Friday, November 22, 2024
Google search engine
Homeತಾಜಾ ಸುದ್ದಿ`ಕೇರಳಂ’ ಆಗಿ ರಾಜ್ಯದ ಹೆಸರು ಬದಲಾಯಿಸಿ ಕೇರಳ ವಿಧಾನಸಭೆ ನಿರ್ಣಯ ಅಂಗೀಕಾರ!

`ಕೇರಳಂ’ ಆಗಿ ರಾಜ್ಯದ ಹೆಸರು ಬದಲಾಯಿಸಿ ಕೇರಳ ವಿಧಾನಸಭೆ ನಿರ್ಣಯ ಅಂಗೀಕಾರ!

ಕೇರಳ ರಾಜ್ಯದ ಹೆಸರನ್ನು ಕೇರಳಂ ಆಗಿ ಬದಲಾವಣೆ ಮಾಡುವ ಕುರಿತು ಕೇರಳ ವಿಧಾನಸಭೆ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಿದೆ.

ಸೋಮವಾರ ನಡೆದ ಕೇರಳ ವಿಧಾನಸಭೆ ಅಧಿವೇಶನದಲ್ಲಿ ರಾಜ್ಯದ ಭಾಷೆಯಾದ ಮಲಯಾಳಂ ಪ್ರಕಾರ ಕೇರಳಂ ಆಗಿ ಮರು ನಾಮಕರಣ ಮಾಡುವ ನಿರ್ಣಯಕ್ಕೆ ಅವಿರೋಧ ನಿರ್ಣಯ ಕೈಗೊಳ್ಳಲಾಯಿತು.

ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಕೇರಳಂ ಆಗಿ ರಾಜ್ಯದ ಹೆಸರನ್ನು ಮರು ನಾಮಕರಣ ಮಾಡುವ ಕುರಿತು ಪ್ರಸ್ತಾಪ ಮಂಡಿಸಿದ್ದು, ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸಹಮತ ವ್ಯಕ್ತಪಡಿಸಿದ್ದರಿಂದ ಅವಿರೋಧ ನಿರ್ಣಯ ಕೈಗೊಳ್ಳಲಾಯಿತು.

2023 ಆಗಸ್ಟ್ ನಲ್ಲಿ ಕೇರಳಂ ಆಗಿ ರಾಜ್ಯದ ಹೆಸರು ಮರು ನಾಮಕರಣ ಮಾಡುವ ಪ್ರಸ್ತಾಪ ಮುಂದಿಡಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಪ್ರಸ್ತಾಪವನ್ನು ಮುಂದೂಡಲಾಗಿದ್ದು, ಸೋಮವಾರ ಮತ್ತೆ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲಾಯಿತು.

ಭಾಷಾವಾರು ಪ್ರಾಂತ್ಯವಾಗಿ 1956 ನವೆಂಬರ್ 1ರಂದು ಕೇರಳ ರಾಜ್ಯ ಅಸ್ತಿತ್ವಕ್ಕೆ ಬಂದಿತು. ಮಲಯಾಳಂ ಭಾಷಿಗರ ಪ್ರಾಬಲ್ಯ ಇರುವುದರಿಂದ ಈ ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು, ಮಲಯಾಳಂ ಭಾಷೆ ಪ್ರಕಾರ ಕೇರಳಂ ಆಗಬೇಕಿದ್ದು, ನವೆಂಬರ್ 1 ಕೇರಳ ಜನ್ಮದಿನದಂದು ಕೇರಳಂ ಆಗಿ ಮರು ನಾಮಕರಣ ಜಾರಿಗೆ ಬರಲಿದೆ ಎಂದು ಸಿಎಂ ಪಿಣರಾಯ್ ವಿಜಯನ್ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments