ಮಾಂಸವನ್ನೇ ತಿನ್ನುತ್ತಾ 2 ದಿನದಲ್ಲಿ ಮನುಷ್ಯನ ಜೀವವನ್ನೇ ತೆಗೆಯುವ ಅಪರೂಪದ ಅಪಾಯಕಾರಿ ಬ್ಯಾಕ್ಟಿರಿಯಾ ಜಪಾನ್ ನಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ಆತಂಕ ಮೂಡಿಸಿದೆ.
ಕೊರೊನಾವೈರಸ್ ನಿಂದ ತತ್ತರಿಸಿದ್ದ ಇಡೀ ಜಗತ್ತು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದು, ಜಪಾನ್ ನಲ್ಲಿ ಕೋವಿಡ್ ನಿರ್ಬಂಧ ಸಡಿಲಿಸಿದ ನಂತರ ಈ ಹೊಸ ವೈರಸ್ ಪತ್ತೆಯಾಗಿದೆ.
ಸ್ಟ್ರೆಪೊಕೊಲ್ ಟಾಕ್ಸಿಕ್ ಶಾಕ್ಸ್ ಸಿಸ್ಟಮ್ (ಎಸ್ ಟಿಎಸ್ ಎಸ್) ಅತ್ಯಂತ ಆಕ್ರಮಣಕಾರಿ ಬ್ಯಾಕ್ಟಿರಿಯಾ ಆಗಿದ್ದು, ಇದು ದೇಹ ಪ್ರವೇಶಿಸಿದ ಕೇವಲ 48 ಗಂಟೆಯಲ್ಲಿ ವ್ಯಕ್ತಿ ಸಾವಿಗೀಡಾಗುತ್ತಾನೆ ಎಂದು ತಜ್ಞರು ಹೇಳಿದ್ದಾರೆ.
ಜೂನ್ 2ರವರೆಗೆ ಜಪಾನ್ ನಲ್ಲಿ 977 ಪ್ರಕರಣಗಳು ವರದಿಯಾಗಿದ್ದು, ಕಳೆದ ವರ್ಷ 941 ಪ್ರಕರಣಗಳು ದೃಢಪಟ್ಟಿದ್ದವು. 1999ರಿಂದ ಈ ಬ್ಯಾಕ್ಟಿರಿಯಾ ಬೆಳವಣಿಗೆ ಬಗ್ಗೆ ತಜ್ಞರು ಸಂಶೋಧನೆ ನಡೆಸುತ್ತಲೇ ಬಂದಿದ್ದಾರೆ.
ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಗೆ ಬೆಳಿಗ್ಗೆ ಪಾದದ ಬಳಿ ನೋವು ಕಾಣಿಸಿಕೊಂಡರೆ, ಮಧ್ಯಾಹ್ನ ಮೊಣಕಾಲಿನಲ್ಲಿ ನೋವು ಕಾಣಿಸಿಕೊಳ್ಳಲಿದೆ. 48 ಗಂಟೆಯಲ್ಲಿ ವ್ಯಕ್ತಿ ಸಾವಿಗೀಡಾಗುತ್ತಾನೆ. 50 ವರ್ಷ ಮೇಲ್ಪಟ್ಟವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದು ತಜ್ಞರು ವಿವರಿಸಿದ್ದಾರೆ.
ಈ ರೋಗಾಣು ಕಾಣಿಸಿಕೊಂಡ ನಂತರ ಜ್ವರ, ರಕ್ತದೊತ್ತಡ, ಉಸಿರಾಟದ ಸಮಸ್ಯೆ ಕಾಣಸಿಕೊಳ್ಳಲಿದ್ದು, ನಂತರ ಅಂಗಾಂಗ ವೈಫಲ್ಯಗಳು ಉಂಟಾಗಲಿವೆ. ದಿನದಿಂದ ದಿನಕ್ಕೆ ಅಭಿವೃದ್ಧಿ ಆಗುತ್ತಿರುವ ಈ ಬ್ಯಾಕ್ಟಿರಿಯಾ ಈ ವರ್ಷದ ಅಂತ್ಯದ ವೇಳೆಗೆ 2500 ಪ್ರಕರಣಗಳಿಗೆ ಏರಿಕೆಯಾಗಬಹುದು ಎಂದು ಊಹಿಸಲಾಗಿದೆ.