Saturday, June 27, 2026
Google search engine
Homeಕ್ರೀಡೆರಾಧಾ-ರಿಚಾ ಜೊತೆಯಾಟ: ಗುಜರಾತ್ ಗೆ 183 ರನ್ ಸವಲೊಡ್ಡಿದ ಆರ್ ಸಿಬಿ

ರಾಧಾ-ರಿಚಾ ಜೊತೆಯಾಟ: ಗುಜರಾತ್ ಗೆ 183 ರನ್ ಸವಲೊಡ್ಡಿದ ಆರ್ ಸಿಬಿ

ಕೆಳ ಕ್ರಮಾಂಕದಲ್ಲಿ ರಾಧಾ ಯಾದವ್ ಸಿಡಿಸಿದ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹಿಳೆಯರ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡಕ್ಕೆ 183 ರನ್ ಸವಾಲೊಡ್ಡಿದೆ.

ಅಹಮದಾಬಾದ್ ನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆರ್ ಸಿಬಿ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 182 ರನ್ ದಾಖಲಿಸಿತು.

ಗುಜರಾತ್ ದಾಳಿಗೆ ತತ್ತರಿಸಿದ ಆರ್ ಸಿಬಿ ತಂಡ ಒಂದು ಹಂತದಲ್ಲಿ 43 ರನ್ ಗೆ 4 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ನೆಲಕಚ್ಚಿದ ಆಡಿದ ರಾಧಾ ಯಾದವ್ ಅರ್ಧಶತಕ ಬಾರಿಸಿ ಪೈಪೋಟಿಯ ಮೊತ್ತ ಪೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.

ರಾಧಾ ಯಾದವ್ 47 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 66 ರನ್ ಬಾರಿಸಿದರು. ಅಲ್ಲದೇ ರಿಚಾ ಘೋಷ್ ಜೊತೆ 5ನೇ ವಿಕೆಟ್ ಗೆ 105 ರನ್ ಜೊತೆಯಾಟದಿಂದ ತಂಡವನ್ನು ಸುಭದ್ರ ಸ್ಥಿತಿಗೆ ತಲುಪಿದರು. ರಿಚಾ ಘೋಷ್ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 44 ರನ್ ಬಾರಿಸಿದ್ದಾಗ ಔಟಾಗಿ 6 ರನ್ ನಿಂದ ಅರ್ಧಶತಕ ವಂಚಿತರಾದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments