ಪೋಲೆಂಡ್ ವಿರುದ್ಧ ಗೆಲುವಿನ ಅವಕಾಶ ಕೈ ಚೆಲ್ಲಿದರೂ ಯುರೋ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಪ್ರೀಕ್ವಾರ್ಟರ್ ಫೈನಲ್ ಗೆ ಲಗ್ಗೆ ಹಾಕಿದೆ.
ಡ್ರಾಟ್ ಮಂಡ್ ಮೈದಾನದಲ್ಲಿ ಮಂಗಳವಾರ ನಡೆದ ಡಿ ಗುಂಪಿನ ಪಂದ್ಯದಲ್ಲಿ ಪೋಲೆಂಡ್ ವಿರುದ್ಧ ಫ್ರಾನ್ಸ್ 1-1 ಗೋಲಿನಿಂದ ಡ್ರಾ ಸಾಧಿಸಿದ್ದರಿಂದ ಗುಂಪಿನಲ್ಲಿ ಎರಡನೇ ಸ್ಥಾನಿಯಾಗಿ 16ರ ಘಟ್ಟ ಪ್ರವೇಶಿಸಿತು.
ಮತ್ತೊಂದು ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ 3-2ರಿಂದ ಗೆಲುವು ದಾಖಲಿಸಿದ ಆಸ್ಟ್ರೀಯಾ ತಂಡ ಅಗ್ರಸ್ಥಾನಿಯಾಗಿ ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಆಸ್ಟ್ರೀಯಾ ಆಡಿದ 3 ಪಂದ್ಯಗಳಿಂದ 2 ಗೆಲುವು, 1 ಸೋಲಿನೊಂದಿಗೆ 6 ಅಂಕದೊಂದಿಗೆ ಅಗ್ರಸ್ಥಾನ ಪಡೆದರೆ, 1 ಅಂಕದಿಂದ ಹಿಂದೆ ಬಿದ್ದ ಫ್ರಾನ್ಸ್ 2ನೇ ಸ್ಥಾನ ಗಳಿಸಿತು.
ಪಂದ್ಯದ ಮೊದಲ ಅವಧಿಯ ಆಟ ನೀರಸವಾಗಿದ್ದು, ಯಾವುದೇ ಗೋಲು ದಾಖಲಾಗಲಿಲ್ಲ. ಎರಡನೇ ಅವಧಿಯ ಆಟದಲ್ಲಿ ಒಟ್ಟಾರೆ 56ನೇ ನಿಮಿಷದಲ್ಲಿ ಪೆನಾಲ್ಟಿಯಲ್ಲಿ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ನಂತರ ರಾಬರ್ಟ್ ಲೆವಾಂಡೊವಸ್ಕಿ 79ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿ ತಂಡಕ್ಕೆ ಸಮಬಲದ ಗೌರವ ತಂದುಕೊಟ್ಟರು.
ಫ್ರಾನ್ಸ್ ವಿರುದ್ಧ ಡ್ರಾ ಸಾಧಿಸಿದರೂ ಪೋಲೆಂಡ್ ಪ್ರೀಕ್ವಾರ್ಟರ್ ಫೈನಲ್ ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಫ್ರಾನ್ಸ್ ತಂಡದ ಸ್ಟಾರ್ ಆಟಗಾರ ಕೈಲಿನ್ ಮಬಾಪ್ಪೆ ಗಾಯಗೊಂಡು ಹಿಂದಿನ ಪಂದ್ಯದಿಂದ ಹೊರಗುಳಿದಿದ್ದರು. ಈ ಪಂದ್ಯದಲ್ಲಿ ಕಣಕ್ಕಿಳಿದಿದ್ದೂ ಅಲ್ಲದೇ ಪಂದ್ಯದ 56ನೇ ನಿಮಿಷದಲ್ಲಿ ಸಿಕ್ಕಿದ ಪೆನಾಲ್ಟಿಯಲ್ಲಿ ಗೋಲು ದಾಖಲಿಸಿದರು. ತಂಡಕ್ಕೆ ಅಗತ್ಯವಾದ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.