Friday, November 22, 2024
Google search engine
Homeತಾಜಾ ಸುದ್ದಿಪುರುಷನಾಗಿ ಮಲಗಿದ್ದ ಯುವಕ ಬೆಳಗ್ಗೆ ಎದ್ದಾಗ ಹೆಣ್ಣಾಗಿದ್ದ: ವೈದ್ಯನ ದೌರ್ಜನ್ಯಕ್ಕೆ ಬೆಚ್ಚಿದ ಜನ!

ಪುರುಷನಾಗಿ ಮಲಗಿದ್ದ ಯುವಕ ಬೆಳಗ್ಗೆ ಎದ್ದಾಗ ಹೆಣ್ಣಾಗಿದ್ದ: ವೈದ್ಯನ ದೌರ್ಜನ್ಯಕ್ಕೆ ಬೆಚ್ಚಿದ ಜನ!

ಚಿಕಿತ್ಸೆಗೆ ದಾಖಲಾಗಿದ್ದ 20 ವರ್ಷದ ಯುವಕ ಬೆಳಗ್ಗೆ ಎದ್ದಾಗ ಹೆಣ್ಣಾಗಿ ಬದಲಾಗಿದ್ದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಜರುಗಿದೆ.

ಮುಜಾಫರ್ ನಗರದ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಭಾರತೀಯ ಕಿಸಾನ್ ಸಂಘ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುತ್ತಿದೆ. ಇದೇ ವೇಳೆ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಘಾತ ವ್ಯಕ್ತವಾಗುತ್ತಿದೆ.

ಮಾನ್ಸೂರ್ ಪುರ್ ನಗರದ ಬೆಗ್ರಾಜ್ ಪುರ ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಸನಕ್ ಗ್ರಾಮದ 20 ವರ್ಷದ ಯುವಕ ಮುಜಾಹಿದ್ ವೈದ್ಯರ ಎಡವಟ್ಟಿನಿಂದ ಲಿಂಗ ಬದಲಾವಣೆಗೊಂಡು ಆಘಾತಕ್ಕೆ ಒಳಗಾಗಿದ್ದಾನೆ.

ಓಂಪ್ರಕಾಶ್ ಎಂಬ ವೈದ್ಯ ಲಿಂಗ ಪರಿವರ್ತನೆ ಮಾಡಿಕೊಳ್ಳುವಂತೆ ಯುವಕನಿಗೆ ದುಂಬಾಲು ಬಿದ್ದಿದ್ದ. ಆದರೆ ಅದಕ್ಕೆ ಆತ ಒಪ್ಪಿಗೆ ನೀಡಿರಲಿಲ್ಲ. ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾಗ ವೈದ್ಯ ಓಂಪ್ರಕಾಶ್ ಮೆಡಿಕಲ್ ಕಾಲೇಜಿನ ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳಿಗೆ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡುವಂತೆ ಸೂಚಿಸಿತ್ತು.

ವೈದ್ಯರ ಸೂಚನೆ ಮೇರೆಗೆ ಮುಜಾಹಿದ್ ಮಲಗಿದ್ದಾಗ ಆತನ ಅರಿವಿಗೆ ಬಾರದಂತೆ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಬಿಟ್ಟಿದ್ದಾರೆ. ಇದೀಗ ಮುಜಾಹಿದ್ದೀನ್ ಸೇರಿಸಿಕೊಳ್ಳಲು ಕುಟುಂಬದವರು ನಿರಾಕರಿಸುತ್ತಿದ್ದಾರೆ. ಆದರೆ ವೈದ್ಯ ಓಂಪ್ರಕಾಶ್ ನನ್ನ ಮನೆಯಲ್ಲಿ ನನ್ನ ಜೊತೆಗೆ ಇರು. ನನ್ನ ಆಸ್ತಿ ಕೊಡುತ್ತೇನೆ ಎಂದು ಮನವೊಲಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments