ಬದಲಿ ಆಟಗಾರ ಮ್ಯಾಟಿಯಾ ಜೆಕಾಗ್ನಿ ಹೆಚ್ಚುವರಿ ಆಟದಲ್ಲಿ ಸಿಡಿಸಿದ ಗೋಲಿನ ನೆರವಿನಿಂದ ಕ್ರೊವೇಶಿಯಾ ವಿರುದ್ಧ 1-1 ಗೋಲಿನಿಂದ ಡ್ರಾ ಸಾಧಿಸಿದ ಇಟಲಿ ತಂಡ ಯುರೋ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಪ್ರೀಕ್ವಾರ್ಟರ್ ಫೈನಲ್ ಗೆ ಅರ್ಹತೆ ಗಿಟ್ಟಿಸಿದೆ.
ಬ್ರೆಜಿಲ್ ನಲ್ಲಿ ನಡೆಯುತ್ತಿರುವ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಕ್ರೊವೇಶಿಯಾ ಪರ ಲೂಕಾ ಮಾರ್ಡಿಕ್ (55ನೇ ನಿಮಿಷ) ಒಂದು ಗೋಲು ಬಾರಿಸಿದರೆ, ಬದಲಿ ಆಟಗಾರನಾಗಿ ಇಟಲಿ ತಂಡದಲ್ಲಿ ಕಣಕ್ಕಿಳಿದ ಜೆಕಾಗ್ನಿ 90+8ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡಕ್ಕೆ ಸಮಬಲದ ಗೌರವ ತಂದುಕೊಟ್ಟರು.
ಉಕಾ ಮಾರ್ಡಿಕ್ ಪಂದ್ಯದ ಎರಡನೇ ಅವಧಿಯ ಆಟದ ಆರಂಭದಲ್ಲೇ ಪೆನಾಲ್ಟಿಯಲ್ಲಿ ಗೋಲು ಬಾರಿಸಿದರು. ಈ ಮೂಲಕ ಯುರೋಕಪ್ ಇತಿಹಾಸದಲ್ಲೇ ಗೋಲು ಗಳಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.
ಡ್ರಾ ಸಾಧಿಸುವ ಮೂಲಕ ಇಟಲಿ ಆಡಿದ 3 ಪಂದ್ಯಗಳಲ್ಲಿ ತಲಾ 1 ಗೆಲುವು, ಸೋಲು ಹಾಗೂ ಡ್ರಾದೊಂದಿಗೆ 4 ಅಂಕ ಸಂಪಾದಿಸಿ ಎರಡನೇ ಸ್ಥಾನಿಯಾಗಿ 16ರ ಘಟ್ಟಕ್ಕೆ ಪ್ರವೇಶಿಸಿತು. ಕ್ರೊವೇಶಿಯಾ 2 ಡ್ರಾ ಹಾಗೂ 1 ಸೋಲಿನೊಂದಿಗೆ 2 ಅಂಕದೊಂದಿಗೆ 3ನೇ ಸ್ಥಾನಿಯಾಗಿ ಟೂರ್ನಿಯಿಂದ ಹೊರಬಿದ್ದಿತು.