Thursday, June 25, 2026
Google search engine
Homeಕ್ರೀಡೆಫಿಫಾ ವಿಶ್ವಕಪ್‌ ಗೆ ಅರ್ಜೆಂಟೀನಾ ತಂಡ ಪ್ರಕಟ; ಲಿಯೊನೆಲ್‌ ಮೆಸ್ಸಿ ನಾಯಕ

ಫಿಫಾ ವಿಶ್ವಕಪ್‌ ಗೆ ಅರ್ಜೆಂಟೀನಾ ತಂಡ ಪ್ರಕಟ; ಲಿಯೊನೆಲ್‌ ಮೆಸ್ಸಿ ನಾಯಕ

ಫುಟ್ಬಾಲ್‌ ದಿಗ್ಗಜ ಲಿಯೊನೆಲ್‌ ಮೆಸ್ಸಿ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಅರ್ಜೆಂಟೀನಾ ತಂಡವನ್ನು ಮುನ್ನಡೆಸಲಿದ್ದಾರೆ.

38 ವರ್ಷದ ಲಿಯೊನೆಲ್‌ ಮೆಸ್ಸಿ ಅವರಿಗೆ 26 ಆಟಗಾರರ ತಂಡದಲ್ಲಿ ಸ್ಥಾನ ನೀಡಲಾಗಿದೆ. ಅಲ್ಲದೇ ನಾಯಕತ್ವದ ಜವಾಬ್ದಾರಿಯನ್ನೂ ನೀಡಲಾಗಿದೆ. ಈ ಮೂಲಕ ಮೆಸ್ಸಿ ಈ ಬಾರಿ ವಿಶ್ವಕಪ್‌ ನಲ್ಲಿ ಆಡುವ ಬಗ್ಗೆ ಇದ್ದ ಅನುಮಾನಗಳಿಗೆ ತೆರೆಬಿದ್ದಿದೆ.

8 ಬಾರಿಯ ವಿಶ್ವದ ಶ್ರೇಷ್ಠ ಫುಟ್ಬಾಲ್‌ ಆಟಗಾರ ಎಂಬ ಪ್ರಶಸ್ತಿಗೆ ಪಾತ್ರರಾಗಿರುವ ಮೆಸ್ಸಿ ದಾಖಲೆಯ ೬ನೇ ಬಾರಿ ವಿಶ್ವಕಪ್‌ ನಲ್ಲಿ ಆಡುವುದು ದೃಢಪಟ್ಟಂತಾಗಿದೆ.

ಕತಾರ್‌ ನಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ಅರ್ಜೆಂಟೀನಾ ಈ ಬಾರಿ ಹಾಲಿ ಚಾಂಪಿಯನ್‌ ಆಗಿ ಕಣಕ್ಕಿಳಿಯಲಿದೆ. ಈ ಬಾರಿ ಕಳೆದ ತಂಡದಲ್ಲಿದ್ದ ಪ್ರಮುಖ ಆಟಗಾರರಿಗೆ ಕೊಕ್‌ ನೀಡಲಾಗಿದೆ. ಅಲ್ಲದೇ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದು ತಂಡದ ಮೇಲೆ ಹೆಚ್ಚಿನ ಒತ್ತಡವಿದೆ.

18 ವರ್ಷದ ಮಾಸ್ಟಟುನುಟೊ ಭವಿಷ್ಯದ ಆಟಗಾರ ಎಂಬ ಕಾರಣಕ್ಕೆ ಆಯ್ಕೆ ಮಾಡಲಾಗಿದೆ.
ಜೂನ್‌ ೧೧ರಿಂದ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಜಂಟಿ ಆತಿಥ್ಯದಲ್ಲಿ ವಿಶ್ವಕಪ್‌ ಟೂರ್ನಿ ನಡೆಯಲಿದೆ. ಟೂರ್ನಿ ಆರಂಭವಾದ 5 ದಿನಗಳ ನಂತರ ಅರ್ಜೆಂಟೀನಾ ಅಲ್ಜಿರಿಯಾ ವಿರುದ್ಧ ಮೊದಲ ಪಂದ್ಯ ಆಡಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments