Monday, October 19, 2026
Google search engine
Homeದೇಶದುರ್ಗಾ ಪೂಜೆಯಲ್ಲಿ ದುರಂತದಲ್ಲಿ 19 ಮಂದಿ ಸಾವು: 9 ಮಂದಿ ಅರೆಸ್ಟ್‌

ದುರ್ಗಾ ಪೂಜೆಯಲ್ಲಿ ದುರಂತದಲ್ಲಿ 19 ಮಂದಿ ಸಾವು: 9 ಮಂದಿ ಅರೆಸ್ಟ್‌

ಕೋಲ್ಕತಾ: ಅತೀಯಾದ ಜನದಟ್ಟಣೆಯಿಂದ ಸಂಭವಿಸಿದ ನೂಕುನುಗ್ಗಲಿನಲ್ಲಿ 13 ಮಹಿಳೆಯರು ಹಾಗೂ ಒಂದು ಮಗು ಸೇರಿ 19 ಮಂದಿ ಮೃತಪಟ್ಟ ದುರಂತ ಘಟನೆ ಶನಿವಾರ ಸಂಜೆ ಕೊಲ್ಕತ್ತಾದಲ್ಲಿ ಸಂಭವಿಸಿದ್ದು, ಸಮಿತಿಯ 9 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನವರಾತ್ರಿಯ ಅಂಗವಾಗಿ ಕೋಲ್ಕತಾದ ಚೋರ್‌ಬಾಗನ್ ನಲ್ಲಿ ಸಾರ್ವಜನಿಕ ದುರ್ಗೋತ್ಸವ ಸಮಿತಿ ಹಮ್ಮಿಕೊಂಡಿದ್ದ ದುರ್ಗಾ ಪೂಜೆ ವೇಳೆ ಪೆಂಡಾಲ್‌ ಕುಸಿದಿದ್ದರಿಂದ ದುರಂತ ಸಂಭವಿಸಿದೆ. ಘಟನೆಯಲ್ಲಿ ೨೫ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಪೂಜಾ ಸ್ಥಳದಲ್ಲಿ ಹೊರ ಹೋಗುವ ಗೇಟ್‌ ಬಳಿ ಜನದಟ್ಟಣೆ ಹೆಚ್ಚಾಗಿದ್ದು, ಸಂಜೆ 7.30ರ ಸುಮಾರಿಗೆ ಮಳೆ ಸುರಿದಿದ್ದರಿಂದ ಜನರು ಹೊರಗೆ ಹೋಗಲು ನುಗ್ಗಿದ್ದರು. ಇದರಿಂದ ಪೂಜಾ ಪೆಂಡಾಲ್‌ ಕುಸಿದಿದೆ ಎಂದು ಹೇಳಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಕುಟುಂಬಗಳಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ತಲಾ 5 ಲಕ್ಷ ರೂ. ಪರಿಹಾರ ಮೊತ್ತ ಘೋಷಿಸಿದ್ದಾರೆ.

ದುರ್ಘಟನೆಯ ಕುರಿತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತೀವ್ರ ಆಘಾತ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ‘ಚೋರ್‌ಬಾಗನ್ ಪೂಜಾ ಪೆಂಡಾಲ್‌ನಲ್ಲಿ ನಡೆದ ಕಾಲ್ತುಳಿತದ ಘಟನೆಯು ನನಗೆ ತೀವ್ರ ಆಘಾತ ಹಾಗೂ ದುಃಖವನ್ನುಂಟು ಮಾಡಿದೆ’ ಎಂದು ಅವರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತೀವ್ರ ಆಘಾತ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ‘ಚೋರ್‌ಬಾಗನ್ ಪೂಜಾ ಪೆಂಡಾಲ್‌ನಲ್ಲಿ ನಡೆದ ಕಾಲ್ತುಳಿತದ ಘಟನೆಯು ನನಗೆ ತೀವ್ರ ಆಘಾತ ಹಾಗೂ ದುಃಖವನ್ನುಂಟು ಮಾಡಿದೆ’ ಎಂದು ಅವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments