ಸಾಯಿ ಬಾಬಾ ಅವರ ಆಶೀರ್ವಾದದಿಂದಾಗಿ ಗುಣಮಟ್ಟದಲ್ಲಿ ಆಗಲಿ ಯಾವುದರಲ್ಲೂರಾಜೀ ಆಗದೇ ಸಂಘಟಿತ ಪ್ರಯತ್ನದಿಂದ ಅತ್ಯಂತ ವೇಗವಾಗಿ ಬೆಂಗಳೂರು- ವಿಜಯವಾಡ ಎಕನಾಮಿಕ್‌ ಕಾರಿಡಾರ್‌ ಯೋಜನೆ ಪೂರ್ಣಗೊಂಡಿದ್ದು, 4 ವಿಶ್ವದಾಖಲೆ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments