Kannadavahini

ಬಾರಿಸು ಕನ್ನಡ ಡಿಂಡಿಮವ

kannada vahini

ಬೆಂಗಳೂರಿನಲ್ಲಿ ಭೀಕರ ಅಪಘಾತ: ಡಿಕ್ಕಿ ಹೊಡೆದ ಲಾರಿಗಳು ಕಾರಿನ ಮೇಲೆ ಬಿದ್ದು 6 ಮಂದಿ ದುರ್ಮರಣ

ಎರಡು ಲಾರಿಗಳು ಪರಸ್ಪರ ಡಿಕ್ಕಿ ಹೊಡೆದು ಕಾರಿನ ಮೇಲೆ ಬಿದ್ದಿದ್ದರಿಂದ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ಮೃತಪಟ್ಟ ದಾರುಣ ಘಟನೆ ಬೆಂಗಳೂರು ಹೊರವಲಯದಲ್ಲಿ ಸಂಭವಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ತಾಳೇಕೆರೆ ಎಂಬಲ್ಲಿ ಶನಿವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಎರಡು ಲಾರಿಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದು,…

ಮಹಾರಾಷ್ಟ್ರ ಸಿಎಂ ಹೆಸರು ಘೋಷಿಸದೇ ನಾಳೆ ಪ್ರಮಾಣ ವಚನಕ್ಕೆ ಸಿದ್ಧತೆ!

ಮುಖ್ಯಮಂತ್ರಿ ಯಾರೆಂದು ಇನ್ನೂ ನಿಶ್ಚಯವಾಗದಿದ್ದರೂ ಸಂಭಾವ್ಯ ಸಿಎಂ ಪದಗ್ರಹಣದ ತಯಾರಿ ಮಾತ್ರ ಜೋರಾಗಿ ನಡೆದಿದೆ. ಡಿಸೆಂಬರ್ 5ರಂದು ಮಹಾರಾಷ್ಟ್ರದ ಹೊಸ ಮಹಾಯುತಿ ಸರ್ಕಾರದ ಪ್ರಮಾಣವಚನ ಸಮಾರಂಭಕ್ಕಾಗಿ ಮುಂಬೈನ ಆಜಾದ್ ಮೈದಾನದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಈ ಕಾರ್ಯಕ್ರಮದಲ್ಲಿ ಪಿಎಂ ಭಾಗವಹಿಸುವ ನಿರೀಕ್ಷೆಯಿದೆ. ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿಯಲ್ಲಿ ಪರಿಗಣಿಸಲಾಗುತ್ತಿದೆ, ಆದರೆ…

Benagluru ಬೆಂಗಳೂರಿನ ಸ್ಫೋಟದ ರೂವಾರಿ ಲಷ್ಕರೆ ಉಗ್ರ ಭಾರತಕ್ಕೆ ಹಸ್ತಾಂತರ!

ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಗಳನ್ನು ನಡೆಸಿದ ವಿಧ್ವಂಸಕ ಕೃತ್ಯ ಎಸಗಿದ್ದ ಲಷ್ಕರೆ ಉಗ್ರನನ್ನು ಭಾರತಕ್ಕೆ ದಕ್ಷಿಣ ಆಫ್ರಿಕಾದ ರಾಂಡ್ವಾ ದೇಶ ಹಸ್ತಂತರಿಸಿದೆ. ನಿಷೇಧಿತ ಲಷ್ಕರೆ ಇ ತೋಯ್ಬಾ ಸಂಘಟನೆಯ ಸಲ್ಮಾನ್ ರೆಹಮಾನ್ ಖಾನ್ ನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ ಸಲ್ಮಾನ್ ಇದಕ್ಕಾಗಿ ಜೈಲು ಕೈದಿಗಳನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದ. ರ್ವಾಂಡಾದ ರಾಜಧಾನಿ…

BPL CARD ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಮತ್ತೆ ನೀಡುತ್ತೇವೆ: ಡಿಸಿಎಂ ಡಿಕೆ ಶಿವಕುಮಾರ್ ಅಭಯ

ನಮ್ಮ ಸರ್ಕಾರ ಇರುವುದೇ ಬಡವರಿಗಾಗಿ. ಬಡವರ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಅವರಿಗೆ ಮತ್ತೆ ನೀಡುತ್ತೇವೆ. ಅರ್ಹರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಹರ ಬಿಪಿಎಲ್ ಕಾರ್ಡ್ ಗಳು ಕೂಡ ರದ್ದಾಗುತ್ತಿವೆ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದರು. ಬಿಪಿಎಲ್ ಕಾರ್ಡ್…

ಭಾರತೀಯ ವಾಯುಪಡೆ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ!

ಕೇಂದ್ರ ಸರ್ಕಾರ ಭಾರತೀಯ ವಾಯುಪಡೆ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರನ್ನು ನೇಮಿಸಿದ್ದು, ಸೆಪ್ಟೆಂಬರ್ 30ರಂದು ಪದಗ್ರಹಣ ಮಾಡಲಿದ್ದಾರೆ. ಸಪ್ಟೆಂಬರ್ 30ರಂದು ಮಧ್ಯಾಹ್ನದ ನಂತರ ವಾಯುಪಡೆ ಮುಖ್ಯಸ್ಥರಾಗಿ ಅಮರ್ ಪ್ರೀತ್ ಸಿಂಗ್ ಅಧಿಕಾರ ಸ್ವೀಕರಿಸಲಿದ್ದು, ಇದೇ ದಿನ ನಿವೃತ್ತರಾಗಲಿರುವ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ತೆರವು ಮಾಡಿದ ಸ್ಥಾನವನ್ನು ಅಲಂಕರಿಸಲಿದ್ದಾರೆ….

ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ ಡಿಸಿಎಂ ಡಿಕೆ ಶಿವಕುಮಾರ್ ಸೇರಿ 140 ಜನಪ್ರತಿನಿಧಿಗಳು: ಆರ್ ಟಿಐನಲ್ಲಿ ಬಹಿರಂಗ

ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ರಾಮಲಿಂಗಾ ರೆಡ್ಡಿ, ಕೆಎಚ್ ಮುನಿಯಪ್ಪ ಸೇರಿ 8 ಸಚಿವರು ಸೇರಿದಂತೆ 140 ಶಾಸಕರು ಹಾಗೂ ವಿಧಾಪರಿಷತ್ ಸದಸ್ಯರು ಲೋಕಾಯುಕ್ತಕ್ಕೆ 2023-24ನೇ ಸಾಲಿನ ಆಸ್ತಿ ವಿವರ ನೀಡಿಲ್ಲ! ನೈಜ ಹೊರಾಟಗಾರರ ವೇದಿಕೆ ಸಂಚಾಲಕ ಎಚ್.ಎಂ.ವೆಂಕಟೇಶ್ ಸಲ್ಲಿಸಿದ ಆರ್ ಟಿಐನಲ್ಲಿ ಲೋಕಾಯುಕ್ತ ಮಾಹಿತಿ ನೀಡಿದ್ದು 88 ಶಾಸಕರು ಹಾಗೂ 52 ವಿಧಾನ ಪರಿಷತ್…

ಪ್ಯಾರಾಲಿಂಪಿಕ್ಸ್: ನಿತೀಶ್, ಸುಹಾಸ್ ಫೈನಲ್ ಗೆ, ಭಾರತಕ್ಕೆ 2 ಕನಿಷ್ಠ ಬೆಳ್ಳಿ ಖಚಿತ!

ಭಾರತದ ನಿತೀಶ್ ಕುಮಾರ್ ಮತ್ತು ಸುಹಾಸ್ ಯತಿರಾಜ್ ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಪ್ರತ್ಯೇಕವಾಗಿ ಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಕನಿಷ್ಠ 2 ಬೆಳ್ಳಿ ಪದಕ ಖಚಿತಪಡಿಸಿದ್ದಾರೆ. ಭಾನುವಾರ ನಡೆದ ಪುರುಷರ ಎಸ್ ಎಲ್ 3 ವಿಭಾಗದಲ್ಲಿ ನಿತೀಶ್ ಕುಮಾರ್ ಮತ್ತು ಎಸ್ ಎಲ್ 4 ವಿಭಾಗದಲ್ಲಿ ಸುಹಾಸ್ ಯತಿರಾಜ್ ಫೈನಲ್ ಪ್ರವೇಶಿಸಿದ್ದಾರೆ. ಭಾರತದ ಮತ್ತೊಬ್ಬ ಸ್ಪರ್ಧಿ…

ರಾಜ್ಯದಲ್ಲಿ 9,357 ಗ್ರಾ.ಪಂ. ಸದಸ್ಯರು ಅನಕ್ಷರಸ್ಥರು: ಸಚಿವ ಪ್ರಿಯಾಂಕ್ ಖರ್ಗೆ

ಗ್ರಾಮ ಪಂಚಾಯಿತಿ ಅನಕ್ಷರಸ್ಥ ಚುನಾಯಿತ ಪ್ರತಿನಿಧಿಗಳನ್ನು ಅಕ್ಷರಸ್ಥನ್ನಾಗಿಸುವ ʼಸಾಕ್ಷರ ಸನ್ಮಾನʼ ಕಾರ್ಯಕ್ರಮ ಸೆಪ್ಟೆಂಬರ್‌ 1ರಿಂದ ರಾಜ್ಯದಾದ್ಯಂತ ಆರಂಭವಾಗಲಿದ್ದು, 6346 ಮಂದಿ ಅನಕ್ಷರಸ್ಥ ಚುನಾಯಿತ ಪ್ರತಿನಿಧಿಗಳು ಅಕ್ಷರ ಕಲಿಯುವ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ. ರಾಜ್ಯದಲ್ಲಿ 94,775 ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳಿದ್ದು,…

ಜಮ್ಮು ಕಾಶ್ಮೀರದಲ್ಲಿ 3 ಉಗ್ರರ ಹತ್ಯೆಗೈದ ಭಾರತೀಯ ಸೇನೆ!

ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಕುಪ್ವಾರಾ ಜಿಲ್ಲೆಯಲ್ಲಿ ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿಯಾಗಿ ನಡೆಸಿದ 2 ಪ್ರತ್ಯೇಕ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಗುಪ್ತಚರ ಇಲಾಖೆಯ ಸ್ಪಷ್ಟ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದ್ದು, ಆಗಸ್ಟ್ 24ರಿಂದ 29ರವರೆಗೆ…

ಗ್ರಾಮದ ಉತ್ಸವದ ವೇಳೆ ದುರಂತ: ಪ್ರಸಾದ ಸೇವಿಸಿ ಮೂವರು ಭಕ್ತರ ಸಾವು

ಗ್ರಾಮದ ಉತ್ಸವದ ಸಂದರ್ಭದಲ್ಲಿ ನೀಡಲಾಗಿದ್ದ ಪ್ರಸಾದ ಸೇವಿಸಿದ ಮೂವರು ವಾಂತಿ ಭೇದಿಯಿಂದ ಮೃತಪಟ್ಟ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಸಂಭವಿಸಿದೆ. ಮಧುಗಿರಿ ತಾಲೂಕಿನ ಬುಳಸಂದ್ರ ಗ್ರಾಮದಲ್ಲಿ ನಡೆದ ದೇವರ ಉತ್ಸವದ ವೇಳೆ ವಿತರಣೆ ಮಾಡಲಾಗಿದ್ದ ಪ್ರಸಾದ ಸೇವಿಸಿ 11ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ದಾಖಲಿಸಲಾಗಿದ್ದ 11 ಮಂದಿಯಲ್ಲಿ ಮೂವರು…