ತಪ್ಪುಗಳಿಂದ ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್ ಡಿಎ ಸರ್ಕಾರ ರಚನೆಯಾಗಿದ್ದು, ಯಾವಾಗ ಬೇಕಾದರೂ ಪತನಗೊಳ್ಳಬಹುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಾಂಬ್ ಸಿಡಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಪಡೆಯಲು ವಿಫಲವಾಗಿತ್ತು. ಮಿತ್ರ ಪಕ್ಷಗಳ ಸಹಾಯದಿಂದ ಸರ್ಕಾರ ರಚನೆ ಮಾಡಿದ್ದು, ಪ್ರಧಾನಿಯಾಗಿ ಮೂರನೇ ಬಾರಿ ಮೋದಿ ಅಧಿಕಾರ ಹಿಡಿದಿದ್ದರು.
ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಬಹುಮತದ ಸರ್ಕಾರ ಅಲ್ಲ. ಅಲ್ಪ ಸಂಖ್ಯಾತರ ಸರ್ಕಾರ. ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು. ಆದರೆ ದೇಶದ ಹಿತಾಸಕ್ತಿಯಿಂದ ಸರ್ಕಾರ ಬೀಳದಿರಲಿ ಎಂದು ಬಯಸುತ್ತೇವೆ. ದೇಶವನ್ನು ಒಗ್ಗೂಡಿಸಲು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಸಮಸ್ಯೆ ಏನು ಅಂದರೆ ಮೋದಿಗೆ ಎಲ್ಲವೂ ಸರಿಯಾಗಿ ನಡೆದುಕೊಂಡು ಹೋಗುವುದು ಬೇಕಿಲ್ಲ. ಆದರೆ ದೇಶವನ್ನು ಬಲಿಷ್ಠವನ್ನಾಗಿ ಮಾಡಲು ನಾವು ಅಗತ್ಯ ನೆರವು ನೀಡುತ್ತೇವೆ ಎಂದು ಖರ್ಗೆ ಸ್ಪಷ್ಟಪಡಿಸಿದರು.